ಚಿನ್ನವನ್ನು ಎಟಿಎಂ ಯಂತ್ರದಲ್ಲಿ ಹಾಕಿದರೆ ಅದಕ್ಕೆ ಅನುಗುಣವಾದ ಹಣ ಬ್ಯಾಂಕ್‌ ಖಾತೆಗೆ ವರ್ಗ

KannadaprabhaNewsNetwork |  
Published : Apr 21, 2025, 12:47 AM ISTUpdated : Apr 21, 2025, 06:30 AM IST
ಚೀನಾ | Kannada Prabha

ಸಾರಾಂಶ

ಚೀನೀಯರು ಏನೇನೋ ಆವಿಷ್ಕರಿಸುತ್ತಿರುತ್ತಾರೆ. ಇದೀಗ ಅದಕ್ಕೆ ಹೊಸ ಸೇರ್ಪಡೆ ಚಿನ್ನ ಕರಗಿಸಿ ಹಣ ನೀಡುವ ಎಟಿಎಂ!

 ಬೀಜಿಂಗ್‌: ಚೀನೀಯರು ಏನೇನೋ ಆವಿಷ್ಕರಿಸುತ್ತಿರುತ್ತಾರೆ. ಇದೀಗ ಅದಕ್ಕೆ ಹೊಸ ಸೇರ್ಪಡೆ ಚಿನ್ನ ಕರಗಿಸಿ ಹಣ ನೀಡುವ ಎಟಿಎಂ!

ಹೌದು. ಶಾಂಘೈನಲ್ಲಿರುವ ಹೊಸ ಎಟಿಎಂ ಜಗತ್ತಿನ ಗಮನ ಸೆಳೆಯುತ್ತಿದೆ. ಈ ಯಂತ್ರವನ್ನು ಮೊದಲು ಅಂತಾರಾಷ್ಟ್ರೀಯ ಗಮನಕ್ಕೆ ತಂದವರು ಟರ್ಕಿಶ್ ತಂತ್ರಜ್ಞಾನ ಪ್ರಭಾವಿ ತನ್ಸು ಯೆಗೆನ್‌.

‘ಶಾಂಘೈನಲ್ಲಿರುವ ಚಿನ್ನದ ಎಟಿಎಂ ಚಿನ್ನವನ್ನು ಕರಗಿಸುತ್ತದೆ ಮತ್ತು ಅದರ ತೂಕಕ್ಕೆ ಅನುಗುಣವಾದ ಮೊತ್ತವನ್ನು ನಿಮ್ಮ ಬ್ಯಾಂಕ್ ಖಾತೆಗೆ ವರ್ಗಾಯಿಸುತ್ತದೆ’ ಎಂದು ಟ್ವೀಟ್‌ ಮಾಡಿದ್ದಾರೆ.

ಕಾರ್ಯನಿರ್ವಹಣೆ ಹೇಗೆ?:

ಈ ಎಟಿಎಂನಲ್ಲಿ ಚಿನ್ನದ ಆಭರಣ ಹಾಕಬೇಕು. ಆಗ 1,200 ಡಿಗ್ರಿ ತಾಪಮಾನದಲ್ಲಿ ಚಿನ್ನ ಎಟಿಎಂ ಯಂತ್ರದಲ್ಲೇ ಕರಗುತ್ತದೆ. ಚಿನ್ನದ ಶುದ್ಧತೆಯನ್ನು ತಕ್ಷಣವೇ ಹೇಳುತ್ತದೆ, ನೇರ ಬೆಲೆಯನ್ನು ಸಹ ತೋರಿಸುತ್ತದೆ. ಬ್ಯಾಂಕ್‌ ಖಾತೆ ವಿವರ ನಮೂದಿಸಿದಾಗ ಅದಕ್ಕೆ ಅನುಗುಣವಾದ ಮೌಲ್ಯದ ಹಣ ಬ್ಯಾಂಕ್‌ ಖಾತೆಗೆ ವರ್ಗಾವಣೆ ಆಗುತ್ತದೆ. ಈ ಎಟಿಎಂನ ಈ ವೈಶಿಷ್ಟ್ಯಗಳನ್ನು ಗ್ರಾಹಕರು ತುಂಬಾ ಇಷ್ಟಪಡುತ್ತಿದ್ದಾರೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಮುಸ್ಲಿಮರು ಸೂರ್‍ಯನಮಸ್ಕಾರ ಮಾಡ್ಬೇಕು : ಹೊಸಬಾಳೆ ಕರೆ
ಮರುಭೂಮಿ ಸೌದಿಯಲ್ಲಿ ಹಿಮಪಾತ, ಮಳೆ!