ಆಂಧ್ರ ಪ್ರದೇಶದ ಮಾಜಿ ಸಿಎಂ ಜಗನ್‌ ಮೋಹನ್‌ ರೆಡ್ಡಿ ಅಧಿಕಾರಾವಧಿಯಲ್ಲಿ 3.62 ಕೋಟಿ ರು. ಎಗ್‌ಪಫ್‌ ಹಗರಣ!

KannadaprabhaNewsNetwork |  
Published : Aug 22, 2024, 12:50 AM ISTUpdated : Aug 22, 2024, 05:03 AM IST
ಎಗ್‌ಪಫ್‌ | Kannada Prabha

ಸಾರಾಂಶ

ಆಂಧ್ರ ಪ್ರದೇಶದ ಮಾಜಿ ಸಿಎಂ ಜಗನ್‌ ಮೋಹನ್‌ ರೆಡ್ಡಿ ಅಧಿಕಾರಾವಧಿಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳ ಪಟ್ಟಿ ತೆರೆದಿಡುವುದನ್ನು ಮುಂದುವರೆಸಿರುವ ಆಡಳಿತಾರೂಢ ಟಿಡಿಪಿ, ಎಗ್‌ ಪಫ್‌ ಸೇವನೆಗಾಗಿ ಜಗನ್‌ ಸರ್ಕಾರ 5 ವರ್ಷದಲ್ಲಿ 3.62 ಕೋಟಿ ರು. ಖರ್ಚು ಮಾಡಿರುವುದಾಗಿ ಆರೋಪಿಸಿದೆ.

ವಿಜಯವಾಡ: ಆಂಧ್ರ ಪ್ರದೇಶದ ಮಾಜಿ ಸಿಎಂ ಹಾಗೂ ವೈಎಸ್ಸಾರ್ ಕಾಂಗ್ರೆಸ್‌ ನಾಯಕ ಜಗನ್‌ ಮೋಹನ್‌ ರೆಡ್ಡಿ ಅಧಿಕಾರಾವಧಿಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳ ಪಟ್ಟಿ ತೆರೆದಿಡುವುದನ್ನು ಮುಂದುವರೆಸಿರುವ ಆಡಳಿತಾರೂಢ ಟಿಡಿಪಿ, ಎಗ್‌ ಪಫ್‌ ಸೇವನೆಗಾಗಿ ಜಗನ್‌ ಸರ್ಕಾರ 5 ವರ್ಷದಲ್ಲಿ 3.62 ಕೋಟಿ ರು. ಖರ್ಚು ಮಾಡಿರುವುದಾಗಿ ಆರೋಪಿಸಿದೆ.

ಇದರ ಪ್ರಕಾರ ಸಿಎಂ ಕಚೇರಿ ಪ್ರತಿ ವರ್ಷ ಇದಕ್ಕಾಗಿ 72 ಲಕ್ಷ ರು. ವ್ಯಯಿಸಿ 20 ರು. ಬೆಲೆಯ ಎಗ್‌ಪಫ್‌ ತರಿಸುತ್ತಿತ್ತು. 5 ವರ್ಷದಲ್ಲಿ 18 ಲಕ್ಷ ಎಗ್‌ಪಫ್‌ ತಿನ್ನಲಾಗಿದೆ. ಅಂದರೆ ದಿನಕ್ಕೆ 993 ಎಗ್‌ಪಫ್‌ ತಿಂದಂತೆ. ಇದು ಎಗ್‌ಪಫ್‌ ಹಗರಣ ಇದ್ದಂತೆ ಎಂದು ತೆಲುಗುದೇಶಂ ಟೀಕಿಸಿದೆ.

ಜಗನ್‌ ತಮ್ಮ ವೈಯುಕ್ತಿಕ ಸುಖಕ್ಕಾಗಿ ಸಾರ್ವಜನಿಕ ನಿಧಿಯನ್ನು ದುರುಪಯೋಗಪಡಿಸಿಕೊಂಡಿರುವ ಬಗ್ಗೆ ನಡೆಯುತ್ತಿರುವ ತನಿಖೆಯಲ್ಲಿ ಈ ಮಾಹಿತಿ ಬಹಿರಂಗವಾಗಿದೆ ಎಂದು ಅದು ಹೇಳಿದೆ. ಈ ಮೊದಲು ಜಗನ್‌ ಜನರ ದುಡ್ಡಿನಲ್ಲಿ ಖಾಸಗಿ ಅರಮನೆ ನಿರ್ಮಿಸಿಕೊಂಡಿದ್ದ ಬಗ್ಗೆಯೂ ಆರೋಪಿಸಲಾಗಿತ್ತು.

ಆದರೆ ಈ ಆರೋಪವನ್ನು ಜಗನ್‌ರ ವೈಎಸ್ದಾರ್‌ ಕಾಂಗ್ರೆಸ್‌ ಪಕ್ಷ ತಳ್ಳಿಹಾಕಿದೆ. 2014ರಿಂದ 2019ರವರೆ ನಾಯ್ಡು ಸ್ನ್ಯಾಕ್ಸ್‌ಗೆಂದು 8.5 ಕೋಟಿ ರು. ಖರ್ಚು ಮಾಡಿದ್ದರು ಎಂದು ಪ್ರತ್ಯಾರೋಪ ಮಾಡಿದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಭಾಗವತ್‌ ವಿರುದ್ಧ ನ್ಯೂಯಾರ್ಕಲ್ಲಿ ಖಲಿಸ್ತಾನಿ ಉಗ್ರರಿಂದ ಪ್ರತಿಭಟನೆ
ಇಡ್ಲಿ ಮಾರುವ ಬೆಂಗಳೂರಿನ ನಿಂಗಮ್ಮಗೆ ಮೋದಿ ಶಹಬ್ಬಾಸ್!