ಆಂಧ್ರ : ಕೆಲಸದ ಅವಧಿ 9ರಿಂದ 10 ಗಂಟೆಗೆ ಹೆಚ್ಚಳ

KannadaprabhaNewsNetwork |  
Published : Jun 08, 2025, 01:43 AM ISTUpdated : Jun 08, 2025, 04:38 AM IST
ಆಂಧ್ರ | Kannada Prabha

ಸಾರಾಂಶ

ಹೂಡಿಕೆ ಸೆಳೆಯಲು ಕರ್ನಾಟಕದೊಂದಿಗೆ ಪೈಪೋಟಿಗೆ ಇಳಿದಿರುವ ಆಂಧ್ರಪ್ರದೇಶದಲ್ಲಿ, ಗರಿಷ್ಠ ಕೆಲಸದ ಅವಧಿಯನ್ನು 9 ಗಂಟೆಯಿಂದ 10 ಗಂಟೆಗೆ ಹೆಚ್ಚಿಸಲಾಗಿದೆ.  

ಅಮರಾವತಿ: ಹೂಡಿಕೆ ಸೆಳೆಯಲು ಕರ್ನಾಟಕದೊಂದಿಗೆ ಪೈಪೋಟಿಗೆ ಇಳಿದಿರುವ ಆಂಧ್ರಪ್ರದೇಶದಲ್ಲಿ, ಗರಿಷ್ಠ ಕೆಲಸದ ಅವಧಿಯನ್ನು 9 ಗಂಟೆಯಿಂದ 10 ಗಂಟೆಗೆ ಹೆಚ್ಚಿಸಲಾಗಿದೆ. ರಾಜ್ಯದಲ್ಲಿ ವ್ಯಾಪಾರವನ್ನು ಸುಲಭಗೊಳಿಸಲು ಮತ್ತು ಹೂಡಿಕೆದಾರರನ್ನು ಸೆಳೆಯಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಸರ್ಕಾರ ಹೇಳಿದೆ.

ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ಸಚಿವ ಕೆ. ಪಾರ್ಥಸಾರಥಿ ಮಾಹಿತಿ ನೀಡಿ, ‘ಕೆಲಸಗಾರರು ಮತ್ತು ಹೂಡಿಕೆದಾರರಿಗೆ ಅನುಕೂಲ ಮಾಡಿಕೊಡಲು ಕಾರ್ಮಿಕ ಕಾನೂನುಗಳನ್ನು ತಿದ್ದುಪಡಿ ಮಾಡಲು ನಿರ್ಧರಿಸಲಾಗಿದೆ. ಕೆಲಸ ಸಮಯವನ್ನು 9ರಿಂದ 10 ತಾಸಿಗೆ ಏರಿಸಲಾಗಿದೆ. ಸೆಕ್ಷನ್‌ 55ರ ಅಡಿಯಲ್ಲಿ, 5 ಗಂಟೆ ಕೆಲಸದ ನಡುವೆ 1 ಗಂಟೆ ವಿಶ್ರಾಂತಿ ನೀಡಲಾಗುತ್ತಿತ್ತು, ಅದನ್ನೀಗ 6 ತಾಸಿಗೊಮ್ಮೆ ನೀಡಲಾಗುವುದು.

 75 ಗಂಟೆಗಳಿದ್ದ ಹೆಚ್ಚುವರಿ ಅವಧಿ ಕೆಲಸ (ಒ.ಟಿ.) ಮಿತಿಯನ್ನು ಈಗ 144 ಗಂಟೆಗೆ ಏರಿಸಲಾಗಿದೆ, ಮಹಿಳೆಯರಿಗೆ ರಾತ್ರಿ ಪಾಳೆಯಲ್ಲಿ ಕೆಲಸ ಮಾಡಲು ಅವಕಾಶ ನೀಡಲಾಗಿದೆ’ ಎಂದು ಮಾಹಿತಿ ನೀಡಿದರು. ಇದರಿಂದಾಗುವ ಅನುಕೂಲಗಳ ಬಗ್ಗೆಯೂ ವಿವರಿಸುತ್ತಾ, ‘ಈ ತಿದ್ದುಪಡಿಯಿಂದಾಗಿ ಕಾರ್ಖಾನೆಗಳಲ್ಲಿ ಹೂಡಿಕೆ ಮಾಡುವವರು ನಮ್ಮ ರಾಜ್ಯಕ್ಕೆ ಬರುತ್ತಾರೆ. ಇದರಿಂದ ಕಾರ್ಮಿಕರಿಗೂ ಅಧಿಕ ಗಳಿಕೆಗೆ ಅನುಕೂಲ. ಅಂತೆಯೇ, ಮಹಿಳೆಯರನ್ನು ಆರ್ಥಿಕವಾಗಿ ಮತ್ತು ಕೈಗಾರಿಕಾ ಕ್ಷೇತ್ರದಲ್ಲಿ ಸಬಲರನ್ನಾಗಿ ಮಾಡಬಹುದು. ಜಾಗತಿಕ ನಿಯಮಗಳನ್ನು ಜಾರಿಗೆ ತರಲು ಈ ತಿದ್ದುಪಡಿ ಮಾಡಲಾಯಿತು’ ಎಂದರು. 

ತಿದ್ದುಪಡಿಗೆ ಸಿಪಿಐ ವಿರೋಧ :ರಾಜ್ಯ ಸರ್ಕಾರದ ತಿದ್ದುಪಡಿಯನ್ನು ಸಿಪಿಐ ರಾಜ್ಯ ಕಾರ್ಯದರ್ಶಿ ಕೆ. ರಾಮಕೃಷ್ಣ, ‘ಕಾರ್ಮಿಕ ವಿರೋಧಿ ನೀತಿ’ ಎಂದು ಟೀಕಿಸಿದ್ದಾರೆ. ‘ಕೇಂದ್ರ ಹಾಗೂ ರಾಜ್ಯದ ಎನ್‌ಡಿಎ ಸರ್ಕಾರಗಳು ಕಾರ್ಮಿಕರ ಇಚ್ಛೆಗೆ ವಿರುದ್ಧವಾಗಿ ಕೆಲಸ ಮಾಡುತ್ತಿವೆ. ಇದರ ವಿರುದ್ಧ ಕಾರ್ಮಿಕ ಸಂಘಗಳು ಜೂ.9ರಂದು ಪ್ರತಿಭಟನೆ ನಡೆಸಲು ನಿರ್ಧರಿಸಿವೆ’ ಎಂದರು.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಬೆಂಗಳೂರಿನದ್ದು ಸೇರಿ 16 ಉಪಗ್ರಹಗಳು ಆಗಸದಲ್ಲೇ ಕಾಣೆ
ಅಣ್ಣಾಮಲೈ ರಸಮಲೈ ಎಂದು ರಾಜ್‌ ಠಾಕ್ರೆ ಕೀಳುಭಾಷೆ ಟೀಕೆ