ವಿಜಯವಾಡ: ಕೆಂಪು ಮೆಣಸಿನ ಬೆಲೆ ಕುಸಿತದಿಂದ ನಲುಗಿದ್ದ ಆಂಧ್ರಪ್ರದೇಶದ ರೈತರ ಮೊಗದಲ್ಲಿ ಮತ್ತೆ ಮಂದಹಾಸ ಮೂಡಿದೆ. ಕಾರಣ, ಬೆಲೆ ಕುಸಿತ ತಡೆಗೆ ಕೇಂದ್ರ ಮತ್ತು ಆಂಧ್ರಪ್ರದೇಶ ಸರ್ಕಾರ ಕೈಗೊಂಡ ಕ್ರಮದ ಫಲವಾಗಿ ಕಳೆದೊಂದು ವಾರದಿಂದ ಮೆಣಸಿನ ಖರೀದಿ ಬೆಲೆಯಲ್ಲಿ ಉತ್ತಮ ಚೇತರಿಕೆ ಕಂಡುಬಂದಿದೆ.
ಅದಕ್ಕೆ ಸ್ಪಂದಿಸಿದ್ದ ಕೇಂದ್ರ ಸರ್ಕಾರ, ಫೆ.25ರಿಂದ ರಾಜ್ಯ ಸರ್ಕಾರದ ಸಹಯೋಗದೊಂದಿಗೆ ಕ್ವಿಂಟಲ್‌ಗೆ 11781 ರು. ಬೆಂಬಲ ಬೆಲೆಯಲ್ಲಿ ಖರೀದಿ ಆರಂಭಿಸಿತ್ತು. ರೈತರು ಬೆಳೆದ ಒಟ್ಟು ಬೆಲೆಯಲ್ಲಿ ಈ ಶೇ.25ರಷ್ಟನ್ನು ಈ ಬೆಲೆಯಲ್ಲಿ ಖರೀದಿ ಆರಂಭಿಸಿತ್ತು.
ಅದರ ಬೆನ್ನಲ್ಲೇ ಮಾರುಕಟ್ಟೆಯಲ್ಲಿ ಪ್ರತಿ ಕ್ವಿಂಟಲ್ ಬೆಲೆ ಶೇ.15-20ರಷ್ಟು ಏರಿಕೆಯಾಗಿದೆ. ಗುಣಮಟ್ಟದ ಮೆಣಸಿ ಕ್ವಿಂಟಲ್‌ಗೆ 14000 ರು.ವರೆಗೂ ದರ ಸಿಕ್ಕಿದೆ. ಜೊತೆಗೆ ಕಳೆದ ಕೆಲ ದಿನಗಳಿಂದ ಬೆಂಬಲ ಬೆಲೆಗಿಂತ ಹೆಚ್ಚಿನ ದರದಲ್ಲೇ ಮಾರುಕಟ್ಟೆಯಲ್ಲಿ ಮೆಣಸು ಖರೀದಿಯಾಗುತ್ತಿದೆ. ಮುಂದಿನ ದಿನಗಳಲ್ಲಿ ಈ ಬೆಲೆ ಇನ್ನಷ್ಟು ಹೆಚ್ಚಬಹುದು ಎಂದು ರೈತರು ಆಶಾಭಾವನೆ ಹೊಂದಿದ್ದಾರೆ.ಕರ್ನಾಟಕದಲ್ಲೂ ಇದೇ ರೀತಿ ಬೆಲೆ ಕುಸಿದಿದ್ದು, ನೆರವಿಗೆ ಧಾವಿಸುವಂತೆ ಪ್ರಧಾನಿ ಮೋದಿಗೆ ಕರ್ನಾಟಕದ ಮುಖ್ಯಮಂತ್ರಿ ಸಿದ್ಧರಾಮಯ್ಯ ಪತ್ರ ಬರೆದಿದ್ದಾರೆ. ಆದರೆ ರಾಜ್ಯದಲ್ಲಿ ಇನ್ನೂ ರೈತರ ನೆರವಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಧಾವಿಸಿಲ್ಲ.