ಆಂಧ್ರಪ್ರದೇಶ ರೈಲು ಅಪಘಾತ: ಸಾವಿನ ಸಂಖ್ಯೆ 14ಕ್ಕೆ ಏರಿಕೆ

KannadaprabhaNewsNetwork | Published : Oct 31, 2023 1:16 AM

ಸಾರಾಂಶ

ಗಾಯಾಳುಗಳು ದಾಖಲಾಗಿದ್ದ ಆಸ್ಪತ್ರೆಗೆ ಸಿಎಂ ಜಗನ್‌ ಭೇಟಿ.
ವಿಶಾಖಪಟ್ಟಣ: ಆಂಧ್ರಪ್ರದೇಶದ ವಿಜಯನಗರಂ ಜಿಲ್ಲೆಯಲ್ಲಿ ಹೌರಾ- ಚೆನ್ನೈ ಮಾರ್ಗದಲ್ಲಿ ಭಾನುವಾರ ರಾತ್ರಿ ಸಂಭವಿಸಿದ ರೈಲು ಅಪಘಾತದಲ್ಲಿ ಮೃತಪಟ್ಟವರ ಸಂಖ್ಯೆ 14ಕ್ಕೆ ಏರಿಕೆಯಾಗಿದ್ದು, ಈ ದುರಂತದಲ್ಲಿ ಗಾಯಗೊಂಡವರ ಸಂಖ್ಯೆ 50ಕ್ಕೇರಿದೆ. ‘13 ಮಂದಿ ದುರಂತ ನಡೆದ ಸ್ಥಳದಲ್ಲಿ ಮೃತಪಟ್ಟಿದ್ದರೆ ಮತ್ತೊಬ್ಬ ವ್ಯಕ್ತಿ ಚಿಕಿತ್ಸೆಯ ಸಮಯದಲ್ಲಿ ಅಸುನೀಗಿದ್ದಾರೆ. ಈ ದುರ್ಘಟನೆಯಲ್ಲಿ 50 ಮಂದಿ ಗಾಯಗೊಂಡಿದ್ದಾರೆ’ ಎಂದು ವಿಜಯನಗರಂ ಜಿಲ್ಲೆಯ ಹೆಚ್ಚುವರಿ ಜಿಲ್ಲಾಧಿಕಾರಿ ಮಯೂರ್‌ ಅಶೋಕ್‌ ಹೇಳಿದ್ದಾರೆ. ಗಾಯಗೊಂಡವರನ್ನು ವಿಶಾಖಪಟ್ಟಣ ಮತ್ತು ವಿಜಯನಗರಂನಲ್ಲಿರುವ ಆಸ್ಪತ್ರೆಗಳಿಗೆ ಸೇರಿಸಲಾಗಿದೆ. ಈ ದುರ್ಘಟನೆಯಲ್ಲಿ ಪಲಾಸಾ ಪ್ಯಾಸೆಂಜರ್‌ ರೈಲಿನ ಗಾರ್ಡ್‌ ಎಂ.ಎಸ್‌.ರಾವ್‌ ಮತ್ತು ರಾಯಗಢ ರೈಲಿನ ಲೋಕೋಪೈಲಟ್‌ ಎಸ್‌.ಎಂ.ಎಸ್‌. ರಾವ್‌ ಹಾಗೂ ಸಹಾಯಕ ಲೋಕೋಪೈಲಟ್‌ ಚಿರಂಜೀವಿ ಸಾವಿಗೀಡಾಗಿದ್ದಾರೆ. ಆಸ್ಪತ್ರೆಗೆ ಭೇಟಿ ನೀಡಿದ ಜಗನ್‌: ರೈಲು ದುರಂತದಲ್ಲಿ ಗಾಯಗೊಂಡವರನ್ನು ದಾಖಲಿಸಲಾಗಿರುವ ವಿಜಯನಗರಂ ಜಿಲ್ಲೆಗೆ ಮುಖ್ಯಮಂತ್ರಿ ವೈ.ಎಸ್‌.ಜಗನ್‌ ಮೋಹನ್‌ ರೆಡ್ಡಿ ಭೇಟಿ ನೀಡಿ ಗಾಯಾಳುಗಳ ಆರೋಗ್ಯ ವಿಚಾರಿಸಿದರು.

Share this article