ವ್ರತದ ಅಂಗವಾಗಿ ದೇಗುಲ ಸ್ವಚ್ಛಗೊಳಿಸಿದ ಪವನ್‌ ಕಲ್ಯಾಣ್‌

KannadaprabhaNewsNetwork |  
Published : Sep 25, 2024, 12:56 AM IST
ಪವನ್‌ ಕಲ್ಯಾಣ್‌ | Kannada Prabha

ಸಾರಾಂಶ

ತಿರುಪತಿ ಲಡ್ಡು ಪ್ರಸಾದದ ಕಲಬೆರೆಕೆ ವಿವಾದದ ಬಳಿಕ ಶುದ್ಧೀಕರಣಕ್ಕಾಗಿ 11 ದಿನಗಳ ಉಪವಾಸ ವ್ರತ ಕೈಗೊಂಡಿರುವ ಆಂಧ್ರ ಡಿಸಿಎಂ ಪವನ್ ಕಲ್ಯಾಣ್ ಮಂಗಳವಾರ ವಿಜಯವಾಡದಲ್ಲಿರುವ ಕನಕ ದುರ್ಗಾ ದೇವಸ್ಥಾನದಲ್ಲಿ ಸ್ವಚ್ಛತಾ ಕಾರ್ಯ ನಡೆಸಿದರು.

ವಿಜಯವಾಡ: ತಿರುಪತಿ ಲಡ್ಡು ಪ್ರಸಾದದ ಕಲಬೆರೆಕೆ ವಿವಾದದ ಬಳಿಕ ಶುದ್ಧೀಕರಣಕ್ಕಾಗಿ 11 ದಿನಗಳ ಉಪವಾಸ ವ್ರತ ಕೈಗೊಂಡಿರುವ ಆಂಧ್ರ ಡಿಸಿಎಂ ಪವನ್ ಕಲ್ಯಾಣ್ ಮಂಗಳವಾರ ವಿಜಯವಾಡದಲ್ಲಿರುವ ಕನಕ ದುರ್ಗಾ ದೇವಸ್ಥಾನದಲ್ಲಿ ಸ್ವಚ್ಛತಾ ಕಾರ್ಯ ನಡೆಸಿದರು.

ಬಳಿಕ ಮಾತನಾಡಿದ ಜನಸೇನಾ ಪಕ್ಷದ ಮುಖ್ಯಸ್ಥ, ‘ನಾನು ಸನಾತನ ಧರ್ಮವನ್ನು ಬಲವಾಗಿ ಪಾಲಿಸುತ್ತೇನೆ. ನಾವು ರಾಮಭಕ್ತರು, ನಮ್ಮ ಮನೆಯಲ್ಲಿ ರಾಮ ಜಪ ಮಾಡುತ್ತೇವೆ. ಭಾರತವು, ಮುಸ್ಲಿಂ, ಕ್ರೈಸ್ತ, ಝರತುಷ್ಟ್ರ ಸೇರಿದಂತೆ ಎಲ್ಲ ಧರ್ಮದವರಿಗೆ ಅವಕಾಶಗಳನ್ನು ನೀಡಿದೆ. ಜಾತ್ಯತೀತತೆ ಎನ್ನುವುದು ಒಂದು ಮಾರ್ಗವಾಗಬಾರದು. ಎಲ್ಲ ನಂಬಿಕೆಗಳಿಗೆ ಅವಕಾಶ ನೀಡುವ ದ್ವಿಮುಖ ಮಾರ್ಗವಾಗಿರಬೇಕು’ ಎಂದರು.

==

ಸಿಹಿತಿಂಡಿ ಬದಲು ಡ್ರೈಫ್ರೂಟ್ಸ್‌ ಪ್ರಸಾದ: ಅಖಾಡ ಪರಿಷತ್‌ ಕೋರಿಕೆ

ಹರಿದ್ವಾರ: ದೇವಸ್ಥಾನಗಳಲ್ಲಿ ಕಲಬೆರಕೆ ಲಡ್ಡು ಪ್ರಸಾದಗಳನ್ನು ದೇವರಿಗೆ ನೀಡುವ ಬದಲು. ಕಲ್ಲು ಸಕ್ಕರೆ, ಏಲಕ್ಕಿ, ಡ್ರೈ ಪ್ರೂಟ್ಸ್‌ಗಳನ್ನು ಭಕ್ತರಿಗೆ ಪ್ರಸಾದದ ರೂಪದಲ್ಲಿ ನೀಡಿ ಎಂದು ಅರ್ಚಕರು ಹಾಗೂ ಶ್ರೀಗಳು ಸದಸ್ಯರಾಗಿರುವ ಅಖಿಲ ಭಾರತೀಯ ಅಖಾಡ ಪರಿಷತ್‌ ಆಗ್ರಹಿಸಿದೆ.‘ದೇಶದ ಎಲ್ಲ ದೇವಸ್ಥಾನಗಳಲ್ಲಿ ಕಲ್ಲು ಸಕ್ಕರೆ, ಏಲಕ್ಕಿ, ಡ್ರೈ ಪ್ರೂಟ್ಸ್‌ಗಳನ್ನು ವಿತರಿಸಬೇಕು. ಸಾಂಪ್ರದಾಯಿಕ ಹಿಂದೂ ದೇವತೆಗೆ ಭೋಗ್ ರೂಪದಲ್ಲಿ ನೀಡಲಾಗುತ್ತದೆ. ಈ ವಸ್ತುಗಳನ್ನು ಪ್ರಸಾದದ ರೂಪದಲ್ಲಿ ನೀಡುವುದರಿಂದ ಯಾವುದೇ ಕಲಬೆರಕೆಯ ಇರುವುದಿಲ್ಲ’ ಎಂದು ಅಖಿಲ ಭಾರತೀಯ ಅಖಾಡ ಪರಿಷತ್ ಮುಖ್ಯಸ್ಥ ಮಹಂತ್ ರವೀಂದ್ರ ಪುರಿ ಹೇಳಿದ್ದಾರೆ.‘ಸರ್ಕಾರ ಮತ್ತು ದೇವಸ್ಥಾನದ ಆಡಳಿತ ಮಂಡಳಿ ಪ್ರಸಾದದ ಬಳಕೆಯಲ್ಲಿ ಬಳಸಲಾಗುವ ತುಪ್ಪಗಳ ಶುದ್ಧತೆಯನ್ನು ಖಾತರಿ ಪಡಿಸಬೇಕು. ಅಲ್ಲಿಯವರೆಗೂ ದೇವಸ್ಥಾನಗಳಲ್ಲಿ ಇದೇ ಪ್ರಸಾದವನ್ನು ನೀಡಬೇಕು’ ಎಂದಿದ್ದಾರೆ.

==

ಲಡ್ಡು ವಿವಾದ: ಪವನ್‌ ಬಳಿ ಕ್ಷಮೆ ಕೇಳಿದ ನಟ ಕಾರ್ತಿ

ಚೆನ್ನೈ: ತಿರುಪತಿ ಲಡ್ಡು ವಿವಾದಕ್ಕೆ ಸಂಬಂಧಿಸಿದಂತೆ ಆಂಧ್ರ ಡಿಸಿಎಂ ಹಾಗೂ ನಟ ಪವನ್ ಕಲ್ಯಾಣ್ ಅವರಲ್ಲಿ ತಮಿಳು ನಟ ಕಾರ್ತಿ ಅವರು ಕ್ಷಮೆ ಯಾಚಿಸಿದ್ದಾರೆ.ಸಮಾರಂಭವೊಂದರಲ್ಲಿ ತಿರುಪತಿ ಲಾಡು ಬಗ್ಗೆ ಪ್ರಸ್ತಾಪ ಆದಾಗ ಕಾರ್ತಿ ಅವರು ‘ಇಲ್ಲಿ ಆ ಬಗ್ಗೆ ಪ್ರಸ್ತಾಪ ಬೇಡ. ಸೂಕ್ಷ್ಮ ವಿಚಾರದ ಬಗ್ಗೆ ಇಲ್ಲಿ ಚರ್ಚೆ ಬೇಡ’ ಎಂದಿದ್ದರು.ಇದಕ್ಕೆ ಆಕ್ಷೇಪಿಸಿದ್ದ ಪವನ್ ಕಲ್ಯಾಣ್, ‘ತಿರುಪತಿ ಬಗ್ಗೆ ಯಾವುದೇ ನಕಾರಾತ್ಮಕ ‌ಹೇಳಿಕೆ ಸಹಿಸಲ್ಲ‌.‌ ಒಂದೋ ನಟರು ಸುಮ್ಮನಿರಬೇಕು. ಇಲ್ಲವೇ ದೇಗುಲವನ್ನು ‌ಬೆಂಬಲಿಸಬೇಕು’ ಎಂದಿದ್ದರು. ಇದರ ಬೆನ್ನಲ್ಲೇ ಪವನ್‌‌ ಕಲ್ಯಾಣ್ ಅವರಲ್ಲಿ ಕಾರ್ತಿ ಕ್ಷಮೆ ಕೋರಿದ್ದಾರೆ.

==

ಪಳನಿ ಪ್ರಸಾದದಲ್ಲಿ ಸಂತಾನ ಹರಣ ಔಷಧಿ ಇದೆ ಎಂದ ನಿರ್ದೇಶಕ ಸೆರೆ

ಚೆನ್ನೈ: ತಿರುಪತಿಯಲ್ಲಿ ಲಡ್ಡು ಪ್ರಸಾದ ತಯಾರಿಕೆಯಲ್ಲಿ ಪ್ರಾಣಿಗಳ ಕೊಬ್ಬು ಬಳಕೆ ಎಂಬ ಸುದ್ದಿ ಹರಿದಾಡುತ್ತಿರುವ ಬೆನ್ನಲ್ಲೇ ತಮಿಳುನಾಡಿನ ಪಳನಿ ದೇವಾಲಯದ ಪಂಚಾಮೃತ ಪ್ರಸಾದದಲ್ಲಿ ಸಂತಾನ ಹರಣ ಔಷಧಿಯನ್ನು ಬೆರಸಿ ಭಕ್ತರಿಗೆ ನೀಡಲಾಗುತ್ತದೆ ಎಂದು ತಮಿಳು ನಿರ್ದೇಶಕ ಮೋಹನ್‌ ಜಿ ಆರೋಪಿಸಿದ್ದಾರೆ. ಇದರ ಬೆನ್ನಲ್ಲೇ ಸುಳ್ಳು ಆರೋಪ ಮಾಡಿದ್ದಕ್ಕಾಗಿ ಅವರನ್ನು ತಿರುಚ್ಚಿ ಸೈಬರ್‌ ಕ್ರೈಂ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.ಯೂಟ್ಯೂಬ್ ಚಾನೆಲ್‌ವೊಂದಕ್ಕೆ ಸಂದರ್ಶನ ನೀಡುವ ಸಂದರ್ಭದಲ್ಲಿ ತಿರುಪತಿ ಲಡ್ಡು ಕಲಬೆರಕೆ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸುವ ವೇಳೆ ಮೋಹನ್ ಈ ಹೇಳಿಕೆ ನೀಡಿದ್ದರು

ಮೋಹನ್ ಪ್ರಮುಖವಾಗಿ ದ್ರೌಪತಿ, ರುದ್ರತಾಂಡವಂ ಮತ್ತು ಬಗಾಸುರನ್ ಚಿತ್ರಗಳನ್ನು ನಿರ್ದೇಶಿಸಿದ್ದಾರೆ.

==

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಭಾರತಕ್ಕೀಗ ಮೆಕ್ಸಿಕೋ ಶೇ.50 ತೆರಿಗೆ ಹೊಡೆತ
ಮೋದಿ-ಪುಟಿನ್‌ ಸೆಲ್ಫಿ ತೋರಿಸಿ ಟ್ರಂಪ್‌ ವಿರುದ್ಧ ಸಂಸದೆಯ ಕಿಡಿ