ಮುಸುಕುಧಾರಿಗಳ ಗುಂಪೊಂದು ನುಗ್ಗಿ ಹಗಲು ದರೋಡೆ- ತನಿಷ್ಕ್ ಶೋರೂಂನಲ್ಲಿ ₹25 ಕೋಟಿ ಚಿನ್ನ ಲೂಟಿ

KannadaprabhaNewsNetwork |  
Published : Mar 11, 2025, 12:47 AM ISTUpdated : Mar 11, 2025, 04:27 AM IST
ದರೋಡೆ | Kannada Prabha

ಸಾರಾಂಶ

ಬಿಹಾರದ ಆರಾದ ಗೋಪಾಲಿ ಚೌಕ್‌ನಲ್ಲಿರುವ ತನಿಷ್ಕ್ ಶೋ ರೂಂಗೆ ಸೋಮವಾರ ಮುಸುಕುಧಾರಿಗಳ ಗುಂಪೊಂದು ನುಗ್ಗಿ ಹಗಲು ದರೋಡೆ ನಡೆಸಿದ್ದು, ₹25 ಕೋಟಿ ಮೌಲ್ಯದ ಆಭರಣಗಳನ್ನು ದೋಚಿದ್ದಾರೆ. ನಗದನ್ನು ಕೂಡ ಹೊತ್ತೊಯ್ದಿದ್ದು, ಅದರ ವಿವರ ಲಭಿಸಿಲ್ಲ.

ಆರಾ (ಬಿಹಾರ): ಬಿಹಾರದ ಆರಾದ ಗೋಪಾಲಿ ಚೌಕ್‌ನಲ್ಲಿರುವ ತನಿಷ್ಕ್ ಶೋ ರೂಂಗೆ ಸೋಮವಾರ ಮುಸುಕುಧಾರಿಗಳ ಗುಂಪೊಂದು ನುಗ್ಗಿ ಹಗಲು ದರೋಡೆ ನಡೆಸಿದ್ದು, ₹25 ಕೋಟಿ ಮೌಲ್ಯದ ಆಭರಣಗಳನ್ನು ದೋಚಿದ್ದಾರೆ. ನಗದನ್ನು ಕೂಡ ಹೊತ್ತೊಯ್ದಿದ್ದು, ಅದರ ವಿವರ ಲಭಿಸಿಲ್ಲ.

ಸೋಮವಾರ ಬೆಳಿಗ್ಗೆ 10:30 ಕ್ಕೆ ಶೋ ರೂಂ ತೆರೆದ ಸ್ವಲ್ಪ ಸಮಯದ ನಂತರ, 5-6 ಜನರು ಅಂಗಡಿಯೊಳಗೆ ನುಗ್ಗಿ, ಭದ್ರತಾ ಸಿಬ್ಬಂದಿಯನ್ನು ಒತ್ತೆಯಾಳಾಗಿ ಇರಿಸಿಕೊಂಡಿದ್ದಾರೆ. ಅಲ್ಲದೆ ಗ್ರಾಹಕರು ಮತ್ತು ಸಿಬ್ಬಂದಿಗೆ ಕೈ ಎತ್ತುವಂತೆ ಆದೇಶಿಸಿ, ಕದ್ದ ವಸ್ತುಗಳನ್ನು ಕ್ರಮಬದ್ಧವಾಗಿ ಚೀಲಗಳಲ್ಲಿ ಪ್ಯಾಕ್ ಮಾಡಿ ದರೋಡೆ ಮಾಡಿದ್ದಾರೆ. ಸಿಬ್ಬಂದಿ ತಮ್ಮ ಜೀವಗಳನ್ನು ಉಳಿಸಿಕೊಳ್ಳಲು ಕೌಂಟರ್‌ಗಳ ಹಿಂದೆ ಅಡಗಿಕೊಂಡಿದ್ದಾರೆ.

ಈ ನಡುವೆ ಡಕಾಯಿತರನ್ನು ನಂತರ ನಾಕಾಬಂದಿ ನಡೆಸಿ ಬಂಧಿಸಲು ನಡೆಸಿದ ಯತ್ನ ವಿಫಲಗೊಂಡಿದೆ. ಪೊಲೀಸರು ಅವರನ್ನು ಅತಿ ವೇಗದಲ್ಲಿ ಚೇಸ್‌ ಮಾಡಿದಾಗ ಪೊಲೀಸರ ಮೇಲೇ ಅವರು ಗುಂಡು ಹಾರಿಸಿ ಪರಾರಿಯಾಗಿದ್ದಾರೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಕ್ಯಾನ್ಸರ್‌ ಅಂಶದ ಆತಂಕ: ದೇಶವ್ಯಾಪಿ ಮೊಟ್ಟೆ ಟೆಸ್ಟ್‌
ವೈದ್ಯೆಯ ಹಿಜಾಬ್‌ ಎಳೆದ ಸಿಎಂ ನಿತೀಶ್‌: ವಿವಾದ