ಉಗ್ರರು ಜಮ್ಮು- ಕಾಶ್ಮೀರದಲ್ಲಿ ರಕ್ತಪಾತ ಮುಂದುವರಿಸಿದ್ದು ಸೇನಾ ವಾಹನ ಮೇಲೆ ದಾಳಿ : 4 ಯೋಧರು ಹುತಾತ್ಮ

KannadaprabhaNewsNetwork |  
Published : Oct 25, 2024, 01:05 AM ISTUpdated : Oct 25, 2024, 04:53 AM IST
ಕಾಶ್ಮೀರ | Kannada Prabha

ಸಾರಾಂಶ

ಶ್ರೀನಗರ: ಉಗ್ರರು ಜಮ್ಮು-ಕಾಶ್ಮೀರದಲ್ಲಿ ರಕ್ತಪಾತ ಮುಂದುವರಿಸಿದ್ದು, ಬಾರಮುಲ್ಲಾ ಜಿಲ್ಲೆಯ ಗುಲ್ಮಾರ್ಗ್‌ನಲ್ಲಿ ರಾಷ್ಟ್ರೀಯ ರೈಫೆಲ್‌ನ  ಸೇನಾ ವಾಹನದ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ.

ಶ್ರೀನಗರ: ಉಗ್ರರು ಜಮ್ಮು-ಕಾಶ್ಮೀರದಲ್ಲಿ ರಕ್ತಪಾತ ಮುಂದುವರಿಸಿದ್ದು, ಬಾರಮುಲ್ಲಾ ಜಿಲ್ಲೆಯ ಗುಲ್ಮಾರ್ಗ್‌ನಲ್ಲಿ ರಾಷ್ಟ್ರೀಯ ರೈಫೆಲ್‌ನ  ಸೇನಾ ವಾಹನದ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಈ ದಾಳಿಯಲ್ಲಿ ಸೇನೆಯ ಇಬ್ಬರು ಪೋರ್ಟರ್‌ಗಳು ಹಾಗೂ ಇಬ್ಬರು ಯೋಧರು ಸೇರಿ ನಾಲ್ವರು ಸಾವನ್ನಪ್ಪಿದ್ದಾರೆ.

 3 ಮಂದಿ ಯೋಧರು ಗಾಯಗೊಂಡಿದ್ದಾರೆ.ಗಡಿ ನಿಯಂತ್ರಣ ರೇಖೆಗೆ ಸಮೀಪದಲ್ಲಿರುವ ಗುಲ್ಮಾರ್ಗ್‌ನ ಬೊಟಪಾತ್ರಿ ನಾಗಿನ್ ಪ್ರದೇಶದಲ್ಲಿ ಗಸ್ತಿನಲ್ಲಿದ್ದ 18ನೇ ರಾಷ್ಟ್ರೀಯ ರೈಫಲ್ ವಾಹನದ ಮೇಲೆ ಭಯೋತ್ಪಾದಕರು ದಾಳಿ ನಡೆಸಿದ್ದಾರೆ. 

ಆಗ ಯೋಧರು ಹಾಗೂ ಉಗ್ರರ ನಡುವೆ ಚಕಮಕಿ ನಡೆಸಿದೆ. ಗುಂಡಿನ ದಾಳಿ ಮಾಡಿದ ಉಗ್ರರು ಪರಾರಿ ಆಗಿದ್ದಾರೆ. ಇದಾದ ಕೂಡಲೇ ಗಾಯಾಳು ಯೋಧರನ್ನು ಆಸ್ಪತ್ರೆಗೆ ದಾಖಲಿಸಿ ಸ್ಥಳದಲ್ಲಿ ಶೋಧ ಕಾರ್ಯ ಆರಂಭಿಸಲಾಗಿದೆ. 

ಇದು ಒಳನುಸುಳಿದ ಉಗ್ರರ ಕೃತ್ಯ ಇರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.ಈ ಘಟನೆಗೂ ಕೆಲವೇ ಗಂಟೆಗೂ ಮುನ್ನ ಗಂದೇರ್‌ಬಾಲ್‌ ಜಿಲ್ಲೆಯಲ್ಲಿ ಕಾರ್ಮಿಕನೊಬ್ಬನ ಮೇಲೆ ಉಗ್ರರು ಗುಂಡು ಹಾರಿಸಿದ್ದರು. 3 ದಿನದ ಹಿಂದೆಯಷ್ಟೇ 6 ವಲಸೆ ಕಾರ್ಮಿಕರು ಸೇರಿ 7 ಮಂದಿಯನ್ನು ಹತ್ಯೆ ಮಾಡಿದ್ದರು.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಅಣುವಲಯ ಇನ್ನು ಖಾಸಗಿಗೂ ಮುಕ್ತ
ಬಾಕಿ ಲಕ್ಷ್ಮಿ ಬಾರಮ್ಮ!- ಫೆಬ್ರವರಿ- ಮಾರ್ಚ್‌ ಬಾಕಿ ಚುಕ್ತಾಗೆ ಆಗ್ರಹ- ಬಿಜೆಪಿ ನಾಯಕರು, ಮಹಿಳೆಯರ ಒತ್ತಾಯ