ಬಹುಪತ್ನಿತ್ವಕ್ಕೆ 7 ವರ್ಷ ಜೈಲು, ಎಲ್ಲಾ ಸರ್ಕಾರಿ ಸವಲತ್ತು ಕಟ್‌

KannadaprabhaNewsNetwork |  
Published : Nov 26, 2025, 02:00 AM IST
ಬಹುಪತ್ನಿತ್ವ | Kannada Prabha

ಸಾರಾಂಶ

ಬಹುಪತ್ನಿತ್ವಕ್ಕೆ ಕೊನೆ ಹಾಡಲು ಮುಂದಾಗಿರುವ ಅಸ್ಸಾಂ ಸರ್ಕಾರ ಈ ಸಂಬಂಧ ಕಠಿಣ ಅಂಶಗಳನ್ನು ಒಳಗೊಂಡ ಕರಡು ಮಸೂದೆಯನ್ನು ಮಂಗಳವಾರ ರಾಜ್ಯ ವಿಧಾನಸಭೆಯಲ್ಲಿ ಮಂಡಿಸಿದೆ. ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಮಂಡಿಸಿರುವ ಬಿಲ್‌ ಅನ್ವಯ ಕಾನೂನು ಬಾಹಿರ ಬಹುಪತ್ನಿತ್ವ ಹೊಂದಿದವರು, ವಿಷಯ ಮುಚ್ಚಿಟ್ಟು ಮದುವೆ ಮಾಡಿಸಿದವರು, ಮದುವೆ ಮಾಡಿಸಿದ ವ್ಯಕ್ತಿಗಳು ಕೂಡಾ ಜೈಲು ಶಿಕ್ಷೆ, ದಂಡಕ್ಕೆ ಗುರಿಯಾಗಲಿದ್ದಾರೆ.

ಅಸ್ಸಾಂ ಸರ್ಕಾರದಿಂದ ಮಸೂದೆ ಮಂಡನೆ

ಮದುವೆ ಮಾಡಿಸಿದವರಿಗೂ ಜೈಲು, ದಂಡಗುವಾಹಟಿ: ಬಹುಪತ್ನಿತ್ವಕ್ಕೆ ಕೊನೆ ಹಾಡಲು ಮುಂದಾಗಿರುವ ಅಸ್ಸಾಂ ಸರ್ಕಾರ ಈ ಸಂಬಂಧ ಕಠಿಣ ಅಂಶಗಳನ್ನು ಒಳಗೊಂಡ ಕರಡು ಮಸೂದೆಯನ್ನು ಮಂಗಳವಾರ ರಾಜ್ಯ ವಿಧಾನಸಭೆಯಲ್ಲಿ ಮಂಡಿಸಿದೆ. ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಮಂಡಿಸಿರುವ ಬಿಲ್‌ ಅನ್ವಯ ಕಾನೂನು ಬಾಹಿರ ಬಹುಪತ್ನಿತ್ವ ಹೊಂದಿದವರು, ವಿಷಯ ಮುಚ್ಚಿಟ್ಟು ಮದುವೆ ಮಾಡಿಸಿದವರು, ಮದುವೆ ಮಾಡಿಸಿದ ವ್ಯಕ್ತಿಗಳು ಕೂಡಾ ಜೈಲು ಶಿಕ್ಷೆ, ದಂಡಕ್ಕೆ ಗುರಿಯಾಗಲಿದ್ದಾರೆ.

ಜೊತೆಗೆ ಶಿಕ್ಷೆಗೆ ಒಳಗಾದ ವ್ಯಕ್ತಿಗೆ ಎಲ್ಲಾ ಸರ್ಕಾರಿ ಸವಲತ್ತು ನಿರಾಕರಿಸಲಾಗುತ್ತದೆ. ಆದರೆ ಎಸ್ಟಿ ಸಮುದಾಯವನ್ನು ಕಾಯ್ದೆ ವ್ಯಾಪ್ತಿಯಿಂದ ಹೊರಗಿಡಲಾಗಿದೆ.

ಯಾರಿಗೆ ಏನು ಶಿಕ್ಷೆ:

ಮೊದಲ ಪತ್ನಿ/ ಪತಿಗೆ ಡೈವೋರ್ಸ್‌ ನೀಡದೇ ಎರಡನೇ ಮದುವೆ ಆದರೆ 7 ವರ್ಷ ಜೈಲು ಶಿಕ್ಷೆ ಮತ್ತು ದಂಡ ವಿಧಿಸಲಾಗುತ್ತದೆ. ಒಂದು ವೇಳೆ ಮತ್ತೊಂದು ಮದುವೆ ಆದರೆ ಆಗ 10 ವರ್ಷ ಜೈಲು, ದಂಡ ವಿಧಿಸಲಾಗುತ್ತದೆ. ಜೊತೆಗೆ ಇಂಥ ವ್ಯಕ್ತಿ ಸರ್ಕಾರಿ ನೌಕರಿ ಪಡೆಯುವ, ಸರ್ಕಾರದ ಅನುದಾನದಲ್ಲಿ ವಿತರಿಸಲಾಗುವ ಯಾವುದೇ ಸರ್ಕಾರಿ ಸವಲತ್ತು ಪಡೆಯಲು, ಯೋಜನೆಯ ಲಾಭ ಪೆಡಯಲು, ಯಾವುದೇ ನೇಮಕಕ್ಕೆ ಅನರ್ಹನಾಗುತ್ತಾನೆ. ಜೊತೆಗೆ ಯಾವುದೇ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಸ್ಪರ್ಧಿಸುವ ಅವಕಾಶ ಕಳೆದುಕೊಳ್ಳುತ್ತಾನೆ. ಜೊತೆಗೆ ದೋಷಿಯಿಂದ ವಸೂಲಿ ಮಾಡಿದ ಹಣವನ್ನು ಸಂತ್ರಸ್ತರಿಗೆ ವಿತರಿಸಲಾಗುತ್ತದೆ. ಇದಕ್ಕೆಂದೇ ಪ್ರತ್ಯೇಕ ನಿಧಿ ಸ್ಥಾಪಿಸಲಾಗುತ್ತದೆ.

ಇತರರಿಗೆ ಏನು ಶಿಕ್ಷೆ?:

ಒಂದು ವೇಳೆ ಗ್ರಾಮದ ಮುಖ್ಯಸ್ಥ, ಖ್ವಾಜಿ, ತಂದೆ-ತಾಯಿ, ಕಾನೂನುಬದ್ಧ ಪೋಷಕರು, ಮೊದಲ ಮದುವೆ ಕುರಿತ ಮಾಹಿತಿಯನ್ನು ಮುಚ್ಚಿಟ್ಟರೆ ಅವರಿಗೆ 2 ವರ್ಷ ಜೈಲು 1 ಲಕ್ಷ ರು. ದಂಡ ವಿಧಿಸಲಾಗುತ್ತದೆ.

ಇನ್ನು ವಿಷಯ ಗೊತ್ತಿದ್ದರೂ ವಧು-ವರನಿಗೆ ಯಾರಾದರೂ ಧರ್ಮಗುರುಗಳು ಮದುವೆ ಮಾಡಿಸಿದವರೆ ಅವರಿಗೆ ಕೂಡಾ 2 ವರ್ಷ ಜೈಲು, 1.5 ಲಕ್ಷ ರು. ದಂಡ ವಿಧಿಸಲಾಗುವುದು.

PREV

Recommended Stories

ಬ್ರಾಹ್ಮಣರು ವಧು ಕೊಡುವವರೆಗೆ ಮೀಸಲು ಬೇಕು: ದಲಿತ ಐಎಎಸ್‌
ಕಾಳಿ ಟೈಗರ್‌ ರಿಸರ್ವ್‌ ಪಕ್ಕದ ಪ್ರದೇಶದಲ್ಲಿ ಗೋವಾ ಹುಲಿ ಸಂರಕ್ಷಿತ ಪ್ರದೇಶ ಸ್ಥಾಪನೆ