ವಾಣಿಜ್ಯ ಅಡುಗೆ ಸಿಲಿಂಡರ್‌ ಬೆಲೆ ₹30 ಇಳಿಕೆ: ಬೆಂಗಳೂರಿನಲ್ಲಿ ₹1,724

KannadaprabhaNewsNetwork | Updated : Jul 02 2024, 06:05 AM IST

ಸಾರಾಂಶ

ಹೋಟೆಲ್‌ ಸೇರಿದಂತೆ ವಾಣಿಜ್ಯ ಕಾರಣಗಳಿಗೆ ಬಳಸುವ 19 ಕೇಜಿಯ ಅಡುಗೆ ಸಿಲಿಂಡರ್‌ ಬೆಲೆಯನ್ನು ಕೇಂದ್ರ ಸರ್ಕಾರ 30 ರು. ಇಳಿಸಿದೆ ಇದರಿಂದಾಗಿ ಬೆಂಗಳೂರಿನಲ್ಲಿ 19 ಕೇಜಿ ಸಿಲಿಂಡರ್‌ ಬೆಲೆ 1,724 ರು.ಗೆ ಕುಸಿದಿದೆ.

ನವದೆಹಲಿ: ಹೋಟೆಲ್‌ ಸೇರಿದಂತೆ ವಾಣಿಜ್ಯ ಕಾರಣಗಳಿಗೆ ಬಳಸುವ 19 ಕೇಜಿಯ ಅಡುಗೆ ಸಿಲಿಂಡರ್‌ ಬೆಲೆಯನ್ನು ಕೇಂದ್ರ ಸರ್ಕಾರ 30 ರು. ಇಳಿಸಿದೆ ಇದರಿಂದಾಗಿ ಬೆಂಗಳೂರಿನಲ್ಲಿ 19 ಕೇಜಿ ಸಿಲಿಂಡರ್‌ ಬೆಲೆ 1,724 ರು.ಗೆ ಕುಸಿದಿದೆ.

ಆದರೆ ಗೃಹ ಬಳಕೆ ಅಡುಗೆ ಅನಿಲದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಇದು ಸತತ ನಾಲ್ಕನೇ ಬೆಲೆ ಕಡಿತವಾಗಿದ್ದು, ಜೂ.1ರಂದು 69 ರು. ಮೇ.1ರಂದು 19 ರು., ಹಾಗೂ ಏ.1ರಂದು 19 ಕೇಜಿ ಸಿಲಿಂಡರ್‌ ಮೇಲೆ 30.5 ರು. ಇಳಿಕೆ ಮಾಡಲಾಗಿತ್ತು.

ಮತ್ತೊಂದೆಡೆ ವಿಮಾನಗಳಿಗೆ ಬಳಸುವ ವೈಮಾನಿಕ ಇಂಧನದ ಬೆಲೆಯನ್ನು ಪ್ರತಿ ಕಿಲೋಲೀಟರ್‌ಗೆ 1,179.37 ರು. ಏರಿಕೆ ಮಾಡಲಾಗಿದೆ. ಇದರಿಂದಾಗಿ ಒಂದು ಕಿಲೋಲೀಟರ್‌ ಇಂಧನದ ಬೆಲೆ 96,148.38 ರು.ಗೆ ತಲುಪಿದೆ.

ಪಾಕ್‌ನಲ್ಲಿ ಪೆಟ್ರೋಲ್‌ ದರ 7.45 ರು., ಡೀಸೆಲ್‌ ದರ 9.56 ರು. ಏರಿಕೆ

ಇಸ್ಲಾಮಾಬಾದ್‌: ಆರ್ಥಿಕವಾಗಿ ಸಂಕಷ್ಟ ಎದುರಿಸುತ್ತಿರುವ ಪಾಕಿಸ್ತಾನ ಹೊಸ ಆರ್ಥಿಕ ವರ್ಷವನ್ನು ಆರಂಭಿಸಿದ ಬೆನ್ನಲ್ಲೇ ತೈಲ ಬೆಲೆ ಏರಿಸಿದೆ. ಮುಂದಿನ 15 ದಿನಗಳಿಗೆ ಅನ್ವಯವಾಗುವಂತೆ ಪೆಟ್ರೋಲ್‌ ದರ 7.45 ರು., ಡೀಸೆಲ್‌ ದರ 9.56 ರು. ಹೆಚ್ಚಿಸಿದೆ.ಕೆಲ ವಾರಗಳ ಹಿಂದಷ್ಟೇ ಪಾಕಿಸ್ತಾನ ‘ಈದ್‌ ಉಲ್ ಅದಾ’ ಪ್ರಯುಕ್ತ ಪೆಟ್ರೋಲ್‌, ಡಿಸೇಲ್ ಬೆಲೆ ಕಡಿಮೆ ಮಾಡಿತ್ತು. ಹೈ ಸ್ಪೀಡ್‌ ಡಿಸೇಲ್‌ ದರ 10.20 ರು. ಮತ್ತು ಪೆಟ್ರೋಲ್ ದರ 2.33 ರು. ಕಡಿತಗೊಳಿಸಿತ್ತು. ಇದೀಗ ಬೆಲೆ ಹೆಚ್ಚಿಸಿದ್ದು, ‘ಕಳೆದ 15 ದಿನಗಳಿಂದ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪೆಟ್ರೋಲಿಯಂ ಉತ್ಪನ್ನಗಳ ದರ ಹೆಚ್ಚುತ್ತಿರುವ ಕಾರಣದಿಂದ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಪ್ರಕಟಣೆಯಲ್ಲಿ ತಿಳಿಸಿದೆ’ ಎಂದು ಡಾನ್ ಪತ್ರಿಕೆ ವರದಿ ಮಾಡಿದೆ.

Share this article