ಇಂಟೆಲ್‌ ಪ್ರೊಸೆಸರ್‌ ಹಿಂದಿನ ಶಕ್ತಿ ಅವತಾರ್‌ ಸೈನಿ ಅಪಘಾತಕ್ಕೆ ಬಲಿ

KannadaprabhaNewsNetwork |  
Published : Mar 01, 2024, 02:18 AM IST
ಸೈನಿ | Kannada Prabha

ಸಾರಾಂಶ

ಭಾರತದಲ್ಲಿ ಇಂಟೆಲ್‌ ಪ್ರೊಸೆಸರ್‌ ಅಭಿವೃದ್ಧಿ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಅವತಾರ್‌ ಸೈನಿ ಕಾರು ಅಪಘಾತಕ್ಕೆ ಬಲಿಯಾಗಿದ್ದಾರೆ.

ಮುಂಬೈ: ವಿಶ್ವವಿಖ್ಯಾತ ಅಮೆರಿಕದ ಇಂಟೆಲ್‌ ಕಂಪನಿಯ ಪೆಂಟಿಯಮ್‌ ಪ್ರೊಸೆಸರ್‌ಗಳನ್ನು ಅಭಿವೃದ್ಧಿಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಭಾರತೀಯ ಅವತಾರ್‌ ಸೈನಿ (68) ಗುರುವಾರ ಬೆಳಗ್ಗೆ ಇಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ.ಅಮೆರಿಕದಲ್ಲಿ ಇಂಟೆಲ್‌ ಕಂಪನಿಯಲ್ಲಿ ಕೆಲಸ ಮಾಡಿದ್ದ ಸೈನಿ ಬಳಿಕ 1982-2004ರವರೆಗೆ ಇಂಟೆಲ್‌ ಇಂಡಿಯಾದ ಉಪಾಧ್ಯಕ್ಷರಾಗಿದ್ದರು. ಈ ವೇಳೆ ಅವರು ಕಂಪನಿಯ ಅತ್ಯಂತ ಜನಪ್ರಿಯ ಉತ್ಪನ್ನಗಳಾದ ಇಂಟೆಲ್‌ 386, ಇಂಟೆಲ್‌ 486 ಮತ್ತು ಪೆಂಟಿಯಮ್‌ ಪ್ರೊಸೆಸರ್‌ಗಳನ್ನು ಅಭಿವೃದ್ಧಿಪಡಿಸಿದ್ದರು. ಮೈಕ್ರೋಪ್ರೊಸೆಸರ್‌ಗಳ ವಿನ್ಯಾಸಕಾರ ಮತ್ತು ಅಭಿವೃದ್ಧಿಗಾರನಾಗಿ ಹೆಸರು ಮಾಡಿದ್ದ ಸೈನಿ ಈ ವಿಷಯದಲ್ಲಿ ಹಲವು ಪೇಟೆಂಟ್‌ ಕೂಡಾ ಹೊಂದಿದ್ದಾರೆ.ಗುರುವಾರ ಬೆಳಗ್ಗೆ 5.30ರ ವೇಳೆಗೆ ಸೈನಿ ತಮ್ಮ ಸ್ನೇಹಿತರೊಡಗೂಡಿ ಸೈಕಲ್‌ ಮೇಲೆ ಹೋಗುತ್ತಿದ್ದ ವೇಳೆ ಹಿಂದಿನಿಂದ ಬಂದ ಕಾರು ಡಿಕ್ಕಿ ಹೊಡೆದಿದೆ. ಈ ವೇಳೆ ಸೈನಿ ಹೆಲ್ಮೆಟ್‌ ಧರಿಸಿದ್ದರಾದರೂ, ತೀವ್ರವಾಗಿ ಗಾಯಗೊಂಡಿದ್ದ ಕಾರಣ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ತ.ನಾಡು ಕಾಂಗ್ರೆಸ್‌ ಪ್ರಣಾಳಿಕೆ ಬಿಡುಗಡೆ ಮಾಡಿದ ಡಿಕೆಶಿ
ಪಠ್ಯವೇ ಇಲ್ಲದೆ ಸಿಬಿಎಸ್ಸಿ ಸ್ಕೂಲಲ್ಲಿ ತೃತೀಯ ಭಾಷೆ!