ಹಿಂದಿಗಿಂತ ಐಪಿಎಲ್‌ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿರುವ ಆರ್‌ಸಿಬಿ ಈ ಬಾರಿ 10 ಪಟ್ಟು ಉತ್ತಮ : ಎಬಿಡಿ

KannadaprabhaNewsNetwork |  
Published : Mar 30, 2025, 03:01 AM ISTUpdated : Mar 30, 2025, 04:51 AM IST
ಎಬಿಡಿ | Kannada Prabha

ಸಾರಾಂಶ

ಐಪಿಎಲ್‌ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿರುವ ಆರ್‌ಸಿಬಿಯನ್ನು ದಕ್ಷಿಣ ಆಫ್ರಿಕಾ ಕ್ರಿಕೆಟಿಗ, ಆರ್‌ಸಿಬಿ ಮಾಜಿ ಆಟಗಾರ ಎಬಿ ಡಿವಿಲಿಯರ್ಸ್‌ ಕೊಂಡಾಡಿದ್ದು, ‘ಈ ಹಿಂದಿನ ಆವೃತ್ತಿಗಳಿಗೆ ಹೋಲಿಸಿದರೆ ಆರ್‌ಸಿಬಿ ಈ ಬಾರಿ 10 ಪಟ್ಟು ಹೆಚ್ಚು ಸಮತೋಲನದಿಂದ ಕೂಡಿದೆ ಎಂದಿದ್ದಾರೆ.

ಚೆನ್ನೈ: ಐಪಿಎಲ್‌ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿರುವ ಆರ್‌ಸಿಬಿಯನ್ನು ದಕ್ಷಿಣ ಆಫ್ರಿಕಾ ಕ್ರಿಕೆಟಿಗ, ಆರ್‌ಸಿಬಿ ಮಾಜಿ ಆಟಗಾರ ಎಬಿ ಡಿವಿಲಿಯರ್ಸ್‌ ಕೊಂಡಾಡಿದ್ದು, ‘ಈ ಹಿಂದಿನ ಆವೃತ್ತಿಗಳಿಗೆ ಹೋಲಿಸಿದರೆ ಆರ್‌ಸಿಬಿ ಈ ಬಾರಿ 10 ಪಟ್ಟು ಹೆಚ್ಚು ಸಮತೋಲನದಿಂದ ಕೂಡಿದೆ. ಇದು ಆರ್‌ಸಿಬಿ ಮುಂದಿನ ಹಾದಿಯನ್ನು ಸುಲಭಗೊಳಿಸಿದೆ’ ಎಂದಿದ್ದಾರೆ. 

ಚೆಪಾಕ್‌ನಲ್ಲಿ ಚೆನ್ನೈ ಸೂಪರ್‌ಕಿಂಗ್ಸ್‌ ವಿರುದ್ಧ ಆರ್‌ಸಿಬಿ ಭರ್ಜರಿ ಜಯ ಸಾಧಿಸಿದ ಬೆನ್ನಲ್ಲೇ ಪಾಡ್‌ಕಾಸ್ಟ್‌ನಲ್ಲಿ ಎಬಿಡಿ ಅರ್‌ಸಿಬಿಯನ್ನು ಹೊಗಳಿದ್ದಾರೆ. ‘ ಕಳೆದ ವರ್ಷ ಹರಾಜಿನಲ್ಲಿ ಆರ್‌ಸಿಬಿಗೆ ಸಮತೋಲನದ ಅಗತ್ಯವಿದೆ ಎಂದು ನಾನು ಮಾತನಾಡಿದ್ದೆ. ಇದು ಬೌಲರ್‌ಗಳು, ಬ್ಯಾಟರ್‌ಗಳು ಅಥವಾ ಫೀಲ್ಡರ್‌ಗಳ ಬಗ್ಗೆ ಅಲ್ಲ. ಐಪಿಎಲ್ ತಂಡಗಳು ಮತ್ತು ಆಯ್ಕೆಗಳ ಬಗ್ಗೆ. ಆರ್‌ಸಿಬಿ ಉತ್ತಮ ಆರಂಭ ಮಾಡಿದೆ. 

ಈ ಋತುವಿನಲ್ಲಿ ಎರಡು ಪಂದ್ಯಗಳನ್ನೂ ಎದುರಾಳಿಗಳ ತವರಿನಲ್ಲಿಯೇ ಸೋಲಿಸಿರುವುದು ಉತ್ತಮ ಆರಂಭ. ಇಲ್ಲಿಂದ ಪಾಯಿಂಟ್ ಟೇಬಲ್ ನೋಡಿದರೆ, ಆರ್‌ಸಿಬಿ ಅಗ್ರಸ್ಥಾನದಲ್ಲಿದೆ. ಎರಡು ಗೆಲುವುಗಳು ಮತ್ತು ಅದ್ಭುತ ರನ್ ರೇಟ್‌ ಹೊಂದಿರುವ ಏಕೈಕ ತಂಡ. ಆರ್‌ಸಿಬಿಗೆ ದಾರಿ ಸುಲಭವಾಗುತ್ತದೆ’ ಎಂದಿದ್ದಾರೆ.

ರಾಯಲ್‌ ಚಾಲೆಂಜರ್ಸ್‌ ಬೆಂಗಳೂರಿನ ನಾಯಕನ ಬಗ್ಗೆಯೂ ಎಬಿಡಿ ಮೆಚ್ಚುಗೆ ವ್ಯಕ್ತಪಡಿಸಿದ್ದು, ‘ ರಜತ್‌ ಪಾಟಿದಾರ್‌ ಕೂಡ ಉತ್ತಮವಾಗಿ ಆಡುತ್ತಿದ್ದು, ವಿರಾಟ್‌ ಕೊಹ್ಲಿ ಸ್ಥಾನವನ್ನು ತುಂಬುತ್ತಿರುವ ನಾಯಕ. ಅವರು ಉತ್ತಮವಾಗಿ ಆಡುತ್ತಿದ್ದಾರೆ. ಸ್ಪಷ್ಟ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದಾರೆ’ ಎಂದಿದ್ದಾರೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಕ್ಯಾನ್ಸರ್‌ ಅಂಶದ ಆತಂಕ: ದೇಶವ್ಯಾಪಿ ಮೊಟ್ಟೆ ಟೆಸ್ಟ್‌
ವೈದ್ಯೆಯ ಹಿಜಾಬ್‌ ಎಳೆದ ಸಿಎಂ ನಿತೀಶ್‌: ವಿವಾದ