ಬೆಂಗಳೂರು ನಗರದಲ್ಲಿ ಡಾ. ಬಿ.ಆರ್‌. ಅಂಬೇಡ್ಕರ್ ಮ್ಯೂಸಿಯಂ ಹಾಗೂ ದೇಶದ ಅತಿಎತ್ತರದ ಅಂಬೇಡ್ಕರ್‌ ಪ್ರತಿಮೆ ಸ್ಥಾಪನೆ

KannadaprabhaNewsNetwork |  
Published : Apr 15, 2025, 12:54 AM ISTUpdated : Apr 15, 2025, 04:33 AM IST
Dr BR Ambedkar's death anniversary

ಸಾರಾಂಶ

ಬೆಂಗಳೂರು ನಗರದಲ್ಲಿ ಡಾ. ಬಿ.ಆರ್‌. ಅಂಬೇಡ್ಕರ್ ಮ್ಯೂಸಿಯಂ ಹಾಗೂ ದೇಶದಲ್ಲೇ ಅತಿ ಎತ್ತರವಾದ ಅಂಬೇಡ್ಕರ್‌ ಪ್ರತಿಮೆಯನ್ನು ಸ್ಥಾಪನೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಣೆ ಮಾಡಿದ್ದಾರೆ. ಜತೆಗೆ ಮೈಸೂರು ವಿಶ್ವವಿದ್ಯಾಲಯದಲ್ಲಿ ಸಂವಿಧಾನ ಪೀಠ ಸ್ಥಾಪನೆ ಮಾಡುವುದಾಗಿ ಹೇಳಿದ್ದಾರೆ.

 ಬೆಂಗಳೂರು : ಬೆಂಗಳೂರು ನಗರದಲ್ಲಿ ಡಾ. ಬಿ.ಆರ್‌. ಅಂಬೇಡ್ಕರ್ ಮ್ಯೂಸಿಯಂ ಹಾಗೂ ದೇಶದಲ್ಲೇ ಅತಿ ಎತ್ತರವಾದ ಅಂಬೇಡ್ಕರ್‌ ಪ್ರತಿಮೆಯನ್ನು ಸ್ಥಾಪನೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಣೆ ಮಾಡಿದ್ದಾರೆ. ಜತೆಗೆ ಮೈಸೂರು ವಿಶ್ವವಿದ್ಯಾಲಯದಲ್ಲಿ ಸಂವಿಧಾನ ಪೀಠ ಸ್ಥಾಪನೆ ಮಾಡುವುದಾಗಿ ಹೇಳಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಸೋಮವಾರ ಅಂಬೇಡ್ಕರ್‌ ಜಯಂತಿ ಆಚರಣೆ ವೇಳೆ ಮಾತನಾಡಿದ ಅವರು, ಆಂಧ್ರಪ್ರದೇಶದ ಮಾದರಿಯಲ್ಲಿ ಬೆಂಗಳೂರಿನಲ್ಲಿ ಅಂಬೇಡ್ಕರ್‌ ಮ್ಯೂಸಿಯಂ ಮಾಡಲಾಗುವುದು. ಅಲ್ಲೇ ದೇಶದಲ್ಲೇ ಅತಿ ದೊಡ್ಡದಾದ ಅಂಬೇಡ್ಕರ್‌ ಪ್ರತಿಮೆ ಮಾಡಲಾಗುವುದು. ಅಂಬೇಡ್ಕರ್‌ ಅವರಿಗೆ ನಾವು ಎಷ್ಟು ಮಾಡಿದರೂ ಕಡಿಮೆಯೇ. ಅವರಿಗೆ ಕೃತಜ್ಞತೆ ಸಲ್ಲಿಸುವ ಕೆಲಸವನ್ನು ನಮ್ಮ ಸರ್ಕಾರ ನಿರಂತರವಾಗಿ ಮಾಡುತ್ತದೆ ಎಂದು ತಿಳಿಸಿದರು.

ಆಂಧ್ರಪ್ರದೇಶದ ವಿಜಯವಾಡದಲ್ಲಿ ದೇಶ ಹಾಗೂ ವಿಶ್ವದ ಅತಿದೊಡ್ಡ ಅಂಬೇಡ್ಕರ್‌ ಪ್ರತಿಮೆ ಇದೆ. ಆ ಪ್ರತಿಮೆ 206 ಅಡಿ ಎತ್ತರವಿದೆ. ಈ ಪೈಕಿ ಪ್ರತಿಮೆ 125 ಅಡಿ ಎತ್ತರವಿದ್ದರೆ, ಅದರ ಸ್ತಂಭ 85 ಅಡಿ ಎತ್ತರ ಹೊಂದಿದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಮೋದಿ ಜತೆ ಪ್ರಿಯಾಂಕಾ ಗಾಂಧಿ ಆತ್ಮೀಯ ಮಾತು!
ಬಾಂಗ್ಲಾ ಹಿಂದು ಯುವಕನ ನರಮೇಧ - ಬಡಿದು ಕೊಂದು, ಮರಕ್ಕೆ ಕಟ್ಟಿ ಸುಟ್ಟು ಅಟ್ಟಹಾಸ