ಬಂಗಾಳದ ಹಿಂದಿ ವಿರೋಧಿ ಪ್ರತಿಭಟನೆಯಲ್ಲಿ ಕುವೆಂಪು

KannadaprabhaNewsNetwork |  
Published : Sep 15, 2025, 01:01 AM IST
ಕುವೆಂಪು | Kannada Prabha

ಸಾರಾಂಶ

ಕೇಂದ್ರ ಸರ್ಕಾರದ ಹಿಂದಿ ಹೇರಿಕೆ  ಹಾಗೂ ಅದು ಆಯೋಜಿಸಿದ ಹಿಂದಿ ದಿವಸವನ್ನು ವಿರೋಧಿಸಿ ಬಂಗಾಳಿ ಪರ ಸಂಸ್ಥೆಯಾದ ಬಂಗಾಳ ಪೊಖ್ಖೊ ಪ್ರತಿಭಟನೆಯನ್ನು ಆಯೋಜಿಸಿದ್ದು, ಈ ವೇಳೆ ರಾಷ್ಟ್ರಕವಿ ಕುವೆಂಪು ಅವರ ಭಾವಚಿತ್ರವನ್ನು ಪ್ರದರ್ಶಿಸಲಾಯಿತು. 

 ಕೋಲ್ಕತಾ: ಕೇಂದ್ರ ಸರ್ಕಾರದ ಹಿಂದಿ ಹೇರಿಕೆಹಾಗೂ ಅದು ಆಯೋಜಿಸಿದ ಹಿಂದಿ ದಿವಸವನ್ನು ವಿರೋಧಿಸಿ ಬಂಗಾಳಿ ಪರ ಸಂಸ್ಥೆಯಾದ ಬಂಗಾಳ ಪೊಖ್ಖೊ ಪ್ರತಿಭಟನೆಯನ್ನು ಆಯೋಜಿಸಿದ್ದು, ಈ ವೇಳೆ ರಾಷ್ಟ್ರಕವಿ ಕುವೆಂಪು ಅವರ ಭಾವಚಿತ್ರವನ್ನು ಪ್ರದರ್ಶಿಸಲಾಯಿತು.

 ಅಲ್ಲದೆ, ಹಿಂದಿ ಭಾಷೆಯ ಬಗ್ಗೆ ಕನ್ನಡದ ಕವಿ ಕುವೆಂಪು ಅವರ ನಿಲುವುಗಳ ಬಗ್ಗೆಯೂ ಭಾಷಣಕಾರರು ಮಾತನಾಡಿದರು. ಸ್ಥಳೀಯ ಭಾಷೆಗಳ ಜಾಗದಲ್ಲಿ ಹಿಂದಿ ಹೇರಿಕೆ ಮಾಡುವುದನ್ನು ವಿರೋಧಿಸಿ ಈ ಪ್ರತಿಭಟನಾ ರ್‍ಯಾಲಿ ನಡೆದಿದ್ದು, ಬಂಗಾಳಿ ಸೇರಿದಂತೆ ಅನ್ಯ ಹಿಂದಿಯೇತರ ಭಾಷೆಗಳಿರುವ ಫಲಕಗಳು, ಕುವೆಂಪು, ತಮಿಳುನಾಡಿನ ಮಾಜಿ ಸಿಎಂ ಎಂ.ಕರುಣಾನಿಧಿಯಂತಹ ದಿಗ್ಗಜರ ಫೋಟೋಗಳನ್ನು ಪ್ರದರ್ಶಿಸಲಾಯಿತು.

ಈ ವೇಳೆ, ಹಿಂದಿಯಲ್ಲಿ ಲಭ್ಯವಿರುವ ಕೇಂದ್ರ ಸರ್ಕಾರದ ಎಲ್ಲಾ ಪರೀಕ್ಷೆಗಳು ಮತ್ತು ವೆಬ್‌ಸೈಟ್‌ಗಳು ಸಂವಿಧಾನದಲ್ಲಿ ಅಧಿಕೃತವಾಗಿ ಗುರುತಿಸಲಾಗಿರುವ ಎಲ್ಲಾ ಭಾಷೆಗಳಲ್ಲೂ ದೊರೆಯಬೇಕು ಎಂದು ಆಗ್ರಹಿಸಲಾಯಿತು.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಎಐ ದುರ್ಬಳಕೆ ತಡೆಗೆ ಕಠಿಣ ನಿಯಮ ಜಾರಿ :ಹೊಸ ನಿಯಮದಲ್ಲೇನಿದೆ?
ಅಂತರಾಷ್ಟ್ರೀಯ ತೈಲ ಸ್ಮಗ್ಲಿಂಗ್‌ ಜಾಲ ಭೇದಿಸಿದ ಕರಾವಳಿ ಪಡೆ