2 ವರ್ಷದಲ್ಲಿ ಬೆಂಗಳೂರಿಗೆ ಬರಲಿದೆ ಏರ್‌ಟ್ಯಾಕ್ಸಿ ಸೇವೆ

KannadaprabhaNewsNetwork |  
Published : Apr 21, 2024, 02:15 AM ISTUpdated : Apr 21, 2024, 09:24 AM IST
ಇಂಡಿಗೋ ಏರ್‌ ಟ್ಯಾಕ್ಸಿ | Kannada Prabha

ಸಾರಾಂಶ

ಇಂಡಿಗೋ ವಿಮಾನಯಾನ ಸಂಸ್ಥೆಯಿಂದ ಆರಂಭವಾಗಲಿದ್ದು, 2-3 ಸಾವಿರ ರು. ದರದಲ್ಲಿ ನಗರದ ಒಂದು ಬದಿಯಿಂದ ಮತ್ತೊಂದು ಬದಿಗೆ ಸೇವೆ ನೀಡಲು ಸಿದ್ಧತೆ ನಡೆಸುತ್ತಿದೆ.

ನವದೆಹಲಿ: ಕರ್ನಾಟಕದ ರಾಜಧಾನಿ ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ಮೂರು ಮಹಾನಗರಗಳಲ್ಲಿ ಇಂಡಿಗೋ ವಿಮಾನಯಾನದ ಅಂಗಸಂಸ್ಥೆ ಇಂಟರ್‌ಗ್ಲೋಬ್‌ ಎಂಟರ್‌ಪ್ರೈಸಸ್‌ ಮತ್ತು ಅಮೆರಿಕ ಮೂಲದ ಆರ್ಚರ್‌ ಏವಿಯೇಷನ್‌ ಜಂಟಿ ಸಹಭಾಗಿತ್ವದಲ್ಲಿ 2026ರ ವೇಳೆಗೆ ಏರ್‌ಟ್ಯಾಕ್ಸಿ ಸೇವೆ ಆರಂಭಿಸುವುದು ಖಚಿತವಾಗಿದೆ.

ಈ ಕುರಿತು ಪಿಟಿಐ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಆರ್ಚರ್‌ ಏವಿಯೇಷನ್‌ ಸಂಸ್ಥಾಪಕ ಆ್ಯಡಮ್‌ ಗೋಲ್ಡ್‌ಸ್ಟೀನ್‌, ‘ಮೊದಲಿಗೆ ದೆಹಲಿಯಲ್ಲಿ ಕನಾಟ್‌ ಪ್ಲೇಸ್‌ನಿಂದ ಗುರುಗ್ರಾಮಕ್ಕೆ 4 ಸೀಟಿನ ಏರ್‌ಟ್ಯಾಕ್ಸಿ ಸಂಚಾರ ಆರಂಭಿಸಲಾಗುವುದು. ರಸ್ತೆ ಮಾರ್ಗದಲ್ಲಿ 90 ನಿಮಿಷ ತಗುಲುವ ಸಂಚಾರವನ್ನು ವಾಯುಮಾರ್ಗದಲ್ಲಿ ಕೇವಲ 7 ನಿಮಿಷಗಳಲ್ಲಿ ತಲುಪಬಹುದು. ಇದಕ್ಕಾಗಿ 2-3 ಸಾವಿರ ರು. ದರ ನಿಗದಿಪಡಿಸಲು ಚಿಂತಿಸಲಾಗುತ್ತಿದೆ’ ಎಂದು ತಿಳಿಸಿದರು.

ಮೊದಲಿಗೆ 200 ವಿಮಾನಗಳನ್ನು ಸಂಚಾರಕ್ಕೆ ಮುಕ್ತಗೊಳಿಸಲಾಗುವುದು. ಬಳಿಕ ವರ್ಷಕ್ಕೆ 650 ವಿಮಾನವನ್ನು ತಯಾರಿಸಲಾಗುವುದು. ಮುಂದಿನ ದಿನಗಳಲ್ಲಿ ಇವುಗಳನ್ನು ಭಾರತದಲ್ಲೇ ತಯಾರಿಸಲು ಯೋಜನೆ ರೂಪಿಸಲಾಗುವುದು ಎಂದೂ ತಿಳಿಸಿದರು.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಇಂಡಕ್ಷನ್‌ ಸ್ಟವ್‌ಗಳಿಗೆ ಭಾರೀ ಡಿಮ್ಯಾಂಡ್‌: 300% ಬೇಡಿಕೆ ಹೆಚ್ಚಳ!
ಮುಸ್ಲಿಂ ಹುಡುಗನ ಜತೆ ರುದ್ರಾಕ್ಷಿ ಹುಡುಗಿ ಮೊನಾಲಿಸಾ ಮದುವೆ!