ಅಮೆರಿಕ ಮಾಜಿ ಅಧ್ಯಕ್ಷ ಬೈಡೆನ್‌ಗೆ ಪ್ರಾಸ್ಟೇಟ್‌ ಕ್ಯಾನ್ಸರ್‌

KannadaprabhaNewsNetwork |  
Published : May 20, 2025, 01:39 AM ISTUpdated : May 20, 2025, 04:36 AM IST
ಬೈಡೆನ್ | Kannada Prabha

ಸಾರಾಂಶ

ಅಮೆರಿಕದ ಅತ್ಯಂತ ಹಿರಿಯ ಅಧ್ಯಕ್ಷ ಎನಿಸಿಕೊಂಡಿದ್ದ ಜೋ ಬೈಡೆನ್‌ (82) ಅವರಲ್ಲಿ ಪ್ರಾಸ್ಟೇಟ್‌ ಕ್ಯಾನ್ಸರ್‌ ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ಸೂಕ್ತ ಚಿಕಿತ್ಸೆ ನೀಡುವ ಯತ್ನಗಳು ನಡೆದಿವೆ ಎಂದು ಶ್ವೇತಭವನ ತಿಳಿಸಿದೆ.

ವಾಷಿಂಗ್ಟನ್‌: ಅಮೆರಿಕದ ಅತ್ಯಂತ ಹಿರಿಯ ಅಧ್ಯಕ್ಷ ಎನಿಸಿಕೊಂಡಿದ್ದ ಜೋ ಬೈಡೆನ್‌ (82) ಅವರಲ್ಲಿ ಪ್ರಾಸ್ಟೇಟ್‌ ಕ್ಯಾನ್ಸರ್‌ ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ಸೂಕ್ತ ಚಿಕಿತ್ಸೆ ನೀಡುವ ಯತ್ನಗಳು ನಡೆದಿವೆ ಎಂದು ಶ್ವೇತಭವನ ತಿಳಿಸಿದೆ.

ಬೈಡನ್‌ಗೆ ಮೂತ್ರವಿಸರ್ಜನೆ ವೇಳೆ ಸಮಸ್ಯೆ ಕಾಣಿಸಿಕೊಂಡಿತ್ತು. ಈ ಹಿನ್ನೆಲೆಯಲ್ಲಿ ವೈದ್ಯರು ಶುಕ್ರವಾರ ಪರೀಕ್ಷೆ ನಡೆಸಿದಾಗ, ಪುರುಷ ಸಂತಾನೋತ್ಪತ್ತಿ ವ್ಯವಸ್ಥೆಯ ಸಹಾಯಕ ಗ್ರಂಥಿಯಾಗಿರುವ ಪ್ರೋಸ್ಟೇಟ್‌ನಲ್ಲಿ ಗಂಟುಗಳಿರುವುದು ಪತ್ತೆಯಾಗಿದೆ. ಇದು ಈಗಾಗಲೇ ಮೂಳೆಗಳಿಗೂ ಹರಡಿದೆ.

ಈ ಕ್ಯಾನ್ಸರ್‌ನ ಅಪಾಯವನ್ನು ಗ್ಲೀಸನ್ ಸ್ಕೋರ್‌ನಲ್ಲಿ 6ರಿಂದ 10ರ ವರೆಗೆ ಅಂಕ ನೀಡುವ ಮೂಲಕ ಅಳೆಯಬಹುದು. ಈ ಬಗ್ಗೆ ಮಾಹಿತಿ ನೀಡಿರುವ ವೈಟ್‌ ಹೌಸ್‌, ‘ಈ ಕ್ಯಾನ್ಸರ್‌ ಅಪಾಯಕಾರಿಯಾದರೂ, ಪ್ರೊಜೆಸ್ಟಿರೋನ್‌ನಂತಹ ಹಾರ್ಮೋನ್‌ಗಳೊಂದಿಗೆ ಸ್ಪಂದಿಸುವ ಕಾರಣ, ಅದನ್ನು ಸುಲಭವಾಗಿ ನಿರ್ವಹಿಸಬಹುದು. ಗ್ಲೀಸನ್ ಸ್ಕೋರ್‌ನಲ್ಲಿ ಬೈಡನ್‌ರಿಗಿರುವ ಕ್ಯಾನ್ಸರ್‌ 9 ಅಂಕ ಪಡೆದಿದ್ದು, ಅಪಾಯಕಾರಿ ಎಂದು ಪರಿಗಣಿಸಲಾಗಿದೆ’ ಎಂದು ಹೇಳಿದೆ.ಈ ಮೊದಲು ಬೈಡೆನ್‌ ಚರ್ಮದ ಕ್ಯಾನ್ಸರ್‌ನಿಂದಲೂ ಬಳಲುತ್ತಿದ್ದು, ಅದಕ್ಕೆ ಚಿಕಿತ್ಸೆ ಪಡೆದಿದ್ದರು. 2015ರಲ್ಲಿ ಇವರ ಪುತ್ರ ಬ್ಯೂ ಬೈಡೆನ್‌ ಕೂಡ ಕ್ಯಾನ್ಸರ್‌ನಿಂದ ಮೃತಪಟ್ಟಿದ್ದರು.

ನಾಯಕರ ಪ್ರತಿಕ್ರಿಯೆ  : ಬೈಡೆನ್‌ರ ರಾಜಕೀಯ ವಿರೋಧಿಯಾಗಿರುವ ಡೊನಾಲ್ಡ್‌ ಟ್ರಂಪ್‌, ‘ಜೋ ಬೇಗ ಮತ್ತು ಯಶಸ್ವಿಯಾಗಿ ಚೇತರಿಸಿಕೊಳ್ಳಲಿ’ ಎಂದು ಹಾರೈಸಿದ್ದಾರೆ. ಬೈಡೆನ್‌ರನ್ನು ಹೋರಾಟಗಾರ ಎಂದು ಕರೆದಿರುವ ಕಮಲಾ ಹ್ಯಾರಿಸ್‌, ಮತ್ತು ಮಾಜಿ ಅಧ್ಯಕ್ಷ ಒಬಾಮಾ ಅವರಿಗಾಗಿ ಪ್ರಾರ್ಥಿಸಿದ್ದಾರೆ. 

ಬೇಗ ಗುಣಮುಖರಾಗಿ-ಮೋದಿ : ಬೈಡೆನ್‌ರಲ್ಲಿ ಪ್ರೋಸ್ಟೇಟ್‌ ಕ್ಯಾನ್ಸರ್‌ ಪತ್ತೆಯಾಗಿರುವುದರ ಕುರಿತು ಪ್ರತಿಕ್ರಿಯಿಸಿರುವ ಪ್ರಧಾನಿ ನರೇಂದ್ರ ಮೋದಿ, ‘ಬೈಡೆನ್‌ ಆರೋಗ್ಯದ ಬಗ್ಗೆ ಕಳವಳವಿದೆ. ಅವರು ಬೇಗ ಸಂಪೂರ್ಣ ಗುಣಮುಖರಾಗಲಿ’ ಎಂದು ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿ ಪ್ರಾರ್ಥಿಸಿದ್ದಾರೆ.

PREV
Read more Articles on

Recommended Stories

ನಿತೀಶ್‌ ನೇತೃತ್ವದಲ್ಲಿ ಈ ಸಲ ದಾಖಲೆಯ ಜಯ : ಮೋದಿ
ಭಾರತದಿಂದ ವರ್ಷಾಂತ್ಯಕ್ಕೆ ರಷ್ಯಾ ತೈಲ ಖರೀದಿ ಸ್ಥಗಿತ?