ಸಮೀಕ್ಷೆಗಳನ್ನೂ ಮೀರಿ ಗೆದ್ದ ಎನ್‌ಡಿಎ ಮೈತ್ರಿಕೂಟ

KannadaprabhaNewsNetwork |  
Published : Nov 15, 2025, 01:00 AM IST
Modi

ಸಾರಾಂಶ

ಬಿಹಾರ ಚುನಾವಣೆ ಸಂಬಂಧ   ಸಮೀಕ್ಷೆಗಳು ಪೂರ್ಣ ಪ್ರಮಾಣದಲ್ಲಿ ನಿಜವಾಗಿದೆ. ಎಲ್ಲಾ ಸಮೀಕ್ಷೆಗಳು ಬಿಜೆಪಿ-ಜೆಡಿಯು ನೇತೃತ್ವದ ಎನ್‌ಡಿಎ ಮೈತ್ರಿಕೂಟಕ್ಕೆ ಬಹುಮತಕ್ಕೆ ಅಗತ್ಯವಾದ 122 ಸ್ಥಾನ ಬರಲಿದೆ ಎಂದಿದ್ದವು.   ಎನ್‌ಡಿಎ ಮೈತ್ರಿಕೂಟ 200 ಸ್ಥಾನ ಪಡೆಯುವ ಮೂಲಕ ನಿರೀಕ್ಷೆಗೂ ಮೀರಿ ಗೆಲುವು 

ಪಟನಾ: ಬಿಹಾರ ಚುನಾವಣೆ ಸಂಬಂಧ ಪ್ರಕಟವಾಗಿದ್ದ ಚುನಾವಣಾ ಪೂರ್ವ ಮತ್ತು ಚುನಾವಣೋತ್ತರ ಸಮೀಕ್ಷೆಗಳು ಪೂರ್ಣ ಪ್ರಮಾಣದಲ್ಲಿ ನಿಜವಾಗಿದೆ. ಎಲ್ಲಾ ಸಮೀಕ್ಷೆಗಳು ಬಿಜೆಪಿ-ಜೆಡಿಯು ನೇತೃತ್ವದ ಎನ್‌ಡಿಎ ಮೈತ್ರಿಕೂಟಕ್ಕೆ ಬಹುಮತಕ್ಕೆ ಅಗತ್ಯವಾದ 122 ಸ್ಥಾನ ಬರಲಿದೆ ಎಂದಿದ್ದವು. ಆದರೆ ಇದೀಗ ಎನ್‌ಡಿಎ ಮೈತ್ರಿಕೂಟ 200 ಸ್ಥಾನ ಪಡೆಯುವ ಮೂಲಕ ನಿರೀಕ್ಷೆಗೂ ಮೀರಿ ಗೆಲುವು ಸಾಧಿಸಿದೆ.

ಸಮೀಕ್ಷೆಗಳು

ಚಾಣಕ್ಯ ಸ್ಟ್ರಾಟಜೀಸ್‌ ಸಂಸ್ಥೆಯು ಎನ್‌ಡಿಎಗೆ 130-138, ಇಂಡಿಕೂಟಕ್ಕೆ 100-108 ಮತ್ತು ಇತರೆಗೆ 3-5 ಸೀಟು ಸಿಗುವ ಸಾಧ್ಯತೆಯಿದೆ ಎಂದಿತ್ತು. ದೈನಿಕ್‌ ಭಾಸ್ಕರ್‌ ಎನ್‌ಡಿಎಗೆ 145-160, ಇಂಡಿಕೂಟಕ್ಕೆ 73-91, ಇತರೆಗೆ 5-10. ಪಿ-ಮಾರ್ಕ್‌ ಎನ್‌ಡಿಎಗೆ 142-162, ಇಂಡಿಕೂಟಕ್ಕೆ 80-98, ಇತರೆ 1-7. ಪೀಪಲ್ಸ್‌ ಇನ್‌ಸೈಟ್‌ ಎನ್‌ಡಿಎಗೆ 133-148, ಇಂಡಿಕೂಟಕ್ಕೆ 87-102, ಇತರೆಗೆ 3-8 ಸೀಟುಗಳು ಸಿಗುವುದಾಗಿ ಹೇಳಿದ್ದವು. ಅದೇ ರೀತಿ ಪೋಲ್‌ ಆಫ್‌ ಪೋಲ್ಸ್‌ ಎನ್‌ಡಿಎಗೆ 147,ಇಂಡಿಕೂಟಕ್ಕೆ 90, ಇತರೆಗೆ 06 ಕ್ಷೇತ್ರಗಳು ಸಿಗುವ ಸಾಧ್ಯತೆ ಇದೆ ಎಂದು ಅಂದಾಜಿಸಿದ್ದವು.ಜೊತೆಗೆ ಎರಡೂ ಸಮೀಕ್ಷೆಗಳು ಕಾಂಗ್ರೆಸ್‌-ಆರ್‌ಜೆಡಿ ನೇತೃತ್ವದ ಮಹಾಘಟಬಂಧನಕ್ಕೆ ಕನಿಷ್ಠ 90-110 ಸೀಟುಗಳು ಸಿಗಬಹುದು ಎಂದು ಅಂದಾಜಿಸಿದ್ದವು.

ಮ್ಯಾಟ್ರಿಜ್‌ ಹತ್ತಿರದ ಸಮೀಕ್ಷೆ:

ಮ್ಯಾಟ್ರಿಜ್‌ ನಡೆಸಿದ ಚುನಾವಣೋತ್ತರ ಸಮೀಕ್ಷೆಯು ಫಲಿತಾಂಶದ ಹತ್ತಿರಕ್ಕೆ ಬಂದ ಸಂಖ್ಯೆಯಾಗಿದೆ. ಇದು ಎನ್‌ಡಿಎಗೆ 167, ಇಂಡಿಕೂಟಕ್ಕೆ70 ಬರಲಿದೆ ಎಂದು ಅಂದಾಜಿಸಿತ್ತು. ಇದು ಎನ್‌ಡಿಎ ಗೆಲುವನ್ನು ಹತ್ತಿರದಿಂದ ಅಂದಾಜಿಸಿತ್ತು.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ನ್ಯೂಯಾರ್ಕ್‌ ಯೋಗ ದಿನಕ್ಕೆ ಬೆಂಗಳೂರಿನ ನಾಗೇಂದ್ರ ನೇತೃತ್ವ
ಸೋದರಳಿಯ ಅಭಿಷೇಕ್‌ ಸರ್ವಾಧಿಕಾರಕ್ಕೆ ಮಮತಾ ಬ್ರೇಕ್‌