65 ಲಕ್ಷ ಬಿಹಾರ ಮತದಾರರ ಕೈಬಿಟ್ಟಿದ್ದೇಕೆ? : ಸುಪ್ರೀಂ ಪ್ರಶ್ನೆ

KannadaprabhaNewsNetwork |  
Published : Aug 15, 2025, 01:00 AM ISTUpdated : Aug 15, 2025, 04:14 AM IST
ಸುಪ್ರೀಂ ಕೋರ್ಟ್‌ | Kannada Prabha

ಸಾರಾಂಶ

ಬಿಹಾರದಲ್ಲಿ ನಡೆಯುತ್ತಿರುವ ವಿಶೇಷ ಮತಪಟ್ಟಿ ಪರಿಷ್ಕರಣೆ (ಎಸ್‌ಆರ್‌ಐ) ಪ್ರಕ್ರಿಯೆ ವೇಳೆ ಮತದಾರರ ಕರಡು ಪಟ್ಟಿಯಿಂದ ತೆಗೆದುಹಾಕಲಾಗಿರುವ 65 ಲಕ್ಷ ಜನರ ಪಟ್ಟಿಯನ್ನು ಬಹಿರಂಗಪಡಿಸುವಂತೆ ಸುಪ್ರೀಂ ಕೋರ್ಟ್‌ ಗುರುವಾರ ಚುನಾವಣಾ ಆಯೋಗಕ್ಕೆ ಆದೇಶಿಸಿದೆ.

 ನವದೆಹಲಿ : ಬಿಹಾರದಲ್ಲಿ ನಡೆಯುತ್ತಿರುವ ವಿಶೇಷ ಮತಪಟ್ಟಿ ಪರಿಷ್ಕರಣೆ (ಎಸ್‌ಆರ್‌ಐ) ಪ್ರಕ್ರಿಯೆ ವೇಳೆ ಮತದಾರರ ಕರಡು ಪಟ್ಟಿಯಿಂದ ತೆಗೆದುಹಾಕಲಾಗಿರುವ 65 ಲಕ್ಷ ಜನರ ಪಟ್ಟಿಯನ್ನು ಬಹಿರಂಗಪಡಿಸುವಂತೆ ಸುಪ್ರೀಂ ಕೋರ್ಟ್‌ ಗುರುವಾರ ಚುನಾವಣಾ ಆಯೋಗಕ್ಕೆ ಆದೇಶಿಸಿದೆ.

ಇದರ ಬೆನ್ನಲ್ಲೇ ಎಲ್ಲ ರಾಜಕೀಯ ಪಕ್ಷಗಳಿಗೆ ಪಟ್ಟಿ ವಿತರಣೆ ಆರಂಭಿಸಲಾಗಿದೆ ಎಂದು ಚುನಾವಣಾ ಆಯೋಗ ಹೇಳಿದೆ.

ಇದಕ್ಕೂ ಮುನ್ನ ಎಸ್‌ಆರ್‌ಐ ವಿರೋಧಿಸಿ ಸಲ್ಲಿಕೆಯಾಗಿದ್ದ ಅರ್ಜಿ ವಿಚಾರಣೆ ವಿಚಾರಣೆ ನಡೆಸಿದ ನ್ಯಾ। ಸೂರ್ಯಕಾಂತ್‌ ಮತ್ತು ಜೋಯ್‌ಮಲ್ಯಾ ಬಾಗ್ಚಿ ಅವರ ಪೀಠ, ‘ಮೃತಪಟ್ಟಿರುವವರು, ವಲಸೆ ಹೋದವರು, ಕ್ಷೇತ್ರ ಬದಲಿಸಿದವರು ಸೇರಿದಂತೆ ಎಲ್ಲರ ಮಾಹಿತಿಯುಳ್ಳ ಪಟ್ಟಿ ಪ್ರಕಟಿಸಬೇಕು ಹಾಗೂ ಅವರನ್ನು ತೆಗೆದುಹಾಕಿದ ಕಾರಣವನ್ನು ಕೊಡಬೇಕು. ಅಂತರ್ಜಾಲದಲ್ಲಿ ಅದರಲ್ಲಿ ಹೆಸರು ಹುಡುಕುವ (ಸರ್ಚ್) ಸವಲತ್ತು ಇರಬೇಕು’ ಎಂದು ಸೂಚಿಸಿತು.

ಜತೆಗೆ ಈ ಪಟ್ಟಿಯು ಎಲ್ಲಿ ಲಭ್ಯವಾಗಲಿದೆ ಎಂಬ ಬಗ್ಗೆ ಟೀವಿ, ರೇಡಿಯೋ, ಸ್ಥಳೀಯ ಮತ್ತು ಇಂಗ್ಲಿಷ್ ಪತ್ರಿಕೆಗಳಲ್ಲಿ ಮಾಹಿತಿ ನೀಡಬೇಕು ಎಂದು ನಿರ್ದೇಶಿಸಿತು. ಮತದಾರರು ಮತಸಂಖ್ಯೆಯನ್ನು ನಮೂದಿಸುವ ಮೂಲಕ ಪಟ್ಟಿಯಲ್ಲಿ ತಮ್ಮ ಕುರಿತ ಮಾಹಿತಿಯನ್ನು ನೋಡುವಂತೆ ಮಾಡಬೇಕು ಎಂದ ಪೀಠ, ಮತಪಟ್ಟಿಯಿಂದ ಹೆಸರು ಅಳಿಸಲ್ಪಟ್ಟವರು ಆಧಾರ್‌ ಕಾರ್ಡ್‌ನೊಂದಿಗೆ ಚುನಾವಣಾ ಅಧಿಕಾರಿಗಳನ್ನು ಸಂಪರ್ಕಿಸುವಂತೆ ಸೂಚಿಸಿದೆ. ಇದರ ಮುಂದಿನ ವಿಚಾರಣೆ ಆ.22ಕ್ಕೆ ನಡೆಯಲಿದೆ.

ಇದು ಭರವಸೆಯ ದಾರಿದೀಪ- ಕೈ:

ಬಿಹಾರದಲ್ಲಿ ಮತದಾರರ ಪಟ್ಟಿಯಿಂದ ಕೈಬಿಡಲ್ಪಟ್ಟವರ ಮಾಹಿತಿಯನ್ನು ನೀಡುವಂತೆ ಸುಪ್ರೀಂ ಕೋರ್ಟ್‌ ಆದೇಶಿಸಿದ ಬೆನ್ನಲ್ಲೇ ಇದಕ್ಕೆ ಹರ್ಷ ವ್ಯಕ್ತಪಡಿಸಿರುವ ಕಾಂಗ್ರೆಸ್‌, ‘ಈ ಆದೇಶವು ಭರವಸೆಯ ದಾರಿದೀಪ. ಸುಪ್ರೀಂ ಕೋರ್ಟ್‌ ಸಂವಿಧಾನವನ್ನು ನಿರ್ದಿಷ್ಟ, ಮನವರಿಕೆಯಾಗುವ ಮತ್ತು ಧೈರ್ಯಶಾಲಿ ರೀತಿಯಲ್ಲಿ ಎತ್ತಿಹಿಡಿದೆ’ ಎಂದು ಶ್ಲಾಘಿಸಿದೆ. ‘ಪ್ರಧಾನಿ ನರೇಂದ್ರ ಮೋದಿ ಮತ್ತು ಅವರ ಪರವಾಗಿರುವವರು ಮತ್ತು ತಂತ್ರಗಳಿಂದ ಗಣರಾಜ್ಯವನ್ನು ರಕ್ಷಿಸಿಸುವುದಕ್ಕಾಗಿ ಸುದೀರ್ಘ ಹೋರಾಟ ನಡೆದಿದೆ. ಆದರೆ ಇಂದಿನ ಸುಪ್ರೀಂ ಆದೇಶ ಈ ಕಡೆಗಿನ ಮೊದಲ ಮಹತ್ವದ ಹೆಜ್ಜೆಯಾಗಿದೆ’ ಎಂದು ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಜೈರಾಂ ರಮೇಶ್‌ ಹೇಳಿದ್ದಾರೆ.

- ಬಿಹಾರದಲ್ಲಿ ವಿಶೇಷ ಮತಪಟ್ಟಿ ಪರಿಷ್ಕರಣೆ ಅಭಿಯಾನ ನಡೆದಿತ್ತು. ಅದು ವಿವಾದಕ್ಕೆ ಕಾರಣವಾಗಿತ್ತು

- ಈ ಪ್ರಕ್ರಿಯೆ ವೇಳೆ 65 ಲಕ್ಷ ಮತದಾರರನ್ನು ಚುನಾವಣಾ ಆಯೋಗ ಮತಪಟ್ಟಿಯಿಂದ ಕೈಬಿಟ್ಟಿತ್ತು

- ಈ ಪ್ರಕರಣ ಈಗ ಸುಪ್ರೀಂಕೋರ್ಟ್‌ ಮೆಟ್ಟಿಲೇರಿದೆ. 65 ಲಕ್ಷ ಮತದಾರರ ಕೈಬಿಟ್ಟಿದ್ದಕ್ಕೆ ಕಾರಣ ಏನು?

- ಅಲ್ಲರ ಮಾಹಿತಿಯನ್ನು ಡಿಜಿಟಲ್‌ ರೂಪದಲ್ಲಿ ಬಹಿರಂಗಪಡಿಸಲು ಸರ್ವೋಚ್ಚ ನ್ಯಾಯಾಲಯ ಸೂಚನೆ

- ಈಗಾಗಲೇ ರಾಜಕೀಯ ಪಕ್ಷಗಳಿಗೆ ಆ ರೀತಿಯ ಮತದಾರರ ಪಟ್ಟಿ ವಿತರಣೆ ಆರಂಭ: ಚು. ಆಯೋಗ

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಕ್ಯಾನ್ಸರ್‌ ಅಂಶದ ಆತಂಕ: ದೇಶವ್ಯಾಪಿ ಮೊಟ್ಟೆ ಟೆಸ್ಟ್‌
ವೈದ್ಯೆಯ ಹಿಜಾಬ್‌ ಎಳೆದ ಸಿಎಂ ನಿತೀಶ್‌: ವಿವಾದ