ದಕ್ಷಿಣ ಭಾರತದಲ್ಲಿ ಮಿಷನ್‌ - 50ಗೆ ಬಿಜೆಪಿ ಪಣ

KannadaprabhaNewsNetwork |  
Published : Jan 04, 2024, 01:45 AM ISTUpdated : Jan 05, 2024, 01:03 PM IST
MODI

ಸಾರಾಂಶ

ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ದಕ್ಷಿಣ ಭಾರತದಲ್ಲಿ 40-50 ಕ್ಷೇತ್ರಗಳನ್ನು ಗೆಲ್ಲುವ ಗುರಿ ಹೊಂದಿದ್ದು, ಆ ನಿಟ್ಟಿನಲ್ಲಿ  ಪ್ರಧಾನಿ ನರೇಂದ್ರ ಮೋದಿಯವರು ಮೂರು ದಿನಗಳ ಕಾಲ ದಕ್ಷಿಣ ಭಾರತದ ಪ್ರವಾಸ ಮಾಡುತ್ತಿದ್ದಾರೆ.

ನವದೆಹಲಿ: ಲೋಕಸಭಾ ಚುನಾವಣೆಗೆ ಬಿಜೆಪಿ ಈಗಾಗಲೇ ತೆರೆಮರೆಯಲ್ಲಿ ಸಿದ್ಧತೆ ಆರಂಭಿಸಿದ್ದು, ತಾನು ಹಾಕಿಕೊಂಡಿರುವ 400 ಸೀಟುಗಳ ಗುರಿಯನ್ನು ತಲುಪಲು ದಕ್ಷಿಣ ಭಾರತದಲ್ಲಿ 40-50 ಕ್ಷೇತ್ರಗಳನ್ನು ಗೆಲ್ಲುವ ಗುರಿ ಹಾಕಿಕೊಂಡಿದೆ.ಇದರ ಭಾಗವಾಗಿಯೇ ಪ್ರಧಾನಿ ನರೇಂದ್ರ ಮೋದಿಯವರು ಮೂರು ದಿನಗಳ ಕಾಲ ದಕ್ಷಿಣ ಭಾರತದ ಪ್ರವಾಸ ಮಾಡುತ್ತಿದ್ದಾರೆ.

 ತಮಿಳುನಾಡು ಹಾಗೂ ಲಕ್ಷದ್ವೀಪದಲ್ಲಿ ಸಾವಿರಾರು ಕೋಟಿ ರು. ಕಾಮಗಾರಿಗೆ ಕಳೆದ 2 ದಿನದಲ್ಲಿ ಚಾಲನೆ ನೀಡಿದ್ದಾರೆ.. ಅಲ್ಲದೆ ಕೇರಳದ ತ್ರಿಶೂರ್‌ನಲ್ಲಿ ಬಿಜೆಪಿ ಬೃಹತ್‌ ಸಮಾವೇಶದಲ್ಲಿ ನಡೆಸಿದ್ದಾರೆ. ಎನ್ನಲಾಗಿದೆ. ಜೊತೆಗೆ ಕೇರಳದ ವಯನಾಡಿನಲ್ಲೂ ರಾಹುಲ್‌ ಗಾಂಧಿ ವಿರುದ್ಧ ಪ್ರಬಲ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಚಿಂತಿಸುತ್ತಿದೆ ಎಂದು ಗೊತ್ತಾಗಿದೆ.

ಕಳೆದ ಬಾರಿ 25 ಕ್ಷೇತ್ರ ಗೆದ್ದಿದ್ದ ಕರ್ನಾಟಕದ ವಿಧಾನಸಭಾ ಚುನಾವಣೆಯಲ್ಲಿ ಪಕ್ಷ ಸೋತಿದ್ದರೂ ಮತ್ತೆ ಎಲ್ಲ 25 ಸ್ಥಾನಗಳನ್ನು ಉಳಿಸಿಕೊಳ್ಳಲು ತಾಲೀಮು ಆರಂಭಿಸಿದೆ. ಅಲ್ಲದೆ ನೆರೆಯ ತೆಲಂಗಾಣದಲ್ಲೂ ಕಳೆದ ಬಾರಿ ಗೆದ್ದಿದ್ದ 4 ಸ್ಥಾನಗಳ ಜೊತೆಗೆ ಮತ್ತಷ್ಟು ಸ್ಥಾನಗಳನ್ನು ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದೆ. ಜೊತೆಗೆ ಆಂಧ್ರ ಪ್ರದೇಶದಲ್ಲೂ ಸಹ ಖಾತೆ ತೆರೆಯಲು ಎದುರು ನೋಡುತ್ತಿದೆ ಮತ್ತು ತಮಿಳುನಾಡಿನಲ್ಲಿ ಸಾಧ್ಯವಾದಷ್ಟು ಸ್ಥಾನ ಗೆಲ್ಲಲು ತಂತ್ರ ರೂಪಿಸಿದೆ.

 ಒಟ್ಟಾರೆ, ಕಳೆದ ಬಾರಿ ಕರ್ನಾಟಕದಲ್ಲಿ ಗೆದ್ದಿದ್ದ 25 ಸ್ಥಾನಗಳನ್ನು ಉಳಿಸಿಕೊಳ್ಳುವ ಜೊತೆಗೆ ಇತರ ರಾಜ್ಯಗಳಿಂದ ಕನಿಷ್ಠ 15-25 ಕ್ಷೇತ್ರ ಗೆಲ್ಲುವ ಮೂಲಕ ಮಿಷನ್‌-50 ಸಾಧಿಸುವ ಗುರಿ ಹಾಕಿಕೊಂಡಿದೆ ಎಂದು ಮಾಧ್ಯಮ ವರದಿಯೊಂದು ಹೇಳಿದೆ. ದಕ್ಷಿಣ ಭಾರತದಲ್ಲಿರುವ 129 ಲೋಕಸಭಾ ಕ್ಷೇತ್ರಗಳ ಪೈಕಿ ಕಳೆದ ಬಾರಿ ಕೇವಲ 29 ಕ್ಷೇತ್ರಗಳಲ್ಲಿ ಬಿಜೆಪಿ ಗೆದ್ದಿತ್ತು.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಕಿಚ್ಚನ ವೀರಾವೇಶ ದರ್ಶನ್ ವಿರುದ್ಧ ಅಲ್ಲ, ಪೈರಸಿ ಬಗ್ಗೆ!
ಜಿ ರಾಮ್‌ ಜಿಗೆ ರಾಜ್ಯ ಶೇ.40ರಷ್ಟು ಪಾಲು ನೀಡಲಾಗದು : ಡಿಕೆಶಿ