ಮೋದಿ ಕರೆಗೆ ಓಗೊಟ್ಟು ಸಾಮೂಹಿಕ ವಿವಾಹದಲ್ಲಿ ಬಿಜೆಪಿ ಶಾಸಕನ ಮದ್ವೆ!

KannadaprabhaNewsNetwork |  
Published : May 30, 2026, 01:30 AM IST
BJP

ಸಾರಾಂಶ

ಛತ್ತೀಸ್‌ಗಢ ಸರ್ಕಾರ ಆಯೋಜಿಸಿರುವ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಇಲ್ಲಿನ ಬಿಜೆಪಿ ಶಾಸಕ ದಿಪೇಶ್‌ ಸಾಹು ಕೂಡ ಮದುವೆಯಾಗಲಿದ್ದಾರೆ. ಮುಖ್ಯಮಂತ್ರಿ ಕನ್ಯಾ ವಿವಾಹ ಯೋಜನೆಯಡಿ ಭಾನುವಾರ ಈ ಮದುವೆ ನಡೆಯಲಿದೆ

ರಾಯ್ಪುರ: ಛತ್ತೀಸ್‌ಗಢ ಸರ್ಕಾರ ಆಯೋಜಿಸಿರುವ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಇಲ್ಲಿನ ಬಿಜೆಪಿ ಶಾಸಕ ದಿಪೇಶ್‌ ಸಾಹು ಕೂಡ ಮದುವೆಯಾಗಲಿದ್ದಾರೆ.

ಮುಖ್ಯಮಂತ್ರಿ ಕನ್ಯಾ ವಿವಾಹ ಯೋಜನೆಯಡಿ ಮದುವೆ

ಮುಖ್ಯಮಂತ್ರಿ ಕನ್ಯಾ ವಿವಾಹ ಯೋಜನೆಯಡಿ ಭಾನುವಾರ ಈ ಮದುವೆ ನಡೆಯಲಿದ್ದು, ಇದೇ ಮೊದಲ ಬಾರಿಗೆ ಶಾಸಕರೊಬ್ಬರು ಇತರ 23 ಜೋಡಿಗಳ ಜತೆ ಮದುವೆಯಾಗಲಿದ್ದಾರೆ. ‘ಮದುವೆಗಳಲ್ಲಿ ಖರ್ಚಾಗುವ ಕೋಟ್ಯಂತರ ದುಂದುವೆಚ್ಚದ ಬದಲು ಸರಳತೆ ಸಂದೇಶ ಸಾರಲು ಮತ್ತು ಪ್ರಧಾನಿ ನರೇಂದ್ರ ಮೋದಿಯವರ ಮಿತವ್ಯಯಕ್ಕೆ ಮನ್ನಣೆ ಕೊಟ್ಟು ಈ ನಿರ್ಧಾರ ಕೈಗೊಳ್ಳಲಾಗಿದೆ’ ಎಂದು ದಿಪೇಶ್ ಹೇಳಿಕೊಂಡಿದ್ದಾರೆ.  

ಮುಖ್ಯಮಂತ್ರಿ ವಿಷ್ಣು ದೇವ್‌ ಸಾಯಿ ಸೇರಿದಂತೆ ಸರ್ಕಾರದ ಪ್ರಮುಖರು ಭಾಗಿ

ಈ ಮದುವೆ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ವಿಷ್ಣು ದೇವ್‌ ಸಾಯಿ ಸೇರಿದಂತೆ ಸರ್ಕಾರದ ಪ್ರಮುಖರು ಭಾಗಿಯಾಗುವ ಸಾಧ್ಯತೆಯಿದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

‘ಜಿರಳೆ ದಾಳಿ’ಯಿಂದಒಂದೇ ದಿನದಲ್ಲಿ 120 ದಿಲ್ಲಿ ಪೊಲೀಸರಿಗೆ ಪೆಟ್ಟು!
ಪ್ರಶ್ನೆಪತ್ರಿಕೆ ಲೀಕ್‌ ತಡೆರಾಷ್ಟ್ರೀಯ ಜವಾಬ್ದಾರಿ