ಉಮರ್‌ ಪರ ಅಮೆರಿಕ ಸಂಸದೆ ಜತೆ ರಾಹುಲ್ : ಬಿಜೆಪಿ ಕಿಡಿ

KannadaprabhaNewsNetwork |  
Published : Jan 03, 2026, 03:15 AM IST
Rahul

ಸಾರಾಂಶ

  ಜನಿಸ್ ಶಾಕೋವ್ಸ್ಕಿಎಂಬ ಸಂಸದೆಯ ಜತೆ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ 2024ರಲ್ಲಿ ಸಭೆ ನಡೆಸಿದ ಫೋಟೊವನ್ನು ಬಿಜೆಪಿ ಹಂಚಿಕೊಂಡಿದ್ದು, ಇದು ರಾಹುಲ್ ಅವರ ಭಾರತವಿರೋಧಿ ನಡೆಯನ್ನು ಸ್ಪಷ್ಟಪಡಿಸುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದೆ.

 ನವದೆಹಲಿ: 2020ರ ದೆಹಲಿ ಗಲಭೆಯ ಆರೋಪಿ ಉಮರ್‌ ಖಾಲಿದ್‌ನನ್ನು ನ್ಯಾಯಪರವಾಗಿ ವಿಚಾರಣೆ ನಡೆಸುವಂತೆ ಭಾರತ ಸರ್ಕಾರಕ್ಕೆ ಅಮೆರಿಕದ 8 ಸಂಸದರು ಪತ್ರ ಬರೆದು ಆಗ್ರಹಿಸಿದ್ದಾರೆ.

ಜನಿಸ್ ಶಾಕೋವ್ಸ್ಕಿಎಂಬ ಸಂಸದೆಯ ಜತೆ ಕಾಂಗ್ರೆಸ್‌ ನಾಯಕ ರಾಹುಲ್‌

 ಇವರಲ್ಲಿ ಒಬ್ಬರಾದ ಜನಿಸ್ ಶಾಕೋವ್ಸ್ಕಿಎಂಬ ಸಂಸದೆಯ ಜತೆ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ 2024ರಲ್ಲಿ ಸಭೆ ನಡೆಸಿದ ಫೋಟೊವನ್ನು ಬಿಜೆಪಿ ಹಂಚಿಕೊಂಡಿದ್ದು, ಇದು ರಾಹುಲ್ ಅವರ ಭಾರತವಿರೋಧಿ ನಡೆಯನ್ನು ಸ್ಪಷ್ಟಪಡಿಸುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದೆ.

ಒಮರ್‌ ಸಭೆ ನಡೆಸುತ್ತಿರುವ ಫೋಟೊ ಪೋಸ್ಟ್‌

ಬಿಜೆಪಿ ವಕ್ತಾರ ಪ್ರದೀಪ್‌ ಭಂಡಾರಿ, 2024ರಲ್ಲಿ ರಾಹುಲ್‌ ಹಾಗೂ ಅಮೆರಿಕದ ಇಬ್ಬರು ಸಂಸದರಾದ ಶಾಕೋವ್ಸ್ಕಿ ಮತ್ತು ಇಲ್ಹಾನ್ ಒಮರ್‌ ಸಭೆ ನಡೆಸುತ್ತಿರುವ ಫೋಟೊ ಪೋಸ್ಟ್‌ ಮಾಡಿ, ‘ಪ್ರತಿ ಬಾರಿ ಭಾರತವಿರೋಧಿ ವಿಚಾರ ವಿದೇಶಗಳಲ್ಲಿ ಹರಡಿದಾಗಲೂ ಒಂದು ಹೆಸರು (ರಾಹುಲ್ ಗಾಂಧಿ) ಹಿನ್ನೆಲೆಯಲ್ಲಿ ಕೇಳಿಬರುತ್ತದೆ. ಭಾರತವನ್ನು ದುರ್ಬಲಗೊಳಿಸಲು, ಅದರ ಸರ್ಕಾರದ ಹೆಸರು ಕೆಡಿಸಲು ಮತ್ತು ಅದರ ಉಗ್ರವಿರೋಧಿ ಕಾನೂನುಗಳನ್ನು ದುರ್ಬಲಗೊಳಿಸಲು ಬಯಸುವವರು ಆತನ ಸುತ್ತ ಸೇರಿಕೊಳ್ಳುತ್ತಾರೆ’ ಎಂದು ಕಿಡಿ ಕಾರಿದ್ದಾರೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಇರಾನ್‌ ಸರ್ಕಾರದ ವಿರುದ್ಧ ಭಾರಿ ಜನತಾ ದಂಗೆ
ಗಿಗ್‌ ಕಾರ್ಮಿಕರ ಸೇವಾ ಭದ್ರತೆಗೆ ಕೇಂದ್ರ ನಿಯಮ