ಜಗತ್ತಿನ ಎರಡನೇ ಅತಿದೊಡ್ಡ ವಜ್ರ ಉತ್ಪಾದಕ ದೇಶ ಬೋಟ್ಸಾವಾನದಲ್ಲಿ ಬರೋಬ್ಬರಿ 2,492 ಕ್ಯಾರೆಟ್‌ನ (499 ಗ್ರಾಂ) ವಜ್ರದ ಕಲ್ಲು ಪತ್ತೆಯಾಗಿದೆ.
ನವದೆಹಲಿ: ಜಗತ್ತಿನ ಎರಡನೇ ಅತಿದೊಡ್ಡ ವಜ್ರ ಉತ್ಪಾದಕ ದೇಶ ಬೋಟ್ಸಾವಾನದಲ್ಲಿ ಬರೋಬ್ಬರಿ 2,492 ಕ್ಯಾರೆಟ್‌ನ (499 ಗ್ರಾಂ) ವಜ್ರದ ಕಲ್ಲು ಪತ್ತೆಯಾಗಿದೆ. ಇದು ವಿಶ್ವದಲ್ಲಿ ಇದುವರೆಗೆ ಪತ್ತೆಯಾದ ಎರಡನೇ ಅತಿ ದೊಡ್ಡ ಗಾತ್ರದ ವಜ್ರಮ ಎಂಬ ದಾಖಲೆಗೆ ಪಾತ್ರವಾಗಿದೆ. ಜೊತೆಗೆ ಕಳೆದ 100 ವರ್ಷಗಳಲ್ಲಿ ಕಂಡು ಬಂದ ಅತಿದೊಡ್ಡ ಗಾತ್ರದ ವಜ್ರ ಎಂಬ ದಾಖಲೆಗೂ ಪಾತ್ರವಾಗಿದೆ.
1905ರಲ್ಲಿ ದಕ್ಷಿಣ ಆಫ್ರಿಕಾದ ಕಲ್ಲಿನಾನ್‌ನಲ್ಲಿ 3106 ಕ್ಯಾರೆಟ್‌ನ ವಜ್ರ ಪತ್ತೆಯಾಗಿದ್ದು, ಇದುವರೆಗೆ ದೊರೆತಿರುವ ಅತಿದೊಡ್ಡ ಗಾತ್ರದ ವಜ್ರ ಎಂಬ ದಾಖಲೆ ಹೊಂದಿದೆ. ಇದರ ಕೆಲ ತುಂಡುಗಳನ್ನು ಬ್ರಿಟಿಷ್ ಮನೆತನದ ಕಿರೀಟಗಳಿಗೆ ಬಳಸಲಾಗಿತ್ತು.
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.