ಹೊಸ ಜಿಲ್ಲೆ, ತಾಲೂಕು ರಚನೆ : ರಾಜ್ಯಗಳಿಗೆ ಕೇಂದ್ರದಿಂದ ಡಿ.31ರ ಗಡುವು

KannadaprabhaNewsNetwork |  
Published : Jun 30, 2025, 12:34 AM ISTUpdated : Jun 30, 2025, 05:01 AM IST
ಗಣತಿ  | Kannada Prabha

ಸಾರಾಂಶ

‘ಜನಗಣತಿ 2026ರ ಏ.1ರಿಂದ ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ  ಹೊಸ ಜಿಲ್ಲೆ/ತಾಲೂಕು ರಚನೆ ಸೇರಿದಂತೆ ಗಡಿಗಳಿಗೆ ಸಂಬಂಧಿಸಿದ ಯಾವುದೇ ಪ್ರಸ್ತಾವಿತ ಬದಲಾವಣೆಗಳಿದ್ದರೆ ಡಿ.31ರ ಒಳಗೆ ಮುಗಿಸಿಕೊಳ್ಳಿ’ ಎಂದು ರಾಜ್ಯಗಳಿಗೆ ಕೇಂದ್ರ ಸರ್ಕಾರ ನಿರ್ದೇಶಿಸಿದೆ.

ನವದೆಹಲಿ: ‘ಜನಗಣತಿ 2026ರ ಏ.1ರಿಂದ ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ, ಅದಕ್ಕಿಂತ 3 ತಿಂಗಳ ಮೊದಲೇ ಜಿಲ್ಲೆ, ಉಪಜಿಲ್ಲೆ, ತಾಲೂಕು, ತೆಹಸಿಲ್, ಪೊಲೀಸ್ ಠಾಣೆಗಳಂತಹ ಆಡಳಿತ ಘಟಕಗಳ ಗಡಿಗಳನ್ನು ಅಂತಿಮಗೊಳಿಸಲಾಗುತ್ತದೆ. ಹೀಗಾಗಿ ಹೊಸ ಜಿಲ್ಲೆ/ತಾಲೂಕು ರಚನೆ ಸೇರಿದಂತೆ ಗಡಿಗಳಿಗೆ ಸಂಬಂಧಿಸಿದ ಯಾವುದೇ ಪ್ರಸ್ತಾವಿತ ಬದಲಾವಣೆಗಳಿದ್ದರೆ ಡಿ.31ರ ಒಳಗೆ ಮುಗಿಸಿಕೊಳ್ಳಿ’ ಎಂದು ರಾಜ್ಯಗಳಿಗೆ ಕೇಂದ್ರ ಸರ್ಕಾರ ನಿರ್ದೇಶಿಸಿದೆ.

ಇದರಿಂದಾಗಿ ಹೊಸ ತಾಲೂಕು ಹಾಗೂ ಜಿಲ್ಲೆ ರಚನೆ ಮಾಡುವುದಿದ್ದರೆ ಡಿ.31ರೊಳಗೆ ಮಾಡಬೇಕು. ನಂತರ ಯಾವುದೇ ಹೊಸ ತಾಲೂಕು ಹಾಗೂ ಜಿಲ್ಲೆ ರಚನೆ ಮಾಡುವಂತಿಲ್ಲ ಎಂದು ಕೇಂದ್ರ ಸೂಚಿಸಿದಂತಾಗಿದೆ. ಗಣತಿ ಪ್ರಕ್ರಿಯೆ ಮುಗಿವವರೆಗೆ ಈ ಸೂಚನೆ ಇದು ಜಾರಿಯಲ್ಲಿರುತ್ತದೆ.

ಕರ್ನಾಟಕದಲ್ಲಿ ತುಮಕೂರು ಜಿಲ್ಲೆಯನ್ನು 3 ಭಾಗ ಹಾಗೂ ಬೆಳಗಾವಿಯನ್ನು 2 ಭಾಗ ಮಾಡಬೇಕು ಎಂಬ ಬೇಡಿಕೆ ಇರುವ ನಡುವೆಯೇ ಕೇಂದ್ರ ಸರ್ಕಾರದ ಈ ಸೂಚನೆ ಮಹತ್ವ ಪಡೆದಿದೆ.

ಕೇಂದ್ರದ ಸೂಚನೆ ಏನು?:

ಜನಗಣತಿ ಸಂಬಂಧ ಎಲ್ಲ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಜನಗಣತಿ ಆಯುಕ್ತ ಹಾಗೂ ರಿಜಿಸ್ಟ್ರಾರ್ ಜನರಲ್ ಮೃತ್ಯುಂಜಯ ಕುಮಾರ್ ನಾರಾಯಣ್ ಪತ್ರ ಬರೆದಿದ್ದು, ‘ಜನಗಣತಿಗಾಗಿ, ಎಲ್ಲಾ ಹಳ್ಳಿ ಮತ್ತು ಪಟ್ಟಣಗಳನ್ನು ಏಕರೂಪದ ಬ್ಲಾಕ್‌ಗಳಾಗಿ ವಿಂಗಡಿಸಲಾಗಿದೆ. 

ಬ್ಲಾಕ್‌ಗಳನ್ನು ಅಂತಿಮಗೊಳಿಸಿದ ನಂತರ, ಗಡಿಗಳಿಗೆ ಸಂಬಂಧಿಸಿದ ಯಾವುದೇ ಬದಲಾವಣೆ ಮಾಡಲು ಸಾಧ್ಯವಾಗುವುದಿಲ್ಲ. ಜಿಲ್ಲೆ, ಉಪಜಿಲ್ಲೆ, ತಾಲೂಕು ಮತ್ತು ಪೊಲೀಸ್ ಠಾಣೆಗಳಂತಹ ಆಡಳಿತ ಘಟಕಗಳ ಗಡಿಗಳನ್ನು ಅಂತಿಮಗೊಳಿಸಿದ 3 ತಿಂಗಳ ನಂತರವೇ ಜನಗಣತಿ ನಡೆಸಬಹುದು. ಗಣತಿಯನ್ನು ಏ.1ರಿಂದ ಆರಂಭಿಸಲಾಗುತ್ತದೆ. ಹಾಗಾಗಿ ಡಿ.31ಕ್ಕೂ ಮೊದಲೇ ಗಡಿಗಳಿಗೆ ಸಂಬಂಧಿಸಿದ ಯಾವುದೇ ಪ್ರಸ್ತಾವಿತ ಬದಲಾವಣೆಗಳಿದ್ದರೆ ಮಾಡಿಕೊಳ್ಳಬೇಕು’ ಎಂದು ನಿರ್ದೇಶಿಸಿದ್ದಾರೆ.

  • ಜನಗಣತಿ 2026ರ ಏ.1ರಿಂದ ಆರಂಭವಾಗುತ್ತಿರುವ ಹಿನ್ನೆಲೆ
  • 3 ತಿಂಗಳ ಮೊದಲೇ ಜಿಲ್ಲೆ, ಉಪಜಿಲ್ಲೆ, ತಾಲೂಕು, ತೆಹಸಿಲ್, ಪೊಲೀಸ್ ಠಾಣೆಗಳಂತಹ ಆಡಳಿತ ಘಟಕಗಳ ಗಡಿಗಳನ್ನು ಅಂತಿಮಗೊಳಿಸಲಾಗುತ್ತದೆ
  • ಹೊಸ ಜಿಲ್ಲೆ/ತಾಲೂಕು ರಚನೆ ಸೇರಿದಂತೆ ಗಡಿಗಳಿಗೆ ಸಂಬಂಧಿಸಿದ ಯಾವುದೇ ಪ್ರಸ್ತಾವಿತ ಬದಲಾವಣೆಗಳಿದ್ದರೆ ಡಿ.31ರ ಒಳಗೆ ಮುಗಿಸಿಕೊಳ್ಳಿ
  • ರಾಜ್ಯಗಳಿಗೆ ಕೇಂದ್ರ ಸರ್ಕಾರ ನಿರ್ದೇಶನ

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಇರಾನ್‌ನಲ್ಲೀಗ ಸರ್ಕಾರದ ಬೆಂಬಲಿಗರ ಬಲಪ್ರದರ್ಶನ!
ಒಂದೇ ದಿನ 2 ಬಾರಿ ಪ್ರಜ್ಞೆ ತಪ್ಪಿದ ಧನಕರ್‌ : ದಿಲ್ಲಿ ಏಮ್ಸ್‌ಗೆ ದಾಖಲು