ದುಡಿಮೆಗೆ ಸುಣ್ಣ ಬಳೀತಿದ್ದವಗೆ ನೀಟ್‌ ಪರಿಕ್ಷೇಲಿ 99.16% ಅಂಕ

KannadaprabhaNewsNetwork |  
Published : Jul 20, 2026, 05:45 AM IST
ನೀಟ್ | Kannada Prabha

ಸಾರಾಂಶ

ಮನೆಬಿಟ್ಟು ಹೋಗಿರುವ ತಂದೆ, ಗದ್ದೆ ಕೆಲಸ ಮಾಡುತ್ತಿರುವ ತಾಯಿ, ಪರಿವಾರಕ್ಕೆ ನೆರವಾಗಲೆಂದು 8ನೇ ತರಗತಿಗೇ ಓದು ನಿಲ್ಲಿಸಿದ ತಂಗಿಯ ಜತೆಗೆ ಮನೆ ನಡೆಸಲೆಂದು ಗೋಡೆಗೆ ಸುಣ್ಣ ಬಳಿಯುವ ಕೆಲಸ ಮಾಡುತ್ತಾ ವೈದ್ಯನಾಗುವ ಕನಸು ಕಾಣುತ್ತಿದ್ದ ಬುಂದಿ ಜಿಲ್ಲೆಯ ಸೂರಜ್‌ ಸೈನಿ ಎಂಬ ವಿದ್ಯಾರ್ಥಿ ಈ ವರ್ಷದ ನೀಟ್‌ ಪರೀಕ್ಷೆಯಲ್ಲಿ ಶೇ.99.16 ಪಡೆದಿದ್ದಾರೆ.

16569ನೇ ರ್‍ಯಾಂಕ್‌ ಪಡೆದ ಸೂರಜ್‌

ಕೋಟಾ: ಮನೆಬಿಟ್ಟು ಹೋಗಿರುವ ತಂದೆ, ಗದ್ದೆ ಕೆಲಸ ಮಾಡುತ್ತಿರುವ ತಾಯಿ, ಪರಿವಾರಕ್ಕೆ ನೆರವಾಗಲೆಂದು 8ನೇ ತರಗತಿಗೇ ಓದು ನಿಲ್ಲಿಸಿದ ತಂಗಿಯ ಜತೆಗೆ ಮನೆ ನಡೆಸಲೆಂದು ಗೋಡೆಗೆ ಸುಣ್ಣ ಬಳಿಯುವ ಕೆಲಸ ಮಾಡುತ್ತಾ ವೈದ್ಯನಾಗುವ ಕನಸು ಕಾಣುತ್ತಿದ್ದ ಬುಂದಿ ಜಿಲ್ಲೆಯ ಸೂರಜ್‌ ಸೈನಿ ಎಂಬ ವಿದ್ಯಾರ್ಥಿ ಈ ವರ್ಷದ ನೀಟ್‌ ಪರೀಕ್ಷೆಯಲ್ಲಿ ಶೇ.99.16 ಪಡೆದಿದ್ದಾರೆ. ಒಟ್ಟಾರೆಯಾಗಿ 16569ನೇ ರ್‍ಯಾಂಕ್‌ ಪಡೆದ ಸೂರಜ್‌ ಒಬಿಸಿ ವರ್ಗದಲ್ಲಿ 7800ನೇ ರ್‍ಯಾಂಕ್‌ ಪಡೆದಿದ್ದು, ಪ್ರತಿಷ್ಠಿತ ಸರ್ಕಾರಿ ಕಾಲೇಜಿಗೆ ಸೇರುವ ಅವಕಾಶ ಪಡೆದಿದ್ದಾನೆ.

ಬಡತನದ ಬೇಗೆಯು ಸೂರಜ್‌ರ ಓದಿನ ಕನಸನ್ನು ಎಂದೂ ಕುಗ್ಗಿಸಿರಲಿಲ್ಲ. 10ನೇ ತರಗತಿಯಲ್ಲಿ ಈತನಿಗೆ ಶೇ.87 ಮತ್ತು ಪಿಯುಸಿಯಲ್ಲಿ ಶೇ.85 ಅಂಕ ಬಂದಿತ್ತು. ವೈದ್ಯನಾಗುವ ಉದ್ದೇಶದಿಂದ ಜೀವಶಾಸ್ತ್ರ ಅಧ್ಯಯನಕ್ಕೆ ಮುಂದಾದ ವಿದ್ಯಾರ್ಥಿ, ಅದರ ಶುಲ್ಕ ಭರಿಸಲು ಹಣ ಹೊಂದಿಸುವುದಕ್ಕಾಗಿ ಸಂಬಂಧಿಕರ ಜತೆ ಸೇರಿ ಮನೆಗಳಿಗೆ ಸುಣ್ಣ ಬಳಿಯುವ ಕೆಲಸ ಆರಿಸಿಕೊಂಡಿದ್ದ. 2024ರಲ್ಲಿ ನೀಟ್‌ ಪರೀಕ್ಷೆ ಬರೆದಿದ್ದರಾದರೂ ಉತ್ತೀರ್ಣರಾಗಿರಲಿಲ್ಲ. ಬಳಿಕ ಶಿಕ್ಷಾ ಸಂಬಲ್ ಕಾರ್ಯಕ್ರಮದಡಿ ಉಚಿತ ತರಬೇತಿ ಪಡೆದು ತಮ್ಮಾಸೆ ಈಡೇರಿಸಿಕೊಂಡ ಬಳಿಕ ಮಾತನಾಡಿದ ಸೂರಜ್‌, ‘ಪರಿವಾರವನ್ನು ಬಡತನದಿಂದ ಮೇಲೆತ್ತಿ, ಸೋದರಿಗೆ ಶಿಕ್ಷಣ ಕೊಡಿಸುವುದೇ ನನ್ನ ಉದ್ದೇಶ’ ಎಂದಿದ್ದಾನೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಕೇಂದ್ರಕ್ಕೆ ಜಿರಳೆ ಪಕ್ಷದ ಮೂರು ಬೇಡಿಕೆ
ಬೆಂಗ್ಳೂರು ಜೊತೆ ಡೀಲ್‌ಗೆ ಒತ್ತು ನೀಡಿದ್ದ ಬರ್ನ್‌ಹ್ಯಾಂ ಬ್ರಿಟನ್‌ ನೂತನ ಪ್ರಧಾನಿ