₹10371 ಕೋಟಿ ಎಐ ಮಿಷನ್‌ಗೆ ಸಂಪುಟ ಅಸ್ತು

KannadaprabhaNewsNetwork |  
Published : Mar 08, 2024, 01:46 AM ISTUpdated : Mar 08, 2024, 12:57 PM IST
ಸಂಸತ್‌ | Kannada Prabha

ಸಾರಾಂಶ

ಕೇಂದ್ರ ಸಚಿವ ಸಂಪುಟವು ಗುರುವಾರ 10,371.92 ಕೋಟಿ ರು.ಗಳ ಕೃತಕ ಬುದ್ಧಿಮತ್ತೆ (ಎಐ) ಮಿಷನ್‌ಗೆ ಅನುಮೋದನೆ ನೀಡಿದೆ. ಇದು ಕೃತಕ ಬುದ್ಧಿಮತ್ತೆ ಕ್ಷೇತ್ರಕ್ಕೆ ಕಾಲಿಡುವ ಕಂಪನಿಗಳು ಹಾಗೂ ಸ್ಟಾರ್ಟಪ್‌ಗಳಿಗೆ ಸಬ್ಸಿಡಿ ನೀಡುವ ಯೋಜನೆಯಾಗಿದೆ.

ನವದೆಹಲಿ: ಕೇಂದ್ರ ಸಚಿವ ಸಂಪುಟವು ಗುರುವಾರ 10,371.92 ಕೋಟಿ ರು.ಗಳ ಕೃತಕ ಬುದ್ಧಿಮತ್ತೆ (ಎಐ) ಮಿಷನ್‌ಗೆ ಅನುಮೋದನೆ ನೀಡಿದೆ. 

ಇದು ಕೃತಕ ಬುದ್ಧಿಮತ್ತೆ ಕ್ಷೇತ್ರಕ್ಕೆ ಕಾಲಿಡುವ ಕಂಪನಿಗಳು ಹಾಗೂ ಸ್ಟಾರ್ಟಪ್‌ಗಳಿಗೆ ಸಬ್ಸಿಡಿ ನೀಡುವ ಯೋಜನೆಯಾಗಿದೆ.

ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ಯೋಜನೆಗೆ ಒಪ್ಪಿಗೆ ನೀಡಲಾಯಿತು.5 ವರ್ಷಗಳ ಅವಧಿಯ ಯೋಜನೆ ಇದಾಗಿದೆ. 

ಭಾರತ ಎಐ ಮಿಷನ್ ಅಡಿಯಲ್ಲಿ, ದೇಶದಲ್ಲಿ ಎಐ ಕಂಪ್ಯೂಟಿಂಗ್ ಘಟಕಗಳನ್ನು ಸ್ಥಾಪಿಸಲು ಬಯಸುವ ಖಾಸಗಿ ಕಂಪನಿಗಳಿಗೆ ತನ್ನ ನಿಧಿಯ ಮೂಲಕ ಸರ್ಕಾರ ಸಬ್ಸಿಡಿ ನೀಡಲಿದೆ. 

ಜತೆಗೆ ಎಐ ಸ್ಟಾರ್ಟ್-ಅಪ್‌ಗಳಿಗೆ ಆರಂಭದ ಹಂತದಲ್ಲೇ ಸರ್ಕಾರದ ನಿಧಿಯನ್ನು ಒದಗಿಸಲಾಗುತ್ತದೆ. ಕಳೆದ ವರ್ಷ ಪ್ರಧಾನಿ ನರೇಂದ್ರ ಮೋದಿ ಅವರು ಎಐ ಮಿಷನ್ ಘೋಷಿಸಿದ್ದರು.

ಈ ಮಿಷನ್ ಅಡಿಯಲ್ಲಿ, ಕೃಷಿ, ಆರೋಗ್ಯ ಮತ್ತು ಶಿಕ್ಷಣದಂತಹ ಕ್ಷೇತ್ರಗಳಲ್ಲಿ ಎಐ ಅಪ್ಲಿಕೇಶನ್‌ಗಳನ್ನು ಉತ್ತೇಜಿಸಲಾಗುತ್ತದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಷೇರಿಗಿಂತ ಚಿನ್ನ ಬೆಳ್ಳಿ ಹೂಡಿಕೆಯೇ ಹೆಚ್ಚು ಲಾಭ
=‘ಚೈನೀಸ್’ ಎಂದು ಬೈದು ತ್ರಿಪುರದ ಯುವಕನ ಹತ್ಯೆ