ಹಿಂಗಾರು ಬೆಳೆ ರೈತರಿಗೆ ₹24,474 ಕೋಟಿ ರಸಗೊಬ್ಬರ ಸಬ್ಸಿಡಿ - ಕೇಂದ್ರ ಸಚಿವ ಸಂಪುಟ ಅನುಮೋದನೆ

KannadaprabhaNewsNetwork |  
Published : Sep 19, 2024, 01:48 AM ISTUpdated : Sep 19, 2024, 05:13 AM IST
ರಸಗೊಬ್ಬರ | Kannada Prabha

ಸಾರಾಂಶ

ಹಿಂಗಾರು ಬೆಳೆಗಾರರಿಗೆ ಕೈಗೆಟುಕುವ ದರದಲ್ಲಿ ರಸಗೊಬ್ಬರ ಒದಗಿಸಲು ಕೇಂದ್ರ ಸರ್ಕಾರ ₹24,474 ಕೋಟಿ ಸಬ್ಸಿಡಿ ಘೋಷಿಸಿದೆ. ಬುಡಕಟ್ಟು ಅಭಿವೃದ್ಧಿಗೆ ₹79,000 ಕೋಟಿ ಮತ್ತು ಪಿಎಂ-ಆಶಾ ಯೋಜನೆಗೆ ₹35,000 ಕೋಟಿ ನೆರವು ನೀಡಲು ಸಚಿವ ಸಂಪುಟ ಅನುಮೋದನೆ ನೀಡಿದೆ.

ನವದೆಹಲಿ: ಹಿಂಗಾರು ಬೆಳೆಗಾರರಿಗೆ ಕೈಗೆಟುಕುವ ದರದಲ್ಲಿ ಕೃಷಿ ಪೋಷಕಾಂಶಗಳನ್ನು ವಿತರಿಸುವ ಸಲುವಾಗಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟ ಫಾಸ್ಫೇಟಿಕ್ ಮತ್ತು ಪೊಟ್ಯಾಸಿಕ್ ರಸಗೊಬ್ಬರಗಳ ಮೇಲೆ 24474 3 ಕೋಟಿ ರು. ಸಬ್ಸಿಡಿಯನ್ನು ಘೋಷಿಸಿದೆ. 

ರಸಗೊಬ್ಬರ ತಯಾರಕರು/ಆಮದುದಾರರ ಮೂಲಕ ರೈತರಿಗೆ ಪಿ&ಕೆ ರಸಗೊಬ್ಬರದ 28 ಗ್ರೇಡ್‌ಗಳನ್ನು ಸಬ್ಸಿಡಿ ದರದಲ್ಲಿ ಒದಗಿಸುವುದು ಇದರ ಉದ್ದೇಶವಾಗಿದ್ದು, ಇದು 2024ರ ಅಕ್ಟೋಬರ್‌ನಿಂದ 2025ರ ಮಾರ್ಚ್‌ವರೆಗೆ ಅನ್ವಯಿಸುತ್ತದೆ.

ಬುಡಕಟ್ಟು ಸಮುದಾಯದ ಅಭಿವೃದ್ಧಿಗೆ ಕೇಂದ್ರದಿಂದ ₹ 79 ಸಾವಿರ ಕೋಟಿ ಅನುದಾನ

ನವದೆಹಲಿ: ಬುಡಕಟ್ಟು ಸಮುದಾಯದ ಜನರ ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿಗೆ ‘ಪ್ರಧಾನಮಂತ್ರಿ ಜನಜಾತೀಯ ಉನ್ನತ್ ಗ್ರಾಮ್ ಯೋಜನೆ’ಯಡಿಯಲ್ಲಿ 79,156 ಕೋಟಿ ರು. ಅನುದಾನ ಬಿಡುಗಡೆಗೆ ಕೇಂದ್ರ ಸಂಪುಟ ಅನುಮೋದಿಸಿದೆ.

ಕೇಂದ್ರ ಸರ್ಕಾರದ ಈ ಯೋಜನೆ ಮೂಲಕ 63 ಸಾವಿರ ಹಳ್ಳಿಗಳಲ್ಲಿ ನೆಲೆಸಿರುವ 5 ಕೋಟಿ ಬುಡಕಟ್ಟು ಕುಟುಂಬಗಳಿಗೆ ಸರ್ಕಾರಿ ಸೌಲಭ್ಯಗಳನ್ನು ತಲುಪಿಸುವ ಗುರಿಯನ್ನು ಹೊಂದಿದೆ. ದೇಶದ ಎಲ್ಲ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶದಲ್ಲಿನ ಬುಡಕಟ್ಟು ಸಮುದಾಯದ ಜನರಿಗೆ ಈ ಯೋಜನೆಯ ದೊರೆಯಲಿದ್ದು, 549 ಜಿಲ್ಲೆಯ 2740 ಬ್ಲಾಕ್‌ಗಳಿಗೆ ಇದರ ಪ್ರಯೋಜನ ಸಿಗಲಿದೆ.

ಪಿಎಂ-ಆಶಾ ಯೋಜನೆಗೆ 35000 ಕೋಟಿ ನೆರವು

ನವದೆಹಲಿ: ರೈತರಿಗೆ ಉತ್ತಮ ಬೆಲೆ ಒದಗಿಸಲು ಮತ್ತು ಅಗತ್ಯ ವಸ್ತುಗಳ ಬೆಲೆ ಏರಿಳಿತವನ್ನು ನಿಯಂತ್ರಿಸುವ ಸಲುವಾಗಿ 35,000 ಕೋಟಿ ರು.ವೆಚ್ಚದ ಪ್ರಧಾನ ಮಂತ್ರಿ ಅನ್ನದಾತ ಆಯ್‌ ಸಂರಕ್ಷಣಾ ಅಭಿಯಾನ (ಪಿಎಂ-ಆಶಾ) ಯೋಜನೆಯನ್ನು ಮುಂದುವರೆಸಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ. 

ರೈತರು ಮತ್ತು ಗ್ರಾಹಕರಿಗೆ ಉಪಯೋಗವಾಗುವಂತೆ ಬೆಲೆ ಬೆಂಬಲ ಯೋಜನೆ (ಪಿಎಸ್‌ಎಸ್‌) ಮತ್ತು ಬೆಲೆ ಸ್ಥಿರೀಕರಣ ನಿಧಿ (ಪಿಎಸ್‌ಎಫ್‌)ಯನ್ನು ಒಗ್ಗೂಡಿಸಲಾಗಿದೆ. ಇದರಿಂದಾಗಿ ಪಿಎಂ-ಆಶಾ ಯೋಜನೆ ಪಿಎಸ್‌ಎಸ್‌, ಪಿಎಸ್‌ಎಫ್‌, ಬೆಲೆ ಕೊರತೆ ಪಾವತಿ ಯೋಜನೆಯ(ಪಿಒಪಿಎಸ್‌), ಮಾರುಕಟ್ಟೆ ಮಧ್ಯಸ್ಥಿಕೆ ಯೋಜನೆ(ಎಂಐಎಸ್‌) ಅಂಶಗಳನ್ನು ಒಳಗೊಂಡಿರಲಿದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಮೊಜ್ತಬಾ ಪತ್ತೆಗಾಗಿ ಅಮೆರಿಕ,ಇಸ್ರೇಲ್‌ ಗುಪ್ತಚರ ಹುಡುಕಾಟ
ಟ್ರಂಪ್‌ ಬಳಿ ಇಲ್ಲ ಯುದ್ಧದ ಸೂಕ್ತ ಎಕ್ಸಿಟ್‌ ಪ್ಲ್ಯಾನ್‌!