ನಲ್ಲಗಟ್ಲ(ಆಂಧ್ರಪ್ರದೇಶ): ರಸ್ತೆ ಬದಿಯಲ್ಲಿ ನಿಂತ ಟ್ರಕ್‌ಗೆ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ನವದಂಪತಿಯೂ ಸೇರಿದಂತೆ ಕುಟುಂಬದ ಐವರು ಸಾವನ್ನಪ್ಪಿದ ಘಟನೆ ಆಂಧ್ರಪ್ರದೇಶದ ನಂದ್ಯಾಲ್ ಜಿಲ್ಲೆಯ ನಲ್ಲಗಟ್ಲ ಗ್ರಾಮದಲ್ಲಿ ನಡೆದಿದೆ.
ಆಗ ಫೆ.29ರಂದು ಹಸೆಮಣೆಯೇರಿದ್ದ ನವದಂಪತಿಯೂ ಸೇರಿದಂತೆ ಕುಟುಂಬದ ಐವರು ಮೃತಪಟ್ಟಿದ್ದಾರೆ.
ಕುಟುಂಬಸ್ಥರು ತಿರುಪತಿ ಬಳಿಯ ದೇಗುಲವೊಂದಕ್ಕೆ ತೆರಳಿ ಹಿಂದಿರುಗುವ ವೇಳೆ ಮುಂಜಾನೆ 5:15ರ ಸುಮಾರಿಗೆ ಘಟನೆ ಸಂಭವಿಸಿದ್ದು, ಪೊಲೀಸರು ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದಾರೆ.