ನವದೆಹಲಿ: ಆರ್ಥಿಕ ವಂಚನೆ ಪ್ರಕರಣದಲ್ಲಿ 25 ವರ್ಷಗಳಿಂದ ಅಮೆರಿಕದಲ್ಲಿ ತಲೆಮರೆಸಿಕೊಂಡಿದ್ದ ಉದ್ಯಮಿ ಮೋನಿಕಾ ಕಪೂರ್‌ಳನ್ನು ಕೊನೆಗೂ ಭಾರತಕ್ಕೆ ಗಡೀಪಾರು ಮಾಡಿಸುವಲ್ಲಿ ಸಿಬಿಐ ಯಶಸ್ವಿಯಾಗಿದೆ.
2004ರ ಅಕ್ರಮ ಕೇಸ್: ಮೋನಿಕಾ ಓವರ್‌ಸೀಸ್ ಸಂಸ್ಥೆಯ ಒಡತಿಯಾಗಿದ್ದ ಮೋನಿಕಾ ಕಪೂರ್ ಮೇಲೆ ತಮ್ಮ ಸಹೋದರರಾದ ರಂಜನ್ ಖನ್ನಾ ಮತ್ತು ರಾಜೀವ್ ಖನ್ನಾ ಜತೆಗೆ ಸೇರಿ ಆಮದು-ರಫ್ತು ವ್ಯವಹಾರದಲ್ಲಿ ಸರ್ಕಾರಕ್ಕೆ ವಂಚಿಸಿದ ಆರೋಪ ಇದೆ. ನಕಲಿ ದಾಖಲೆಗಳು, ನಕಲಿ ಬ್ಯಾಂಕ್ ಪ್ರಮಾಣಪತ್ರಗಳನ್ನು ಬಳಸಿಕೊಂಡು ಆಭರಣಗಳ ಉತ್ಪಾದನೆ, ರಫ್ತಿಗಾಗಿ ಸುಂಕರಹಿತವಾಗಿ ಕಚ್ಚಾವಸ್ತುಗಳ ಆಮದು ಮಾಡಿಕೊಳ್ಳುವ 6 ಲೈಸನ್ಸ್ ಪಡೆದುಕೊಂಡಿದ್ದರು. ಈ ಲೈಸೆನ್ಸ್‌ಗಳನ್ನು ನಂತರ ದುಬಾರಿ ದರಕ್ಕೆ ಅಹಮದಾಬಾದ್‌ನ ಡೀಪ್ ಎಕ್ಸ್‌ಪೋರ್ಟ್ಸ್‌ಗಳಿಗೆ ಮಾರಾಟ ಮಾಡಲಾಗಿತ್ತು. ಇದರಿಂದ ಸರ್ಕಾರದ ಖಜಾನೆಗೆ ಆಗ 1.44 ಕೋಟಿ ರು. ನಷ್ಟ ಆಗಿತ್ತು.
ಈ ಸಂಬಂಧ ಈಕೆ ಸೋದರರನ್ನು 2017ರಲ್ಲೇ ನ್ಯಾಯಾಲಯ ಅಪರಾಧಿಗಳೆಂದು ಘೋಷಿಸಿತ್ತು. ಆದರೆ, ಮೊನಿಕಾ ಕಪೂರ್ 2006ರಿಂದಲೇ ತಲೆಮರೆಸಿಕೊಂಡಿದ್ದರು. ಈಕೆ ಪತ್ತೆಗೆ ಸಿಬಿಐ ರೆಡ್‌ಕಾರ್ನರ್ ನೋಟಿಸ್ ಕೂಡ ಜಾರಿ ಮಾಡಿತ್ತು.