ಪ್ರಾಯೋಗಿಕ ಮತ್ತು ಥಿಯರಿ ಪರೀಕ್ಷೆಯಲ್ಲಿ ಭಾರೀ ವ್ಯತ್ಯಾಸ ಇರುವುದನ್ನು ಸುಧಾರಣೆ ಮಾಡುವ ನಿಟ್ಟಿನಲ್ಲಿ ಶಿಕ್ಷಕರು ನಿಗಾ ಬಹಿಸಬೇಕು ಎಂದು ಸಿಬಿಎಸ್‌ಇ ಮಂಡಳಿ ತಿಳಿಸಿದೆ.
ನವದೆಹಲಿ: ವಿದ್ಯಾರ್ಥಿಗಳು ಪಡೆದಿರುವ ಪ್ರಾಯೋಗಿಕ ಮತ್ತು ಥಿಯರಿ ಪರೀಕ್ಷೆಯ ಅಂಕಗಳಲ್ಲಿ ಅಜಗಜಾಂತರ ವ್ಯತ್ಯಾಸ ಇರುವುದನ್ನು ಸಿಬಿಎಸ್‌ಇ ಮಂಡಳಿ ಗುರುತಿಸಿದ್ದು, ಪ್ರಾಯೋಗಿಕ ಮೌಲ್ಯಮಾಪನವನ್ನು ದಕ್ಷತೆಯಿಂದ ಮಾಡಬೇಕೆಂದು ತನ್ನ ಅಧೀನದಲ್ಲಿರುವ ಶಾಲೆಗಳಿಗೆ ಮಂಡಳಿ ಸೂಚಿಸಿದೆ.
500ಕ್ಕೂ ಶಾಲೆಗಳಿಗೆ ಕಳುಹಿಸಿರುವ ಪ್ರಕಟಣೆಯಲ್ಲಿ, ‘ಶೇ.50ಕ್ಕೂ ಅಧಿಕ ವಿದ್ಯಾರ್ಥಿಗಳ ಪ್ರಾಯೋಗಿಕ ಶೇ. ಅಂಕಗಳು ಹಾಗೂ ಥಿಯರಿ ಪರೀಕ್ಷೆಯ ಶೇ. ಅಂಕಗಳಿಗೂ ಭಾರೀ ವ್ಯತ್ಯಾಸವಿದೆ.
ಇದನ್ನು ಶಮನಗೊಳಿಸಲು ಶಿಕ್ಷಕರು ಪಾರದರ್ಶಕವಾಗಿ ಪ್ರಾಯೋಗಿಕ ಮೌಲ್ಯಾಂಕನವನ್ನು ಅತ್ಯಂತ ದಕ್ಷತೆಯಿಂದ ಮಾಡಬೇಕಾದ ಅವಶ್ಯಕತೆಯಿದೆ’ ಎಂದು ತಿಳಿಸಿದೆ.
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.