ಸಿಬಿಎಸ್‌ಇ ಮಂಡಳಿ, 2026ನೇ ಶೈಕ್ಷಣಿಕ ವರ್ಷದಿಂದ 10ನೇ ಕ್ಲಾಸ್‌ಗೆ 2 ವಾರ್ಷಿಕ ಪರೀಕ್ಷೆಗಳನ್ನು ನಡೆಸಲು ನಿರ್ಧರಿಸಿದೆ. ಈ ಕುರಿತ ಕರಡು ನಿಯಮಕ್ಕೆ ಮಂಡಳಿ ಅನುಮೋದನೆ ನೀಡಿದ್ದು. ಮಾ.9ರೊಳಗೆ ಸಾರ್ವಜನಿಕರ ಸಲಹೆಗೆ ಆಹ್ವಾನಿಸಲಾಗಿದೆ. ಬಳಿಕ ಅಂತಿಮ ಅಧಿಸೂಚನೆ ಹೊರಡಿಸಲಿದೆ.
ನವದೆಹಲಿ: ಸಿಬಿಎಸ್‌ಇ ಮಂಡಳಿ, 2026ನೇ ಶೈಕ್ಷಣಿಕ ವರ್ಷದಿಂದ 10ನೇ ಕ್ಲಾಸ್‌ಗೆ 2 ವಾರ್ಷಿಕ ಪರೀಕ್ಷೆಗಳನ್ನು ನಡೆಸಲು ನಿರ್ಧರಿಸಿದೆ. ಈ ಕುರಿತ ಕರಡು ನಿಯಮಕ್ಕೆ ಮಂಡಳಿ ಅನುಮೋದನೆ ನೀಡಿದ್ದು. ಮಾ.9ರೊಳಗೆ ಸಾರ್ವಜನಿಕರ ಸಲಹೆಗೆ ಆಹ್ವಾನಿಸಲಾಗಿದೆ. ಬಳಿಕ ಅಂತಿಮ ಅಧಿಸೂಚನೆ ಹೊರಡಿಸಲಿದೆ.
ಮೊದಲ ಪರೀಕ್ಷೆ ಫೆಬ್ರವರಿ 17ರಿಂದ ಮಾರ್ಚ್ 6ರವರೆಗೆ ಹಾಗೂ 2ನೇ ಪರೀಕ್ಷೆ ಮೇ 5ರಿಂದ 20ರವರೆಗೆ ನಡೆಯಲಿದೆ. ಎರಡೂ ಪರೀಕ್ಷೆಗಳನ್ನು ಪೂರ್ತಿ ಸಿಲಬಸ್‌ಗೆ ತೆಗೆದುಕೊಳ್ಳಲಾಗುತ್ತದೆ ಎಂದು ಕರಡು ನಿಯಮವನ್ನು ಅನುಮೋದಿಸಿದ ಸಿಬಿಎಸ್‌ಇ ಹೇಳಿಕೆ ಮಂಗಳವಾರ ತಿಳಿಸಿದೆ. ಈ 2 ಪರೀಕ್ಷೆಗಳಲ್ಲಿ ಯಾವ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಬರುತ್ತದೋ ಅದನ್ನು ವಿದ್ಯಾರ್ಥಿಗಳು ಉಳಿಸಿಕೊಳ್ಳಬಹುದಾಗಿದೆ.
ಈ 2 ಪರೀಕ್ಷೆಗಳೇ ಸಪ್ಲಿಮೆಂಟರಿ ಪರೀಕ್ಷೆಯಂತೆ ಕೆಲಸ ಮಾಡಲಿವೆ. ಇದರ ಹೊರತಾಗಿ ಇನ್ಯಾವ ವಿಶೇಷ ಪರೀಕ್ಷೆಯೂ ಇರುವುದಿಲ್ಲ, ಅಲ್ಲದೆ, ಪ್ರಾಯೋಗಿಕ ಹಾಗೂ ಆಂತರಿಕ ಪರೀಕ್ಷೆಗಳು ಮಾತ್ರ ಒಂದೇ ಬಾರಿ ನಡೆಯುತ್ತವೆ ಎಂದು ಅದು ಸ್ಪಷ್ಟಪಡಿಸಿದೆ. ಇದೇ ವೇಳೆ ಪರೀಕ್ಷಾ ಶುಲ್ಕ ಹೆಚ್ಚಿಸಲೂ ಅದು ನಿರ್ಧರಿಸಿದೆ.
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.