3 ಎಲೆಕ್ಟ್ರಾನಿಕ್‌ ಚಿಪ್‌ ಉತ್ಪಾದನಾ ಘಟಕಕ್ಕೆ ಸಂಪುಟ ಸಮ್ಮತಿ

KannadaprabhaNewsNetwork |  
Published : Mar 01, 2024, 02:17 AM IST
ಚಿಪ್‌ | Kannada Prabha

ಸಾರಾಂಶ

ಎಲೆಕ್ಟ್ರಾನಿಕ್‌ ಚಿಪ್‌ ಉತ್ಪಾದನಾ ಘಟಕಕ್ಕೆ ಕೇಂದ್ರ ಸಂಪುಟ ಅನುಮೋದನೆ ನೀಡಿದೆ. ಈ ಮೂಲಕ ಭಾರೀ ಹೂಡಿಕೆಯಾಗಲಿದ್ದು, ಅಗಾಧ ಉದ್ಯೋಗ ಸೃಜನೆಯೂ ಆಗಲಿದೆ.

ನವದೆಹಲಿ: ಎಲೆಕ್ಟ್ರಾನಿಕ್‌ ಚಿಪ್‌ ಉತ್ಪಾದಿಸುವ ಮೂರು ಘಟಕಗಳ ಆರಂಭಕ್ಕೆ ಕೇಂದ್ರ ಸಚಿವ ಸಂಪುಟ ಗುರುವಾರ ಅನುಮೋದನೆ ನೀಡಿದೆ. ಈ ಮೂರು ಯೋಜನೆಗಳು ಒಟ್ಟು 1.26 ಲಕ್ಷ ಕೋಟಿ ರು.ನಷ್ಟು ಬಂಡವಾಳ ಹೂಡಿಕೆಯೊಂದಿಗೆ ಆರಂಭವಾಗಲಿದ್ದು, 20000 ನೇರ ಉದ್ಯೋಗ, 60000 ಪರೋಕ್ಷ ಉದ್ಯೋಗ ಸೃಷ್ಟಿ ಮಾಡಲಿವೆ.ಸಂಪುಟ ಸಭೆ ಬಳಿಕ ಈ ಕುರಿತು ಮಾಹಿತಿ ನೀಡಿದ ಕೇಂದ್ರ ದೂರಸಂಪರ್ಕ ಖಾತೆ ಸಚಿವ ಅಶ್ವಿನಿ ವೈಷ್ಣವ್‌, ‘ರಕ್ಷಣೆ, ಆಟೋಮೊಬೈಲ್‌, ದೂರಸಂಪರ್ಕ ಸೇರಿ ವಿವಿಧ ವಲಯಗಳಿಗೆ ಅಗತ್ಯವಾದ ಎಲೆಕ್ಟ್ರಾನಿಕ್‌ ಚಿಪ್‌ಗಳಿಗೆ ವಿದೇಶಗಳ ಮೇಲಿನ ಅವಲಂಬನೆ ಕಡಿತಕ್ಕೆ ‘ಡೆವಲಪ್‌ಮೆಂಟ್‌ ಆಫ್‌ ಸೆಮಿಕಂಡಕ್ಟರ್ಸ್ ಆ್ಯಂಡ್‌ ಡಿಸ್‌ಪ್ಲೇ ಮ್ಯಾನುಫ್ಯಾಕ್ಚರಿಂಗ್‌ ಎಕೋಸಿಸ್ಟಮ್‌ ಪ್ರೋಗ್ರಾಮ್‌’ ಯೋಜನೆಯಡಿ ಈ ಮೂರು ಘಟಕ ಆರಂಭಿಸಲಾಗುತ್ತಿದೆ. ಇವುಗಳಿಗೆ ಕೇಂದ್ರ ಸರ್ಕಾರ 76000 ಕೋಟಿ ರು. ನೆರವು ನೀಡಲಿದೆ’ ಎಂದು ಹೇಳಿದರು.ಟಾಟಾ ಎಲೆಕ್ಟ್ರಾನಿಕ್ಸ್‌, ತೈವಾನ್‌ನ ಪವರ್‌ಚಿಪ್‌ ಸಂಸ್ಥೆಯೊಂದಿಗೆ ಗುಜರಾತ್‌ನ ಧೊಲೇರಾದಲ್ಲಿ 91000 ಕೋಟಿ ರು. ವೆಚ್ಚದಲ್ಲಿ ಒಂದು ಘಟಕ, ಟಾಟಾ ಸೆಮಿಕಂಡಕ್ಟರ್‌ ಅಸೆಂಬ್ಲಿ ಆ್ಯಂಡ್‌ ಟೆಸ್ಟ್‌ ಸಂಸ್ಥೆ ಅಸ್ಸಾಂನ ಮೋರೆಗಾಂವ್‌ನಲ್ಲಿ 27000 ಕೋಟಿ ರು. ಹೂಡಿಕೆಯೊಂದಿಗೆ ಒಂದು ಘಟಕ ಮತ್ತು ಸಿ.ಜಿ. ಪವರ್‌ ಕಂಪನಿಯು ಜಪಾನ್‌ನ ರೆನೆಸಾಸ್‌ ಕಂಪನಿ ಸಹಯೋದಲ್ಲಿ ಗುಜರಾತ್‌ನಲ್ಲಿ 7600 ಕೋಟಿ ರು. ವೆಚ್ಚದಲ್ಲಿ ಮೂರನೇ ಘಟಕ ಸ್ಥಾಪಿಸಲಿದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ರೇರಾದಿಂದ ಬಿಲ್ಡರ್‌ ಮಾತ್ರ ಲಾಭ ಆಗ್ತಿದೆ : ಸುಪ್ರೀಂ ಕಿಡಿ ಆಕ್ಷೇಪ
ರಾಗಾ ವಿರುದ್ಧ ಸಂಸತ್ತಲ್ಲಿ ಬಿಜೆಪಿಯ ಅನರ್ಹತೆ ಅಸ್ತ್ರ