ಅಶ್ಲೀಲ ಅಂಶ: 18 ಒಟಿಟಿ ಪ್ಲಾಟ್‌ಫಾರ್ಮ್, 19 ವೆಬ್‌ಸೈಟ್‌, 10 ಆ್ಯಪ್ ನಿಷೇಧ

KannadaprabhaNewsNetwork |  
Published : Mar 15, 2024, 01:18 AM IST
ಆ್ಯಪ್‌ ನಿಷೇಧ | Kannada Prabha

ಸಾರಾಂಶ

ಅಶ್ಲೀಲ ಅಂಶಗಳನ್ನು ಒಳಗೊಂಡಿದ್ದ ಗೂಗಲ್‌ ಪ್ಲೇಸ್ಟೋರ್‌ನ 7, ಆ್ಯಪಲ್‌ ಸ್ಟೋರ್‌ನ 3, ಒಟಿಟಿ ಪ್ಲಾಟ್‌ಫಾರ್ಮ್‌ನಿಂದ 18, ವೆಬ್‌ಸೈಟ್‌ನಿಂದ 19 ಮತ್ತು ಸಾಮಾಜಿಕ ಜಾಲತಾಣದ 57 ಖಾತೆಗಳನ್ನು ಸರ್ಕಾರ ನಿಷೇಧಿಸಿದೆ.

ನವದೆಹಲಿ: ಅಶ್ಲೀಲ ಅಂಶವಿರುವ 18 ಒಟಿಟಿ ಪ್ಲಾಟ್‌ಫಾರ್ಮ್, 19 ವೆಬ್‌ಸೈಟ್‌, 10 ಆ್ಯಪ್ ಮತ್ತು ಅವುಗಳಿಗೆ ಸಂಬಂಧಿಸಿದ 57 ಸಾಮಾಜಿಕ ಮಾಧ್ಯಮ ಖಾತೆಗಳನ್ನು ಕೇಂದ್ರ ಸರ್ಕಾರ ನಿರ್ಬಂಧಿಸಿದೆ.

ಗೂಗಲ್ ಪ್ಲೇ ಸ್ಟೋರ್‌ನಲ್ಲಿ 7, ಆ್ಯಪಲ್ ಸ್ಟೋರ್‌ನಲ್ಲಿ 3 ಸೇರಿ ಹತ್ತು ಆ್ಯಪ್‌ಗಳಿವೆ ಮತ್ತು ಅವುಗಳಿಗೆ ಸಂಬಂಧಿಸಿದ 57 ಸಾಮಾಜಿಕ ಮಾಧ್ಯಮ ಖಾತೆಗಳನ್ನು ನಿಷ್ಕ್ರಿಯಗೊಳಿಸಲಾಗಿದೆ.

‘ಸೃಜನಶೀಲ ಅಭಿವ್ಯಕ್ತಿ ನೆಪದಲ್ಲಿ ಅಶ್ಲೀಲತೆ, ಅಸಭ್ಯತೆ ಸಲ್ಲದು. ಮಾಧ್ಯಮ ಮತ್ತು ಮನರಂಜನೆ, ಮಕ್ಕಳ ಹಕ್ಕುಗಳಲ್ಲಿ ಪರಿಣತಿ ಹೊಂದಿರುವ ತಜ್ಞರೊಂದಿಗೆ ಸಮಾಲೋಚಿಸಿ ಮಾಹಿತಿ ತಂತ್ರಜ್ಞಾನ ಕಾಯಿದೆ-2000ರ ಅಡಿಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ’ ಎಂದು ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಠಾಕೂರ್ ತಿಳಿಸಿದ್ದಾರೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಅಸ್ಸಾಂನಲ್ಲಿ ಇನ್ನು 18 ವರ್ಷ ಮೇಲಿನವರಿಗೆ ಆಧಾರ್‌ ಇಲ್ಲ
ಪರೀಕ್ಷಾ ಅಕ್ರಮ ವಿರುದ್ಧ 17ರಿಂದ ಕೈ ದೇಶವ್ಯಾಪಿ ಆಂದೋಲನ