ಇಯರ್‌ಫೋನ್‌ ಅತಿ ಬಳಕೆ ವಿರುದ್ಧ ಕೇಂದ್ರ ಎಚ್ಚರಿಕೆ - ಅತಿ ಬಳಕೆಯಿಂದ ಶ್ರವಣದೋಷ : ಆರೋಗ್ಯ ಇಲಾಖೆ

ಸಾರಾಂಶ

ಇಯರ್‌ಫೋನ್‌ ಮತ್ತು ಹೆಡ್‌ಫೋನ್‌ಗಳ ಅತಿಯಾದ ಬಳಕೆಯಿಂದ ಜನರಲ್ಲಿ ಶ್ರವಣದೋಷ ಉಂಟಾಗುತ್ತಿದೆ ಎಂದಿರುವ ಕೇಂದ್ರ ಆರೋಗ್ಯ ಸಚಿವಾಲಯ. ಇದರ ದೀರ್ಘಕಾಲದ ಬಳಕೆ ವಿರುದ್ಧ ಜಾಗೃತಿ ಮೂಡಿಸುವಂತೆ ರಾಜ್ಯಗಳು ಮತ್ತು ವೈದ್ಯಕೀಯ ಕಾಲೇಜುಗಳಿಗೆ ಸೂಚಿಸಿದೆ.

 ನವದೆಹಲಿ: ಇಯರ್‌ಫೋನ್‌ ಮತ್ತು ಹೆಡ್‌ಫೋನ್‌ಗಳ ಅತಿಯಾದ ಬಳಕೆಯಿಂದ ಜನರಲ್ಲಿ ಶ್ರವಣದೋಷ ಉಂಟಾಗುತ್ತಿದೆ ಎಂದಿರುವ ಕೇಂದ್ರ ಆರೋಗ್ಯ ಸಚಿವಾಲಯ. ಇದರ ದೀರ್ಘಕಾಲದ ಬಳಕೆ ವಿರುದ್ಧ ಜಾಗೃತಿ ಮೂಡಿಸುವಂತೆ ರಾಜ್ಯಗಳು ಮತ್ತು ವೈದ್ಯಕೀಯ ಕಾಲೇಜುಗಳಿಗೆ ಸೂಚಿಸಿದೆ.

ಈ ಕುರಿತು ವಿವರಿಸಿದ ಆರೋಗ್ಯ ಸೇವೆಗಳ ಮಹಾನಿರ್ದೇಶಕ ಪ್ರೊ. ಅತುಲ್ ಗೋಯೆಲ್, ‘ಆಡಿಯೋ ಸಾಧನಗಳ ಅತಿಯಾದ ಬಳಕೆಯಿಂದ ಜನರಲ್ಲಿ ಸರಿಪಡಿಸಲಾಗದಂತಹ ಶ್ರವಣದೋಷ ಉಂಟಾಗುತ್ತಿದೆ. ಯುವಕರಲ್ಲಿ ಇದು ಅತಿಯಾಗಿದೆ. 50 ಡೆಸಿಬಲ್‌ಗಳಿಗೆ ಹಾಗೂ ದಿನಕ್ಕೆ 2 ಗಂಟೆ ಮೀರದಂತೆ ಈ ಸಾಧನಗಳನ್ನು ಬಳಸಬೇಕು. ಆಗಾಗ ವಿರಾಮ ತೆಗೆದುಕೊಳ್ಳಬೇಕು’ ಎಂದಿದ್ದಾರೆ.

ಅಲ್ಲದೆ, ಮಕ್ಕಳು ನಿರಂತರವಾಗಿ ಮೊಬೈಲ್/ಟೀವಿ ನೋಡುವುದರಿಂದ ಮೆದುಳಿನ ಬೆಳವಣಿಗೆ ಕುಂಠಿತವಾಗುತ್ತದೆ ಎಂದು ಎಚ್ಚರಿಸಿರುವ ಅವರು, ಶ್ರವಣ ದೋಷ ಪತ್ತೆ ಹಚ್ಚಲು ನಿರಂತರ ತಪಾಸಣಾ ಶಿಬಿರಗಳನ್ನು ಆಯೋಜಿಸಿ, ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದು ರಾಜ್ಯಗಳು, ವೈದ್ಯಕೀಯ ಕಾಲೇಜುಗಳಿಗೆ ಸೂಚಿಸಿದ್ದಾರೆ.

Share this article