ನವದೆಹಲಿ: ಸರ್ಕಾರಿ ನೌಕರರ ತರಬೇತಿಗಾಗಿ ಬಜೆಟ್‌ನಲ್ಲಿ ₹309.74 ಕೋಟಿ ಮೀಸಲಿರಿಸಲಾಗಿದೆ. ಇದರಿಂದ ನೌಕರರು ದೇಶ ಮತ್ತು ವಿದೇಶದಲ್ಲೂ ತರಬೇತಿ ಪಡೆಯಬಹುದಾಗಿದೆ. ಇದು ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆಗಳು ಮತ್ತು ಪಿಂಚಣಿ ಸಚಿವಾಲಯಕ್ಕೆ ಮೀಸಲಿಟ್ಟ ₹2,328.56 ಕೋಟಿನಲ್ಲಿಯೇ ಸೇರಿದೆ. ₹309.74 ಕೋಟಿಯಲ್ಲಿ ₹103.5 ಕೋಟಿಯನ್ನು ತರಬೇತಿ ವಿಭಾಗ, ಇನ್‌ಸ್ಟಿಟ್ಯೂಟ್ ಆಫ್ ಸೆಕ್ರೆಟರಿಯೇಟ್ ಟ್ರೈನಿಂಗ್ ಆ್ಯಂಡ್ ಮ್ಯಾನೇಜ್‌ಮೆಂಟ್ (ಐಎಸ್‌ಟಿಎಂ) ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ರಾಷ್ಟ್ರೀಯ ಆಡಳಿತ ಅಕಾಡೆಮಿ (ಎಲ್‌ಬಿಎಸ್‌ಎನ್‌ಎಎ)ಗೆ ಹಂಚಲಾಗಿದೆ. ₹120.56 ಕೋಟಿಯನ್ನು ತರಬೇತಿ ಯೋಜನೆ, ₹89.13 ಕೋಟಿಯನ್ನು ಕರ್ಮಯೋಗಿ ಯೋಜನೆಗೆ ನೀಡಲಾಗಿದೆ.
₹120.56 ಕೋಟಿಯನ್ನು ‘ಎಲ್ಲರಿಗೂ ತರಬೇತಿ’ ಯೋಜನೆಗೆ ನೀಡಲಾಗಿದೆ. ಇದು ವಿದೇಶಿ ತರಬೇತಿಗಾಗಿ ದೇಶೀಯ ಧನಸಹಾಯವನ್ನು ಒಳಗೊಂಡಿದೆ. ಇನ್ನು ಎಲ್‌ಬಿಎಸ್‌ಎನ್‌ಎಎಯನ್ನು ಶ್ರೇಷ್ಠ ಕೇಂದ್ರವಾಗಿ ಉನ್ನತೀಕರಿಸುವುದು ಮತ್ತು ಐಎಸ್‌ಟಿಎಂನಲ್ಲಿ ತರಬೇತಿ ಸೌಲಭ್ಯಗಳ ಉನ್ನತ್ತೀಕರಣ ಯೋಜನೆಗಳಿಗಾಗಿ ವೆಚ್ಚ ಮಾಡಲು ಯೋಜಿಸಲಾಗಿದೆ. ₹80 ಕೋಟಿಯನ್ನು ಆಡಳಿತ ಸುಧಾರಣೆಗಾಗಿ ನೀಡಲಾಗಿದೆ. ಇದರಲ್ಲಿ ಸರ್ಕಾರಿ ಕಚೇರಿಗಳ ಆಧುನೀಕರಣ, ಇ-ಆಡಳಿತವನ್ನು ಮತ್ತಷ್ಟು ಚುರುಕುಗೊಳಿಸುವ ಉದ್ದೇಶವಿಟ್ಟುಕೊಳ್ಳಲಾಗಿದೆ.
ಪ್ರಸಕ್ತ ಹಣಕಾಸು ವರ್ಷದಲ್ಲಿ ಮಾಹಿತಿ ಹಕ್ಕು (ಆರ್‌ಟಿಐ) ಕಾಯ್ದೆಯ ಪ್ರಚಾರಕ್ಕಾಗಿ ₹2.6 ಕೋಟಿ ನಿಧಿಯನ್ನು ಮೀಸಲಿಡಲಾಗಿದೆ. ಇನ್ನು ಸಾರ್ವಜನಿಕ ನೌಕರರ ಕುಂದುಕೊರತೆಗಳನ್ನು ನಿರ್ವಹಿಸುವ ಕೇಂದ್ರೀಯ ಆಡಳಿತಾತ್ಮಕ ನ್ಯಾಯಮಂಡಳಿಗೆ (ಸಿಎಟಿ)ಗೆ ₹157.72 ಮತ್ತು ಸಿಬ್ಬಂದಿ ಆಯ್ಕೆ ಆಯೋಗಕ್ಕೆ (ಎಸ್‌ಎಸ್‌ಸಿ) ₹418.15 ಕೋಟಿ ನೀಡಲಾಗಿದೆ.
ದೇಶೀಯ ಮತ್ತು ವಿದೇಶದಲ್ಲಿ ತರಬೇತಿಗಾಗಿ ಪ್ರವಾಸದ ವೆಚ್ಚ, ವೃತ್ತಿ ತರಬೇತಿಯ ಶುಲ್ಕವನ್ನು ಒಳಗೊಂಡಿರುತ್ತದೆ. ಸಿಬ್ಬಂದಿ ಸಚಿವಾಲಯದ ಅಡಿಯಲ್ಲಿರುವ ತರಬೇತಿ ವಿಭಾಗ, ದೆಹಲಿಯ ಐಎಸ್‌ಟಿಎಂ ಮತ್ತು ಮಸ್ಸೂರಿ ಮೂಲದ ಎಲ್‌ಬಿಎಸ್‌ಎನ್‌ಎಎಗಳು ‘ಫೌಂಡೇಶನ್ ಕೋರ್ಸ್‌ಗಳು, ರಿಫ್ರೆಶ್ ಕೋರ್ಸ್‌ಗಳು, ವೃತ್ತಿ ತರಬೇತಿ, ಇತ್ಯಾದಿ ಸೇರಿದಂತೆ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸುತ್ತವೆ.ಕರ್ಮಯೋಗಿ ಯೋಜನೆಯು ದೊಡ್ಡ ಅಧಿಕಾರಶಾಹಿ ಸುಧಾರಣಾ ಕಾರ್ಯಕ್ರಮವಾಗಿದೆ. ಸರ್ಕಾರಿ ಉದ್ಯೋಗಿಗಳನ್ನು ಹೆಚ್ಚು ‘ಸೃಜನಶೀಲ, ಪೂರ್ವಭಾವಿ, ವೃತ್ತಿಪರ ಮತ್ತು ತಂತ್ರಜ್ಞಾನ-ಶಕ್ತ’ ಮಾಡುವ ಗುರಿಯನ್ನು ಹೊಂದಿದೆ. ಎಸ್‌ಎಸ್‌ಸಿ ಕೇಂದ್ರ ಸರ್ಕಾರಕ್ಕೆ ವಿವಿಧ ಉದ್ಯೋಗ ನೇಮಕಾತಿ ಮಾಡುತ್ತದೆ.