ಮಂದಿರ ವಿವಾದದ ಗಂಭೀರತೆ ಅರಿತು ಒಮ್ಮತದ ತೀರ್ಪು: ನ್ಯಾ. ಚಂದ್ರಚೂಡ್

KannadaprabhaNewsNetwork |  
Published : Jan 02, 2024, 02:15 AM IST
ಚಂದ್ರಚೂಡ್‌ | Kannada Prabha

ಸಾರಾಂಶ

ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್‌ ಸುದ್ದಿಸಂಸ್ಥೆಯೊಂದಕ್ಕೆ ಸಂದರ್ಶನ ನೀಡಿದ್ದು, ಅದರಲ್ಲಿ ರಾಮಮಂದಿರ, 370ನೇ ವಿಧಿ, ಸಲಿಂಗ ವಿವಾಹ ಮುಂತಾದ ಐತಿಹಾಸಿಕ ತೀರ್ಪುಗಳ ಕುರಿತಾದ ಸ್ವಾರಸ್ಯಕರ ಸಂಗತಿಗಳನ್ನು ಬಹಿರಂಗಪಡಿಸಿದ್ದಾರೆ.

ಪಿಟಿಐ ನವದೆಹಲಿದಶಕಗಳಿಂದ ಇದ್ದ ರಾಮಮಂದಿರ ವಿವಾದದ ಗಂಭೀರತೆ ಅರಿತು ಒಮ್ಮತದ ತೀರ್ಪು ಪ್ರಕಟಿಸುವ ತೀರ್ಮಾನಕ್ಕೆ ಬರಲಾಯಿತು. ಹಾಗೂ ಈ ತೀರ್ಪನ್ನು ಇಂಥವರೇ ನೀಡಿದರು ಎಂಬ ಕರ್ತೃತ್ವವನ್ನು ನೀಡದಿರಲು ನಿರ್ಧರಿಸಲಾಗಿತ್ತು ಎಂದು ಭಾರತದ ಮುಖ್ಯ ನ್ಯಾಯಾಧೀಶ ನ್ಯಾ। ಡಿ.ವೈ. ಚಂದ್ರಚೂಡ್‌ ಹೇಳಿದ್ದಾರೆ.ಪಿಟಿಐ ಸುದ್ದಿಸಂಸ್ಥೆಗೆ ಸೋಮವಾರ ಸಂದರ್ಶನ ನೀಡಿದ ಅವರು, ‘ತೀರ್ಪಿನಲ್ಲಿ ಪೀಠದಲ್ಲಿನ ಯಾವ ನ್ಯಾಯಾಧೀಶರ ಅನಿಸಿಕೆ ಅನಿಸಿಕೆ ಏನಾಗಿತ್ತು ಎಂಬುದನ್ನು ಪ್ರತ್ಯೇಕವಾಗಿ ಬರೆಯಲಿಲ್ಲ. ಪ್ರಕರಣದ ಇತಿಹಾಸ ಹಾಗೂ ವಿಭಿನ್ನ ಅನಿಸಿಕೆಗಳನ್ನು ಗಮನದಲ್ಲಿ ಇರಿಸಿಕೊಂಡು ಒಮ್ಮತದ ತೀರ್ಪು ನಿಡಲು ನೀಡಲು ತೀರ್ಮಾನಿಸಲಾಯಿತು. ಗಂಭೀರತೆ ಅರಿತು ನ್ಯಾಯಾಧೀಶರ ಅನಿಸಿಕೆಗಳನ್ನು ಪ್ರತ್ಯೇಕವಾಗಿ ಪ್ರಕಟಿಸದೇ ಕೇವಲ ‘ಕೋರ್ಟ್‌ ತೀರ್ಪು’ ಎಂದು ಬರೆಯಲಾಯಿತು’ ಎಂದರು.ಇದೇ ವೇಳೆ, ಸಂವಿಧಾನ, ಕಾನೂನು ಪರಿಗಣಿಸಿ ಜಡ್ಜ್‌ಗಳಿಂದ ತೀರ್ಪು ನೀಡಲಾಗುತ್ತದೆ ಎಂದ ಚಂದ್ರಚೂಡ್‌, ಸಂವಿಧಾನದ 370ನೇ ವಿಧಿ, ಸಲಿಂಗ ವಿವಾಹ ತೀರ್ಪಿನ ಟೀಕೆಗೆ ಪ್ರತಿಕ್ರಿಯಿಸಲು ನಿರಾಕರಿಸಿದರು. ತೀರ್ಪು ಪ್ರಕಟದ ಬಳಿಕ ಅದು ಸಾರ್ವಜನಿಕ ಆಸ್ತಿ, ಪ್ರತಿಕ್ರಿಯೆ ನೀಡಲು ಎಲ್ಲರೂ ಮುಕ್ತ ಎಂದರಲ್ಲದೆ, ನ್ಯಾಯಾಧೀಶರ ನೇಮಕ ಕುರಿತ ಕೊಲಿಜಿಯಂ ವ್ಯವಸ್ಥೆ ಸದೃಢವಾಗಿದೆ ಎಂದು ಸ್ಪಷ್ಟಪಡಿಸಿದರು.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಕಾಂತಾರಾ ಹಿಂದಿಕ್ಕಿದ ಧುರಂಧರ್‌: 876 ಕೋಟಿ ಸಂಪಾದನೆಯ ದಾಖಲೆ
ಛತ್ತೀಸ್‌ಗಢ ಮದ್ಯ ಹಗರಣ: ಮಾಜಿ ಸಿಎಂ ಪುತ್ರಗೆ ₹250 ಕೋಟಿ ಲಂಚ