ಡೊನಾಲ್ಡ್‌ ಟ್ರಂಪ್‌ ನೇತೃತ್ವದ ಅಮೆರಿಕ ಸರ್ಕಾರವು ಚೀನಾ ಉತ್ಪನ್ನಗಳ ಮೇಲೆ ಶೇ.245ರ ವರೆಗೆ ಪ್ರತಿ ತೆರಿಗೆ

KannadaprabhaNewsNetwork |  
Published : Apr 17, 2025, 12:00 AM ISTUpdated : Apr 17, 2025, 06:29 AM IST
Donald Trump

ಸಾರಾಂಶ

ಡೊನಾಲ್ಡ್‌ ಟ್ರಂಪ್‌ ನೇತೃತ್ವದ ಅಮೆರಿಕ ಸರ್ಕಾರವು ಇದೀಗ ಚೀನಾದಿಂದ ಆಮದಾಗುವ ವಸ್ತುಗಳ ಮೇಲೆ ಶೇ.245ರ ವರೆಗೆ ಪ್ರತಿ ತೆರಿಗೆ ಹಾಕುವುದಾಗಿ ಹೇಳಿದೆ.

ವಾಷಿಂಗ್ಟನ್‌: ಡೊನಾಲ್ಡ್‌ ಟ್ರಂಪ್‌ ನೇತೃತ್ವದ ಅಮೆರಿಕ ಸರ್ಕಾರವು ಇದೀಗ ಚೀನಾದಿಂದ ಆಮದಾಗುವ ವಸ್ತುಗಳ ಮೇಲೆ ಶೇ.245ರ ವರೆಗೆ ಪ್ರತಿ ತೆರಿಗೆ ಹಾಕುವುದಾಗಿ ಹೇಳಿದೆ. ಈ ಮೂಲಕ ಅಮೆರಿಕ ಮತ್ತು ಚೀನಾ ನಡುವಿನ ತೆರಿಗೆ ಯುದ್ಧ ಮತ್ತಷ್ಟು ತೀವ್ರಗೊಂಡಂತಾಗಿದೆ. ಚೀನಾವು ಇತ್ತೀಚೆಗೆ ರಫ್ತು ನಿರ್ಬಂಧಗಳು ಮತ ಪ್ರತಿ ತೆರಿಗೆ ಘೋಷಿಸಿದ ಬೆನ್ನಲ್ಲೇ ಅಮೆರಿಕ ಸರ್ಕಾರ ಈ ನಿರ್ಧಾರಕ್ಕೆ ಬಂದಿದೆ.

ಚೀನಾವು ಉದ್ದೇಶಪೂರ್ವಕವಾಗಿ ಗ್ಯಾಲಿಯಂ, ಜರ್ಮೇನಿಯಂ, ಆ್ಯಂಟಿಮೋನಿಯಂಥ ಮಿಲಿಟರಿ, ಬಾಹ್ಯಾಕಾಶ ಮತ್ತು ಸೆಮಿಕಂಡಕ್ಟರ್‌ ಉದ್ಯಮಗಳಿಗೆ ಮುಖ್ಯವಾಗಿರುವ ವಸ್ತುಗಳ ರಫ್ತಿಗೆ ನಿರ್ಬಂಧ ಹೇರಿದೆ. ಜತೆಗೆ, ತಿಂಗಳ ಹಿಂದಷ್ಟೇ ಆರು ವಿರಳ ಲೋಹಗಳು ಮತ್ತು ಮ್ಯಾಗ್ನೆಟ್‌ಗಳ ರಫ್ತನ್ನು ನಿರ್ಬಂಧಿಸಿತ್ತು. ಈ ಹಿನ್ನೆಲೆಯಲ್ಲಿ ಟ್ರಂಪ್‌ ಅವರು ಇದೀಗ ಚೀನಾ ಉತ್ಪನ್ನಗಳ ಮೇಲೆ ಶೇ.245 ತೆರಿಗೆ ವಿಧಿಸಲು ನಿರ್ಧರಿಸಿದ್ದಾರೆ.

ಮಾತುಕತೆಗೆ ಪ್ರತಿನಿಧಿ ನೇಮಿಸಿದ ಚೀನಾ:

ಈ ನಡುವೆ, ಮಹತ್ವದ ಬೆಳವಣಿಗೆಯೊಂದರಲ್ಲಿ ಚೀನಾವು ಅಮೆರಿಕ ಜತೆಗೆ ಮಾತುಕತೆಗೆ ಅಂತಾರಾಷ್ಟ್ರೀಯ ವ್ಯಾಪಾರ ಪ್ರತಿನಿಧಿ ಚೆಂಗ್‌ಗ್ಯಾಂಗ್ ಅವರನ್ನು ಪ್ರತಿನಿಧಿಯಾಗಿ ನೇಮಿಸಿದೆ. ಲೀ ಅವರು ಈ ಹಿಂದೆ ಡಬ್ಲ್ಯುಟಿಒದಲ್ಲಿ ಚೀನಾದ ರಾಯಭಾರಿ ಆಗಿದ್ದರು. ವ್ಯಾಪಾರ ಒಪ್ಪಂದ ಮಾಡಬೇಕೋ, ಬೇಡವೋ ಎಂಬ ನಿರ್ಧಾರವನ್ನು ಚೀನಾಗೆ ಬಿಡಲಾಗಿದೆ ಎಂಬ ಟ್ರಂಪ್‌ ಹೇಳಿಕೆ ಬೆನ್ನಲ್ಲೇ ಚೀನಾ ಈ ಹೆಜ್ಜೆ ಇಟ್ಟಿದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ರಫ್‌ಶೀಟ್‌ ಬಳಸಿ ಶಿಕ್ಷಕರಿಂದಲೇ ನೀಟ್ ಪ್ರಶ್ನೆಪತ್ರಿಕೆಯ ಸೋರಿಕೆ!
ಜಾರ್ಖಂಡ್‌ ಸರ್ಕಾರ ಜತೆ ಜೆನ್‌ಝೀ ಸಂಧಾನ ವಿಫಲ