630 ಲೀಟರ್‌ ರಕ್ತದಾನ ಮಾಡಿದಗುಜರಾತ್‌ನ ಪಟೇಲ್‌ ಕುಟುಂಬ!

KannadaprabhaNewsNetwork |  
Published : Oct 02, 2024, 01:12 AM IST
ಪಟೇಲ್‌ ಕುಟುಂಬ  | Kannada Prabha

ಸಾರಾಂಶ

ರಕ್ತದಾನ ಪವಿತ್ರವಾದ್ದು. ದಾನಗಳಲ್ಲೇ ಮಹಾದಾನ ರಕ್ತದಾನ ಎನ್ನುವ ಮಾತಿದೆ. ಅದಕ್ಕೆ ಪೂರಕ ಎನ್ನುವಂತೆ ಗುಜರಾತ್‌ ಮಾನೆಕ್‌ಬಾಗ್‌ನ ಪಟೇಲ್‌ ಕುಟುಂಬ ಇದುವರೆಗೆ 630 ಲೀ. ರಕ್ತ ದಾನ ಮಾಡುವ ಮೂಲಕ ಇತರರಿಗೆ ಮಾದರಿಯಾಗಿದೆ.

ಅಹಮದಾಬಾದ್‌: ರಕ್ತದಾನ ಪವಿತ್ರವಾದ್ದು. ದಾನಗಳಲ್ಲೇ ಮಹಾದಾನ ರಕ್ತದಾನ ಎನ್ನುವ ಮಾತಿದೆ. ಅದಕ್ಕೆ ಪೂರಕ ಎನ್ನುವಂತೆ ಗುಜರಾತ್‌ ಮಾನೆಕ್‌ಬಾಗ್‌ನ ಪಟೇಲ್‌ ಕುಟುಂಬ ಇದುವರೆಗೆ 630 ಲೀ. ರಕ್ತ ದಾನ ಮಾಡುವ ಮೂಲಕ ಇತರರಿಗೆ ಮಾದರಿಯಾಗಿದೆ.

ಮಾನೆಕ್‌ಬಾಗ್‌ನಲ್ಲಿ 4 ಮಂದಿ ಸಹೋದರ, 4 ಮಂದಿ ಸಹೋದರಿಯರಿರುವ ಈ ಕುಟುಂಬವೊಂದರಲ್ಲಿ 27 ಸದಸ್ಯರಿದ್ದಾರೆ. ಈ ಕುಟುಂಬದಲ್ಲಿ ಎಲ್ಲರೂ ರಕ್ತದಾನಿಗಳೇ ಆಗಿದ್ದು, 16 ಮಂದಿ 50 ಬಾರಿ, 4 ಮಂದಿ 100 ಸಲ ರಕ್ತದಾನ ಮಾಡಿರುವ ಸಾಧನೆ ಹೊಂದಿದ್ದಾರೆ. ಇನ್ನು ಕುಟುಂಬಸ್ಥರೇ ಹೇಳುವಂತೆ 27 ಸದಸ್ಯರು ಸೇರಿ ಇದುವರೆಗೆ 1,400 ಯುನಿಟ್‌ ರಕ್ತದಾನ ಮಾಡಿದ್ದಾರೆ. ಅಂದರೆ ಈ ಕುಟುಂಬ ಮಾಡಿದ ಒಟ್ಟು ರಕ್ತದಾನದ ಪ್ರಮಾಣ 630 ಲೀ.

ಅಹಮದಾಬಾದ್‌ನ್ನು ರಕ್ತದಾನದ ರಾಜಧಾನಿ ಅಂತಲೇ ಕರೆಯುತ್ತಾರೆ. ಈ ನಗರದಲ್ಲಿ 139 ಮಂದಿ 100 ಬಾರಿ ರಕ್ತದಾನ ಮಾಡಿದ್ದಾರೆ. 2 ಕುಟುಂಬಗಳು 350 ಲೀ.ಗಿಂತಲೂ ಹೆಚ್ಚು ರಕ್ತದಾನ ಮಾಡಿದ್ದು, ಆ ಪೈಕಿ ಪಟೇಲ್‌ ಕುಟುಂಬ ಅತಿ ಹೆಚ್ಚು ಅಂದರೆ 630 ಲೀ ರಕ್ತದಾನ ಮಾಡಿದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಭಿನ್ನಮತದ ವಿವಾದ, ವಿಪಕ್ಷ ಆಕ್ರೋಶದ ಬೆನ್ನಲ್ಲೇ ಚು. ತ್ರಿಮೂರ್ತಿಗಳ ಸಭೆ
ನೋಟಿಸ್‌ ಕೊಟ್ಟವರ ಮನೆಗೇ ಇನ್ನು ಅಧಿಕಾರಿಗಳ ಬರ್ತಾರೆ-ಎಸ್‌ಐಆರ್‌ ನಿಯಮ ಸಡಿಲ