ದೇಶದ ಮುಖ್ಯಮಂತ್ರಿಗಳ ಆಸ್ತಿ ವಿವರ ಬಿಡುಗಡೆ : ಸಿದ್ದರಾಮಯ್ಯ ದೇಶದ ನಂ.3 ಶ್ರೀಮಂತ ಸಿಎಂ!

KannadaprabhaNewsNetwork |  
Published : Dec 31, 2024, 01:03 AM ISTUpdated : Dec 31, 2024, 04:12 AM IST
ಸಿದ್ಧರಾಮಯ್ಯ | Kannada Prabha

ಸಾರಾಂಶ

ದೇಶದ ಮುಖ್ಯಮಂತ್ರಿಗಳ ಆಸ್ತಿ ವಿವರವನ್ನು ಅಸೋಸಿಯೇಷನ್ ​​​​ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ಸ್ವಯಂಸೇವಾ ಸಂಸ್ಥೆ ಬಿಡುಗಡೆ ಮಾಡಿದ್ದು, ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 51 ಕೋಟಿ ರು. ಮೌಲ್ಯದ ಆಸ್ತಿಯೊಂದಿಗೆ ಶ್ರೀಮಂತ ಸಿಎಂಗಳ ಪೈಕಿ 3ನೇ ಸ್ಥಾನ ಪಡೆದಿದ್ದಾರೆ.

 ನವದೆಹಲಿ : ದೇಶದ ಮುಖ್ಯಮಂತ್ರಿಗಳ ಆಸ್ತಿ ವಿವರವನ್ನು ಅಸೋಸಿಯೇಷನ್ ​​​​ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ಸ್ವಯಂಸೇವಾ ಸಂಸ್ಥೆ ಬಿಡುಗಡೆ ಮಾಡಿದ್ದು, ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 51 ಕೋಟಿ ರು. ಮೌಲ್ಯದ ಆಸ್ತಿಯೊಂದಿಗೆ ಶ್ರೀಮಂತ ಸಿಎಂಗಳ ಪೈಕಿ 3ನೇ ಸ್ಥಾನ ಪಡೆದಿದ್ದಾರೆ.

ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಅವರು 931 ಕೋಟಿ ರು. ಮೌಲ್ಯದ ಆಸ್ತಿಯೊಂದಿಗೆ ಭಾರತದ ನಂ.1 ಧನಿಕ ಸಿಎಂ ಎನ್ನಿಸಿಕೊಂಡಿದ್ದಾರೆ. ಅರುಣಾಚಲ ಪ್ರದೇಶದ ಪೆಮಾ ಖಂಡು 332 ಕೋಟಿ ರು. ಆಸ್ತಿಯೊಂದಿಗೆ 2ನೇ ಹಾಗೂ 51 ಕೋಟಿ ರು. ಆಸ್ತಿಯೊಂದಿಗೆ ಸಿದ್ದರಾಮಯ್ಯ 3ನೇ ಸ್ಥಾನ ಪಡೆದಿದ್ದಾರೆ.

ಆದರೆ ಪಶ್ಚಿಮ ಬಂಗಾಳದ ಮಮತಾ ಬ್ಯಾನರ್ಜಿ ಕೇವಲ 15 ಲಕ್ಷ ರು. ಆಸ್ತಿಯೊಂದಿಗೆ ‘ಅತ್ಯಂತ ಬಡವ ಸಿಎಂ’ ಎಂಬ ಖ್ಯಾತಿಗೆ ಭಾಜನರಾಗಿದ್ದಾರೆ.

ಸಿಎಂಗಳ ನಿವ್ವಳ ಆದಾಯ 7.3 ಪಟ್ಟು ಅಧಿಕ:

ಭಾರತದ ತಲಾ ನಿವ್ವಳ ರಾಷ್ಟ್ರೀಯ ಆದಾಯ (ಎನ್‌ಎನ್‌ಐ) 2023-2024ರಲ್ಲಿ ಸರಿಸುಮಾರು 1,85,854 ರು. ಆಗಿದ್ದರೆ, ಮುಖ್ಯಮಂತ್ರಿಗಳ ಸರಾಸರಿ ಸ್ವ-ಆದಾಯವು 13,64,310 ರು. ಆಗಿದೆ. ಇದು ಭಾರತದ ಸರಾಸರಿ ತಲಾ ಆದಾಯಕ್ಕಿಂತ 7.3 ಪಟ್ಟು ಹೆಚ್ಚು.

ಬಡ ಸಿಎಂಗಳು:

ಪ.ಬಂಗಾಳದ ಮಮತಾ ಬ್ಯಾನರ್ಜಿ ಕೇವಲ 15 ಲಕ್ಷ ರು. ಆಸ್ತಿಯೊಂದಿಗೆ ‘ಅತ್ಯಂತ ಬಡವ ಸಿಎಂ’ ಆಗಿದ್ದರೆ,

55 ಲಕ್ಷ ರು. ಆಸ್ತಿ ಹೊಂದಿರುವ ಜಮ್ಮು-ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರು ಈ ಪಟ್ಟಿಯಲ್ಲಿ 2ನೇ ಹಾಗೂ 1 ಕೋಟಿ ರು. ಆಸ್ತಿಯೊಂದಿಗೆ ಕೇರಳದ ಪಿಣರಾಯಿ ವಿಜಯನ್ 3ನೇ ಸ್ಥಾನದಲ್ಲಿದ್ದಾರೆ.

13 ಸಿಎಂ ಮೇಲೆ ಕ್ರಿಮಿನಲ್ ಕೇಸು:

13 (ಶೇ. 42ರಷ್ಟು) ಮುಖ್ಯಮಂತ್ರಿಗಳು ತಮ್ಮ ವಿರುದ್ಧ ಕ್ರಿಮಿನಲ್ ಮೊಕದ್ದಮೆಗಳನ್ನು ಘೋಷಿಸಿಕೊಂಡಿದ್ದರೆ, ಅವರಲ್ಲಿ 10 (ಶೇ.32) ಮಂದಿ ಕೊಲೆ ಯತ್ನ, ಅಪಹರಣ, ಲಂಚ ಮತ್ತು ಕ್ರಿಮಿನಲ್ ಬೆದರಿಕೆ ಸೇರಿದಂತೆ ಗಂಭೀರ ಕ್ರಿಮಿನಲ್ ಪ್ರಕರಣಗಳನ್ನು ಘೋಷಿಸಿಕೊಂಡಿದ್ದಾರೆ. ಇನ್ನು 18 ಸಿಎಂಗಳ ಮೇಲೆ ಯಾವುದೇ ಕ್ರಿಮಿನಲ್‌ ಕೇಸಿಲ್ಲ.

ದೇಶದ 31 ಮುಖ್ಯಮಂತ್ರಿಗಳ ಪೈಕಿ ಇಬ್ಬರು (ಪಶ್ಚಿಮ ಬಂಗಾಳದ ಮಮತಾ ಬ್ಯಾನರ್ಜಿ ಮತ್ತು ದೆಹಲಿಯ ಅತಿಶಿ) ಮಾತ್ರ ಇಬ್ಬರು ಮಹಿಳೆಯರಾಗಿದ್ದಾರೆ.

- ಕರ್ನಾಟಕ ಮುಖ್ಯಮಂತ್ರಿ ಬಳಿ ₹51 ಕೋಟಿ ಆಸ್ತಿ । ಚಂದ್ರಬಾಬು ನಾಯ್ಡು ಪ್ರಥಮ, ಖಂಡು 2ನೇ ಸಿರಿವಂತ- ಮಮತಾ ಬ್ಯಾನರ್ಜಿ, ಒಮರ್‌ ಅಬ್ದುಲ್ಲಾ ದೇಶದ ಬಡ ಸಿಎಂಗಳು: ಎಡಿಆರ್‌ ಅಧ್ಯಯನ

- ಚಂದ್ರಬಾಬು ನಂ.1, ಖಂಡು ನಂ.1 ಧನಿಕ ಸಿಎಂ

- ಮಮತಾ ನಂ.1 ಬಡ ಸಿಎಂ, ಒಮರ್‌, ಪಿಣರಾಯಿ ಕೂಡ ‘ಬಡವರು’

- ಎಡಿಆರ್‌ನಿಂದ ದೇಶದ 31 ಸಿಎಂಗಳ ಆಸ್ತಿ ವಿವರ ಬಹಿರಂಗ

ಟಾಪ್-3 ಧನಿಕ ಸಿಎಂಗಳು

ಚಂದ್ರಬಾಬು ನಾಯ್ಡು931 ಕೋಟಿ ರು.

ಪೆಮಾ ಖಂಡು332 ಕೋಟಿ ರು.

ಸಿದ್ದರಾಮಯ್ಯ51 ಕೋಟಿ ರು.

ಟಾಪ್-3 ಬಡ ಸಿಎಂ

ಮಮತಾ ಬ್ಯಾನರ್ಜಿ15 ಲಕ್ಷ ರು.

ಒಮರ್ ಅಬ್ದುಲ್ಲಾ55 ಲಕ್ಷ ರು.

ಪಿಣರಾಯಿ ವಿಜಯನ್‌1 ಕೋಟಿ ರು.

ಸಿದ್ದು ₹23 ಕೋಟಿ

ಸಾಲಗಾರ ಸಿಎಂಪೆಮಾ ಖಂಡು ಅವರು 180 ಕೋಟಿ ರು.. ಸಾಲ ಹೊಂದಿದ್ದಾರೆ. ಸಿದ್ದರಾಮಯ್ಯ 23 ಕೋಟಿ ರು. ಹಾಗೂ ನಾಯ್ಡು 10 ಕೋಟಿ ರು. ಸಾಲ ಹೊಂದಿದ್ದಾರೆ ಎಂದು ಎಡಿಆರ್‌ ವರದಿ ತಿಳಿಸಿದೆ.

ಎಲ್ಲ ಸಿಎಂಗಳ ಬಳಿ ₹1630 ಕೋಟಿ ಆಸ್ತಿ

ರಾಜ್ಯ ವಿಧಾನಸಭೆಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಪ್ರತಿ ಮುಖ್ಯಮಂತ್ರಿಯ ಸರಾಸರಿ ಆಸ್ತಿ 52.59 ಕೋಟಿ ರು. ಎಂದು ವರದಿ ಹೇಳಿದೆ. ದೇಶದ 31 ಮುಖ್ಯಮಂತ್ರಿಗಳ ಒಟ್ಟು ಆಸ್ತಿ 1,630 ಕೋಟಿ ರು. ಆಗಿದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಮೈಸೂರು ಸ್ಯಾಂಡಲ್ ಸೋಪು ಉತ್ಪನ್ನ : ದಾಖಲೆ ಬರೆದ ಕೆಎಸ್‌ಡಿಎಲ್‌
ಮೇಘಾಲಯ ಮೇಲಿಲ್ಲ ಬಾಂಗ್ಲಾ ಸಂಘರ್ಷ ಪರಿಣಾಮ : ವಿಜಯ್‌