ಅಂತರಾಷ್ಟ್ರೀಯ ತೈಲ ಸ್ಮಗ್ಲಿಂಗ್‌ ಜಾಲ ಭೇದಿಸಿದ ಕರಾವಳಿ ಪಡೆ

Published : Feb 11, 2026, 07:20 AM IST
  Coastal

ಸಾರಾಂಶ

ಭಾರತೀಯ ಕರಾವಳಿ ಕಾವಲು ಪಡೆಯು (ಐಸಿಜಿ) ಸಮುದ್ರ ಮತ್ತು ವಾಯು ಆಧರಿತ ಕಾರ್ಯಾಚರಣೆ ನಡೆಸಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಾರ್ಯಾಚರಿಸುತ್ತಿದ್ದ ಬೃಹತ್‌ ತೈಲ ಕಳ್ಳಸಾಗಣೆ ಜಾಲವೊಂದನ್ನು ಸೋಮವಾರ ಭೇದಿಸಿದೆ. ಈ ರೀತಿ ಅಂತಾರಾಷ್ಟ್ರೀಯ ಮಟ್ಟದ ಜಾಲ ಭೇದಿಸಿದ್ದು ಇದೇ ಮೊದಲು.

 ನವದೆಹಲಿ: ಭಾರತೀಯ ಕರಾವಳಿ ಕಾವಲು ಪಡೆಯು (ಐಸಿಜಿ) ಸಮುದ್ರ ಮತ್ತು ವಾಯು ಆಧರಿತ ಕಾರ್ಯಾಚರಣೆ ನಡೆಸಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಾರ್ಯಾಚರಿಸುತ್ತಿದ್ದ ಬೃಹತ್‌ ತೈಲ ಕಳ್ಳಸಾಗಣೆ ಜಾಲವೊಂದನ್ನು ಸೋಮವಾರ ಭೇದಿಸಿದೆ. ಈ ರೀತಿ ಅಂತಾರಾಷ್ಟ್ರೀಯ ಮಟ್ಟದ ಜಾಲ ಭೇದಿಸಿದ್ದು ಇದೇ ಮೊದಲು.

ಫೆ.5ರಂದು ಮುಂಬೈನಿಂದ ಸುಮಾರು 185 ಕಿ.ಮೀ. ಪಶ್ಚಿಮಕ್ಕೆ ಸಂಚರಿಸುತ್ತಿದ್ದ 3 ಹಡಗು

ಮುನ್ನ ಫೆ.5ರಂದು ಮುಂಬೈನಿಂದ ಸುಮಾರು 185 ಕಿ.ಮೀ. ಪಶ್ಚಿಮಕ್ಕೆ ಶಂಕಾಸ್ಪದವಾಗಿ ಸಂಚರಿಸುತ್ತಿದ್ದ 3 ಹಡಗುಗಳನ್ನು ಐಸಿಜಿ ವಶಪಡಿಸಿಕೊಂಡಿತ್ತು. ಹಡಗಿನಲ್ಲಿದ್ದ ಸಿಬ್ಬಂದಿ ವಿಚಾರಣೆ ನಡೆಸಿ, ದಾಖಲೆಗಳು ಮತ್ತು ಎಲೆಕ್ಟ್ರಾನಿಕ್‌ ದತ್ತಾಂಶಗಳನ್ನು ಪರಿಶೀಲಿಸಿದಾಗ ಇಡೀ ಜಾಲದ ಸಂಚು ಬೆಳಕಿಗೆ ಬಂದಿದೆ.

ಕಳ್ಳಸಾಗಣೆಯಲ್ಲಿ ತೊಡಗಿದ್ದ ಹಡಗುಗಳು

ಕಳ್ಳಸಾಗಣೆಯಲ್ಲಿ ತೊಡಗಿದ್ದ ಹಡಗುಗಳು ಸಂಘರ್ಷಪೀಡಿತ ದೇಶಗಳಿಂದ ಅತ್ಯಂತ ಕಡಿಮೆ ಬೆಲೆಯಲ್ಲಿ ತೈಲ ಮತ್ತು ತೈಲ ಸಂಬಂಧಿ ಸರಕುಗಳನ್ನು ತರುತ್ತಿದ್ದವು. ಸಮುದ್ರದ ಮಧ್ಯದಲ್ಲಿ ಈ ಅಕ್ರಮ ತೈಲವನ್ನು ಇತರ ಮೋಟಾರ್‌ ಟ್ಯಾಂಕ್‌ಗಳಿಗೆ ವರ್ಗಾಯಿಸಲಾಗುತ್ತಿತ್ತು. ದೊಡ್ಡ ಮೊತ್ತದ ಲಾಭವನ್ನು ಪಡೆಯಲು ಇಡೀ ದಂಧೆಯನ್ನು ರೂಪಿಸಲಾಗಿತ್ತು ಎಂದು ಕಾರ್ಯಾಚರಣೆ ಬಳಿಕ ತಿಳಿದುಬಂದಿದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಜ। ನರವಣೆ ಆತ್ಮಚರಿತ್ರೆ ಬಗ್ಗೆ ರಾಹುಲ್‌ ವರ್ಸಸ್ ಪೆಂಗ್ವಿನ್‌
ಲ್ಯಾಂಬೋರ್ಘಿನಿ ಅವಘಡ : ಮಗನ ಬೆನ್ನಿಗೆ ನಿಂತ ಉದ್ಯಮಿ ಮಿಶ್ರಾ