ಅನುಕಂಪದ ಆಧಾರದ ಮೇಲೆ ಸರ್ಕಾರಿ ಉದ್ಯೋಗ ಪಡೆಯುವುದು ಹಕ್ಕಲ್ಲ : ಸುಪ್ರೀಂಕೋರ್ಟ್‌ ಮಹತ್ವದ ತೀರ್ಪು

KannadaprabhaNewsNetwork |  
Published : Nov 14, 2024, 12:54 AM ISTUpdated : Nov 14, 2024, 06:35 AM IST
Supreme Court

ಸಾರಾಂಶ

ಅನುಕಂಪದ ಆಧಾರದ ಮೇಲೆ ಸರ್ಕಾರಿ ಉದ್ಯೋಗ ಪಡೆಯುವುದು ಯಾವುದೇ ವ್ಯಕ್ತಿಯ ಹಕ್ಕಲ್ಲ. ಏಕೆಂದರೆ ಮೃತ ನೌಕರನ ಸೇವಾ ಷರತ್ತುಗಳಲ್ಲಿ ಇದರ ಉಲ್ಲೇಖವಿಲ್ಲ. ನಿಗದಿತ ಕಾಲಮಿತಿ ಬಳಿಕ ಇಂಥ ಉದ್ಯೋಗಕ್ಕೆ ಮಾಡಿದ ಮನವಿ ಪರಿಗಣಿಸಲಾಗದು ಎಂದು ಸುಪ್ರೀಂಕೋರ್ಟ್‌ ಮಹತ್ವದ ತೀರ್ಪು ನೀಡಿದೆ.

ನವದೆಹಲಿ: ಅನುಕಂಪದ ಆಧಾರದ ಮೇಲೆ ಸರ್ಕಾರಿ ಉದ್ಯೋಗ ಪಡೆಯುವುದು ಯಾವುದೇ ವ್ಯಕ್ತಿಯ ಹಕ್ಕಲ್ಲ. ಏಕೆಂದರೆ ಮೃತ ನೌಕರನ ಸೇವಾ ಷರತ್ತುಗಳಲ್ಲಿ ಇದರ ಉಲ್ಲೇಖವಿಲ್ಲ. ನಿಗದಿತ ಕಾಲಮಿತಿ ಬಳಿಕ ಇಂಥ ಉದ್ಯೋಗಕ್ಕೆ ಮಾಡಿದ ಮನವಿ ಪರಿಗಣಿಸಲಾಗದು ಎಂದು ಸುಪ್ರೀಂಕೋರ್ಟ್‌ ಮಹತ್ವದ ತೀರ್ಪು ನೀಡಿದೆ.

1997ರಲ್ಲಿ ಮೃತಪಟ್ಟ ಪೊಲೀಸ್‌ ಕಾನ್ಸ್‌ಟೇಬಲ್‌ ಒಬ್ಬರ ಪುತ್ರ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ। ಅಭಯ್‌ ಎಸ್‌. ಒಕಾ ನೇತೃತ್ವದ ತ್ರಿಸದಸ್ಯ ಪೀಠ, ‘ನೀತಿಗೆ ವಿರುದ್ಧವಾಗಿ ಒಬ್ಬರ ಪರವಾಗಿ ಅಕ್ರಮವನ್ನು ಮುಂದುವರಿಸುವಂತೆ ರಾಜ್ಯಕ್ಕೆ ನಿರ್ದೇಶನ ನೀಡಲಾಗದು. ಅನುಕಂಪ ಆಧಾರಿತ ನೇಮಕಾತಿಯತು ಮೃತರ ಕುಟುಂಬಕ್ಕೆ ಆ ಸಮಯದಲ್ಲಿ ತುರ್ತು ಆರ್ಥಿಕ ಸಹಾಯ ಮಾಡಲು ಇರುವುದೇ ಹೊರತು, ಅದು ಅವರ ಪರಿಪೂರ್ಣ ಹಕ್ಕಲ್ಲ’ ಎಂದು ಸ್ಪಷ್ಟಪಡಿಸಿದೆ.

ಜೊತೆಗೆ, ‘ಅನುಕಂಪ ಆಧಾರಿತ ನೇಮಕಾತಿ ನೌಕರನ ಸೇವೆಯ ಷರತ್ತುಗಳಲ್ಲಿಲ್ಲ. ಬದಲಿಗೆ, ಇಂತಹ ನೇಮಕಾತಿಗಳನ್ನು ನೀತಿ, ನಿಯಮ, ಸೂಚನೆಗಳ ಅಡಿಯಲ್ಲೇ ಮಾತ್ರವೇ ಮಾಡಲಾಗುವುದು’ ಎಂದು ಪೀಠ ತೀರ್ಪಿನಲ್ಲಿ ಸ್ಪಷ್ಟಪಡಿಸಿದೆ.

ಏನಿದು ಪ್ರಕರಣ?:

1997ರಲ್ಲಿ ಜೈ ಪ್ರಕಾಶ್‌ ಎಂಬ ಪೇದೆ ಕರ್ತವ್ಯದ ವೇಳೆ ಸಾವನ್ನಪ್ಪಿದ್ದರು. ಆಗ ಅವರ ಮಗ ಟಿಂಕು ಕೇವಲ 7 ವರ್ಷದವನಾಗಿದ್ದ. ಪ್ರಕಾಶ್‌ರ ಪತ್ನಿ ಅನಕ್ಷರಸ್ಥೆಯಾಗಿದ್ದ ಕಾರಣ ಅನುಕಂಪದ ಆಧಾರದಲ್ಲಿ ತನಗೆ ಕೆಲಸ ಕೊಡುವಂತೆ ಅರ್ಜಿ ಸಲ್ಲಿಸಿರಲಿಲ್ಲ. ಬದಲಿಗೆ, ಅಪ್ರಾಪ್ತನಾಗಿರುವ ಮಗ ವಯಸ್ಸಿಗೆ ಬಂದಾಗ ಅವನಿಗೆ ಕೆಲಸ ಕೊಡಬೇಕೆಂದು ಮನವಿ ಮಾಡಿದ್ದರು. 

ಅದರಂತೆ ಟಿಂಕು 2008ರಲ್ಲಿ ಅದೇ ಹುದ್ದೆಗೆ ಅರ್ಜಿ ಸಲ್ಲಿಸಿದ್ದ. ಅದನ್ನು ತಿರಸ್ಕರಿಸಿದ ಅಧಿಕಾರಿಗಳು, ನೌಕರ ಸಾವನ್ನಪ್ಪಿದ 3 ವರ್ಷಗಳೊಳಗಾಗಿ ಅರ್ಜಿ ಸಲ್ಲಿಸಬಹುದಷ್ಟೇ ಎಂದಿದ್ದರು. ಪಂಜಾಬ್‌ ಹಾಗೂ ಹರ್ಯಾಣ ಸರ್ಕಾರವೂ ಈ ಮನವಿ ನಿರಾಕರಿಸಿದ್ದು, ಈಗ ಸುಪ್ರೀಂ ಕೂಡ ಅವುಗಳ ನಿರ್ಧಾರ ಎತ್ತಿಹಿಡಿದಿದೆ. ಜೊತೆಗೆ, ಪರಿವಾರಕ್ಕೆ ಆರ್ಥಿಕ ನೆರವು ಒದಗಿಸುವ ಭರವಸೆ ನೀಡಿದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

2025 ಸುಧಾರಣೆಗಳ ಸಾರ್ಥಕ ವರ್ಷ: ಮೋದಿ ಹರ್ಷ
ಪತ್ರಕರ್ತರ ಹಿತರಕ್ಷಣೆಗೆ ಐಎಫ್‌ಡಬ್ಲ್ಯುಜೆ ಆಗ್ರಹ