ನವದೆಹಲಿ: ಪ್ಯಾಲೆಸ್ತೀನ್ ಹೆಸರಿರುವ ಬ್ಯಾಗ್ ಜೊತೆ ಸದನಕ್ಕೆ ಬಂದು ವಿವಾದ ಸೃಷ್ಟಿಸಿದ್ದ ವಯನಾಡು ಸಂಸದೆ, ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಮಂಗಳವಾರ ಸಂಸತ್‌ಗೆ ಬಾಂಗ್ಲಾದೇಶದ ಹಿಂದೂಗಳ ಪರ ಬರಹವಿರುವ ಬ್ಯಾಗ್ ಹಿಡಿದು ಬಂದು ಮತ್ತೆ ಸುದ್ದಿಯಾಗಿದ್ದಾರೆ. ಬಾಂಗ್ಲಾದೇಶದಲ್ಲಿ ಹಿಂದೂಗಳು ಸೇರಿದಂತೆ ಅಲ್ಪಸಂಖ್ಯಾತರ ಮೇಲೆ ನಡೆಯುತ್ತಿರುವ ದೌರ್ಜನ್ಯದ ವಿರುದ್ಧ ಪ್ರಿಯಾಂಕಾ ಗಾಂಧಿ ಸೇರಿದಂತೆ ಕಾಂಗ್ರೆಸ್‌ನ ಹಲವು ಸಂಸದರು ಪ್ರತಿಭಟನೆ ನಡೆಸಿದ್ದಾರೆ. ಈ ವೇಳೆ ಪ್ರಿಯಾಂಕಾ ಸೇರಿದಂತೆ ವಿಪಕ್ಷದ ಸಂಸದರು ‘ಬಾಂಗ್ಲಾದೇಶದಲ್ಲಿರುವ ಹಿಂದೂಗಳು ಮತ್ತು ಕ್ರೈಸ್ತರ ಪರವಾಗಿ ನಿಲ್ಲೋಣ’ ಎನ್ನುವ ಬ್ಯಾಗ್ ಹಿಡಿದು ಗಮನ ಸೆಳೆದರು ಬಾಂಗ್ಲಾದಲ್ಲಿರುವ ಅಲ್ಪಸಂಖ್ಯಾತ ಹಿಂದೂಗಳನ್ನು ರಕ್ಷಿಸಿ ಎಂದು ಸರ್ಕಾರದ ವಿರುದ್ಧ ಕಾಂಗ್ರೆಸ್ ಸಂಸದರು ಪ್ರತಿಭಟನೆಗಳನ್ನು ಕೂಗಿದರು.
ನವದೆಹಲಿ: ರೈತರು ಗದ್ದೆಗಳಲ್ಲಿ ಬೆಳೆಗಳಿಗೆ ಕ್ರಿಮಿನಾಶಕಗಳ ಸಿಂಪಡನೆ ಮಾಡುವ ಸಂದರ್ಭದಲ್ಲಿ ಕ್ರಿಮಿನಾಶಕಗಳಿಂದ ಉಂಟಾಗುವ ಹಾನಿಕಾರಕ ಪರಿಣಾಮಗಳಿಂದ ರಕ್ಷಿಸಿಕೊಳ್ಳಲು ಕೇಂದ್ರ ಸರ್ಕಾರ ಬೆಂಗಳೂರು ಮೂಲದ ಕಂಪನಿ ತಯಾರಿಸಿದ, ‘ಕಿಸಾನ್ ಕವಚ’ ಉಡುಗೆಯೊಂದನ್ನು ಲೋಕಾರ್ಪಣೆಗೊಳಿಸಿದೆ.ಕೇಂದ್ರದ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಜಿತೇಂದ್ರ ಸಿಂಗ್ ಅವರು ಈ ಬಾಡಿ ಸೂಟ್ ಬಿಡುಗಡೆ ಮಾಡಿದ್ದಾರೆ. ಬೆಂಗಳೂರು ಮೂಲದ ಬ್ರಿಕ್ - ಇನ್‌ಸ್ಟೆಮ್ ಸಂಸ್ಥೆಯು ಸೆಪಿಯೋ ಹೆಲ್ತ್ ಪ್ರೈವೇಟ್ ಲಿಮಿಟೆಡ್‌ನ ಸಹಯೋಗದಲ್ಲಿ ರೈತರಿಗಂತಲೇ ಈ ಉಡಪು ಸಿದ್ಧಗೊಳಿಸಿದೆ. ಇದರ ಬೆಲೆ 4 ಸಾವಿರ ರು. ಆಗಿದ್ದು, ಇದನ್ನು ಹತ್ತಿಯಿಂದ ರೈತರು 150 ಸಲ ಮರುಬಳಕೆ ಮಾಡಬಹುದು.