ಶಿಕ್ಷಣ ಸಾಲ ಮನ್ನಾ ಸೇರಿ 25 ಗ್ಯಾರಂಟಿಗಳ ಕೈ ಪ್ರಣಾಳಿಕೆ

KannadaprabhaNewsNetwork |  
Published : Apr 06, 2024, 12:54 AM ISTUpdated : Apr 06, 2024, 05:21 AM IST
ಕಾಂಗ್ರೆಸ್‌ ಪ್ರಣಾಳಿಕೆ ಬಿಡುಗಡೆ | Kannada Prabha

ಸಾರಾಂಶ

ಲೋಕಸಭೆ ಚುನಾವಣೆಗೆ ‘ನ್ಯಾಯಪತ್ರ’ ಹೆಸರಿನ ಕಾಂಗ್ರೆಸ್‌ ಪ್ರಣಾಳಿಕೆಯನ್ನು ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮಾಜಿ ಅಧ್ಯಕ್ಷರಾದ ಸೋನಿಯಾ ಗಾಂಧಿ ಹಾಗೂ ರಾಹುಲ್‌ ಗಾಂಧಿ ಶುಕ್ರವಾರ ಬಿಡುಗಡೆ ಮಾಡಿದರು.

  ನವದೆಹಲಿ :  ಶಿಷ್ಯ ವೇತನದ ಹಕ್ಕು, ವಿದ್ಯಾರ್ಥಿಗಳ ಶೈಕ್ಷಣಿಕ ಸಾಲ ಮನ್ನಾ, ರೈತರ ಬೆಳೆಗಳಿಗೆ ಕಾನೂನು ಖಾತರಿ, ಕಡು ಬಡ ಮಹಿಳೆಯರಿಗೆ ವಾರ್ಷಿಕ 1 ಲಕ್ಷ ರು. ನೀಡಿಕೆ, ದೇಶದ ಎಲ್ಲರಿಗೂ 25 ಲಕ್ಷ ರು. ಆರೋಗ್ಯ ವಿಮೆ, ಎಸ್‌ಸಿ-ಎಸ್‌ಟಿ ಮತ್ತು ಒಬಿಸಿಗಳ ಮೀಸಲಾತಿಯ ಮಿತಿ ಹೆಚ್ಚಿಸಲು ಶೇ.50 ಮೀಸಲಾತಿ ಮಿತಿ ರದ್ದುಪಡಿಸುವುದು, ರಾಷ್ಟ್ರವ್ಯಾಪಿ ಜಾತಿ-ಆರ್ಥಿಕ ಗಣತಿ ಮತ್ತು ಅಗ್ನಿಪಥ್ ಯೋಜನೆ ರದ್ದುಗೊಳಿಸುವುದು.   ಇವು ಶುಕ್ರವಾರ ಕಾಂಗ್ರೆಸ್‌ ಪಕ್ಷ ಬಿಡುಗಡೆ ಮಾಡಿದ ಲೋಕಸಭಾ ಚುನಾವಣೆಯ ಪ್ರಣಾಳಿಕೆಯಲ್ಲಿ ನೀಡಿರುವ ಪ್ರಮುಖ ಭರವಸೆಗಳು.

ಐದು ‘ನ್ಯಾಯದ ಆಧಾರ ಸ್ತಂಭಗಳು’ ಮತ್ತು ಅವುಗಳ ಅಡಿಯಲ್ಲಿ 25 ಖಾತರಿಗಳ ಮೇಲೆ ಗಮನ ಕೇಂದ್ರೀಕರಿಸಿದ ಪ್ರಣಾಳಿಕೆಯನ್ನು ಎಐಸಿಸಿ ಪ್ರಧಾನ ಕಚೇರಿಯಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಪಕ್ಷದ ಮಾಜಿ ಮುಖ್ಯಸ್ಥರಾದ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಬಿಡುಗಡೆ ಮಾಡಿದರು.ಖರ್ಗೆ, ರಾಹುಲ್ ಮತ್ತು ಭಾರತ್ ಜೋಡೋ ಯಾತ್ರೆಗಳ ಚಿತ್ರಗಳನ್ನು ಒಳಗೊಂಡಿರುವ ‘ನ್ಯಾಯಪತ್ರ’ ಶೀರ್ಷಿಕೆಯ 45 ಪುಟಗಳ ದಾಖಲೆಯಲ್ಲಿ, ಹಲವಾರು ಮಹತ್ವದ ಘೋಷಣೆಗಳನ್ನು ಮಾಡಲಾಗಿದೆ.

ಪ್ರಮುಖ ಭರವಸೆಗಳು ಏನು?

- ಎಸ್‌ಸಿ, ಎಸ್‌ಟಿ, ಒಬಿಸಿ ಮೀಸಲಾತಿಯ ಶೇ.50ರಷ್ಟು ಮಿತಿ ರದ್ದು. ಇದಕ್ಕಾಗಿ ಸಾಂವಿಧಾನಿಕ ತಿದ್ದುಪಡಿ.- ಎಲ್ಲಾ ಜಾತಿಗಳಿಗೆ ಉದ್ಯೋಗ ಹಾಗೂ ಶಿಕ್ಷಣ ಸಂಸ್ಥೆಗಳಲ್ಲಿ ಇಡಬ್ಲ್ಯುಎಸ್ ಕೋಟಾ ಅಡಿ ಶೇ.10 ಮೀಸಲು.- ಕನಿಷ್ಠ ಬೆಂಬಲ ಬೆಲೆಗಳಿಗೆ (ಎಂಎಸ್‌ಪಿ) ಕಾನೂನು ರೂಪ. ಸ್ವಾಮಿನಾಥನ್ ಆಯೋಗದ ಶಿಫಾರಸು ಜಾರಿ.- ಜಮ್ಮು ಮತ್ತು ಕಾಶ್ಮೀರ, ಪುದುಚೇರಿಗೆ ಪೂರ್ಣ ರಾಜ್ಯಸ್ಥಾನಮಾನ. ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನ.

- ಚುನಾವಣಾ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ತರಲು ಎಲ್ಲ ವಿವಿಪ್ಯಾಟ್ ಸ್ಲಿಪ್‌ ಇವಿಎಂಗಳೊಂದಿಗೆ ತಾಳೆ.- ಸೇನೆಗೆ 4 ವರ್ಷದ ಮಟ್ಟಿಗೆ ಸೈನಿಕರನ್ನು ನೇಮಕ ಮಾಡಿಕೊಳ್ಳುವ ಅಗ್ನಿಪಥ್ ಯೋಜನೆ ರದ್ದು. - ಚುನಾವಣಾ ಬಾಂಡ್‌, ಅಪನಗದೀಕರಣ, ರಫೇಲ್‌ ಖರೀದಿ, ಪಿಎಂ ಕೇರ್‌ ‘ಹಗರಣಗಳ’ ತನಿಖೆ.

- ಕೇಂದ್ರ ಸರ್ಕಾರದಲ್ಲಿ 30 ಲಕ್ಷ ಖಾಲಿ ಹುದ್ದೆಗಳ ಭರ್ತಿ.- ದೇಶಾದ್ಯಂತ ಜನರಿಗೆ 25 ಲಕ್ಷ ರು.ಗಳವರೆಗೆ ನಗದುರಹಿತ ವಿಮೆ.

- ಎಲ್ಲಾ ವಿದ್ಯಾರ್ಥಿಗಳ ಶೈಕ್ಷಣಿಕ ಸಾಲ, ಬಡ್ಡಿ ಮನ್ನಾ. - ಮಹಾಲಕ್ಷ್ಮಿ ಯೋಜನೆಯಡಿ ಬಡ ಕುಟುಂಬದ ಮಹಿಳೆಗೆ ವರ್ಷಕ್ಕೆ 1 ಲಕ್ಷ ರು. ನಗದು

- ಸಾರ್ವಜನಿಕ ಆಸ್ತಿಗಳ ಅಜಾಗರೂಕ ಮಾರಾಟ, ಪಿಎಂ ಕೇರ್ಸ್ ಹಗರಣ, ಗುಪ್ತಚರ ವೈಫಲ್ಯಗಳು ಮತ್ತು ಪ್ರಮುಖ ರಕ್ಷಣಾ ವ್ಯವಹಾರಗಳಲ್ಲಿನ ಭ್ರಷ್ಟಾಚಾರದ ತನಿಖೆ- ಕೇಂದ್ರಾಡಳಿತ ಪ್ರದೇಶಗಳಲ್ಲಿ ಜನಪ್ರತಿನಿಧಿಗಳಿಗೆ ಹೆಚ್ಚಿನ ಅಧಿಕಾರ.- ಡಿಪ್ಲೊಮಾ ಹೊಂದಿರುವವರಿಗೆ ಅಥವಾ 25 ವರ್ಷಕ್ಕಿಂತ ಕಡಿಮೆ ವಯಸ್ಸಿನ ಪದವೀಧರರಿಗೆ ಒಂದು ವರ್ಷದ ಅಪ್ರೆಂಟಿಸ್‌ಶಿಪ್ ಒದಗಿಸಲು ಹೊಸ ‘ಶಿಕ್ಷಣ ಹಕ್ಕು ಕಾಯ್ದೆ’ ಜಾರಿ, ಇದರ ಅಡಿ ಅಪ್ರೆಂಟಿಸ್‌ ತರಬೇತಿ ಪಡೆವವರಿಗೆ ವರ್ಷಕ್ಕೆ 1 ಲಕ್ಷ ರು. 

  2025ರಿಂದ ಮಹಿಳೆಯರಿಗೆ ಶೇ.50 ಉದ್ಯೋಗ ಮೀಸಲು- ಎಂನರೇಗಾ (ಉದ್ಯೋಗ ಖಾತ್ರಿ) ಅಡಿ ದೈನಿಕ ವೇತನ ದಿನಕ್ಕೆ 400 ರು.ಗೆ ಹೆಚ್ಚಳ- ಎಲ್‌ಜಿಬಿಟಿ ಸಮುದಾಯದ ಸೇರಿದ ದಂಪತಿಗಳ ನಾಗರಿಕ ಸಹಜೀವನಕ್ಕೆ ಮಾನ್ಯತೆ ನೀಡಲು ಕಾನೂನು 

 ರಾಷ್ಟ್ರವ್ಯಾಪಿ ಸಾಮಾಜಿಕ-ಆರ್ಥಿಕ ಮತ್ತು ಜಾತಿ ಗಣತಿ ಮಾಡುವುದು. ಸಮುದಾಯಗಳ ಜನಸಂಖ್ಯೆ ಹಾಗೂ ಅವರ ಆರ್ಥಿಕ ಪರಿಸ್ಥಿತಿಗೆ ಅನುಗುಣವಾಗಿ ಎಲ್ಲಾ ವರ್ಗಗಳ ನಡುವೆ ಸಂಪನ್ಮೂಲಗಳ ಸಮಾನ ಹಂಚಿಕೆ- ಖಾಸಗಿತನದ ಹಕ್ಕನ್ನು ಅಡ್ಡಿಪಡಿಸುವ ವಿವಿಧ ಕಾನೂನುಗಳಿಗೆ ಸೂಕ್ತ ತಿದ್ದುಪಡಿಗಳನ್ನು ಮಾಡುವುದು.

- ‘ಒಂದು ರಾಷ್ಟ್ರ, ಒಂದು ಚುನಾವಣೆ'''''''' ಕಲ್ಪನೆಗೆ ತಿರಸ್ಕಾರ. ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಿಗೆ ಸಂವಿಧಾನ ಮತ್ತು ಸಂಸದೀಯ ಪ್ರಜಾಪ್ರಭುತ್ವದ ಸಂಪ್ರದಾಯಗಳಿಗೆ ಅನುಸಾರವಾಗಿ ಮತ್ತು ನಿಗದಿತ ಸಮಯದಲ್ಲಿ ಈಗಿನಂತೆಯೇ ಚುನಾವಣೆ.- ಎನ್‌ಡಿಎ ಸರ್ಕಾರ ತಂದಿರುವ ಹೊಸ ಶಿಕ್ಷಣ ನೀತಿಯನ್ನು ಮರು ಪರಿಶೀಲನೆ- ಎಲ್ಲಾ ಕ್ರಿಮಿನಲ್ ಕಾನೂನುಗಳಲ್ಲಿ ''''''''ಜಾಮೀನು ನಿಯಮ, ಜೈಲು ಅಪವಾದ'''''''' ಎಂಬ ತತ್ವ ಅಳವಡಿಸುವ ಹೊಸ ಜಾಮೀನು ಕಾಯ್ದೆ ಜಾರಿ. 

ಜೈಲುಗಳ ಸುಧಾರಣೆಗೆ ಕ್ರಮ- ಶಾಲಾ ಕೊಠಡಿಗಳು, ಗ್ರಂಥಾಲಯಗಳು ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳಂತಹ ಸಾರ್ವಜನಿಕ ಸ್ವತ್ತುಗಳನ್ನು ನಿರ್ಮಾಣಕ್ಕೆ ಉದ್ಯೋಗ ಖಾತ್ರಿ ಕೆಲಸಗಾರರ ನಿಯೋಜನೆ- ಅಧಿಕಾರಕ್ಕೆ ಬಂದ ತಕ್ಷಣ ಜಮ್ಮು-ಕಾಶ್ಮೀರಕ್ಕೆ ಸಂಪೂರ್ಣ ರಾಜ್ಯತ್ವ. ಲಡಾಖ್‌ನ ಬುಡಕಟ್ಟು ಪ್ರದೇಶಗಳನ್ನು ಸೇರಿಸಲು ಸಂವಿಧಾನದ 6ನೇ ಶೆಡ್ಯೂಲ್‌ಗೆ ತಿದ್ದುಪಡಿ

 ನಗರ ಮೂಲಸೌಕರ್ಯಗಳ ಯೋಜನೆಗಳಲ್ಲಿ ಅರ್ಹರಿಗೆ ಕೆಲಸ ನೀಡಿ ಕೆಲಸ ಖಾತರಿಪಡಿಸುವ ನಗರ ಉದ್ಯೋಗ ಯೋಜನೆ ಆರಂಭ- ಬಿಜೆಪಿ/ಎನ್‌ಡಿಎ ಜಾರಿಗೆ ತಂದಿರುವ ಎಲ್ಲಾ ಜನವಿರೋಧಿ ಕಾನೂನುಗಳ ಮರುಪರಿಶೀಲನೆ ಹಾಗೂ ಬದಲಾವಣೆ- ಕಾರ್ಮಿಕರು, ರೈತರು, ಕ್ರಿಮಿನಲ್ ನ್ಯಾಯ, ಪರಿಸರ ಮತ್ತು ಅರಣ್ಯಗಳು ಮತ್ತು ಡಿಜಿಟಲ್ ಡೇಟಾ ರಕ್ಷಣೆಗೆ ಸಂಬಂಧಿಸಿದ ಕಾಯ್ದೆಗಳ ಸಂಪೂರ್ಣ ಪರಿಶೀಲನೆ/ಬದಲಾವಣೆ- ಚೀನಾದೊಂದಿಗಿನ ದೇಶದ ಗಡಿಯಲ್ಲಿ ಯಥಾಸ್ಥಿತಿಯನ್ನು ಪುನಃಸ್ಥಾಪಿಸಲು ಕ್ರಮ. - ಈ ಹಿಂದೆ ಭಾರತ-ಚೀನಾ ಸೇನೆಗಳು ಗಸ್ತು ತಿರುಗುತ್ತಿದ್ದ ಪ್ರದೇಶಕ್ಕೆ ಮತ್ತೆ ಭಾರತೀಯ ಸೈನಿಕರ ಪ್ರವೇಶಕ್ಕೆ ಕ್ರಮ- ಮಾಲ್ಡೀವ್ಸ್‌ ಜತೆ ಸಂಬಂಧ ಮರುಸ್ಥಾಪನೆಗೆ ಕ್ರಮ.- ಇವಿಎಂ ದಕ್ಷತೆ ಮತ್ತು ಬ್ಯಾಲೆಟ್ ಪೇಪರ್‌ಗಳ ಪಾರದರ್ಶಕತೆ ಸಂಯೋಜಿಸಲು ಕಾನೂನುಗಳನ್ನು ತಿದ್ದುಪಡಿ

 10 ವರ್ಷಗಳಲ್ಲಿ 23 ಕೋಟಿ ಜನ ಬಡತನ ರೇಖೆಯಿಂದ ಹೊರಕ್ಕೆ.

PREV

Recommended Stories

ಆಲಮಟ್ಟಿ ಡ್ಯಾಂ ಎತ್ತರ ಹೆಚ್ಚಳ ವಿರುದ್ಧ ಕೇಂದ್ರಕ್ಕೆ ಮಹಾ ದೂರು
ಸನಾತನ ಧರ್ಮದ ಕೊಂಡಿ ಕಳಚಲು ಶಿಕ್ಷಣದಿಂದ ಮಾತ್ರ ಸಾಧ್ಯ : ಕಮಲ್‌