ಮೋದಿ ಪರಿವಾರ್‌, ಮೋದಿ ಕಿ ಗ್ಯಾರಂಟಿ ವಿರುದ್ಧ ಚು.ಆಯೋಗಕ್ಕೆ ‘ಕೈ’ ದೂರು

KannadaprabhaNewsNetwork | Updated : Mar 23 2024, 08:09 AM IST

ಸಾರಾಂಶ

ಸರ್ಕಾರದ ಹಣದಲ್ಲಿ ಬಿಜೆಪಿಯು ಮೋದಿ ಕಿ ಗ್ಯಾರಂಟಿ ಎಂದು ಚುನಾವಣಾ ಪ್ರಚಾರದ ಜಾಹೀರಾತು ಫಲಕಗಳನ್ನು ಹಾಕುತ್ತಿದೆ ಎಂದು ಕಾಂಗ್ರೆಸ್‌ ಚುನಾವಣಾ ಆಯೋಗಕ್ಕೆ ದೂರು ನೀಡಿದೆ.

ನವದೆಹಲಿ: ಲೋಕಸಭೆ ಚುನಾವಣೆ ಸಿದ್ಧತೆ ನಡೆಯುತ್ತಿರುವಂತೆ ಪಕ್ಷಗಳು ಒಂದರ ಮೇಲೊಂದು ದೂರುಗಳನ್ನು ದಾಖಲಿಸುತ್ತಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ಸರ್ಕಾರದ ಹಣದಿಂದ ‘ಮೋದಿ ಕಿ ಗ್ಯಾರಂಟಿ’ ಹಾಗೂ ‘ಮೋದಿ ಪರಿವಾರ್‌’ ಜಾಹೀರಾತುಗಳನ್ನು ಹಾಕುತ್ತಿದ್ದಾರೆ ಎಂದು ಚುನಾವಣಾ ಆಯೋಗಕ್ಕೆ ಕಾಂಗ್ರೆಸ್‌ ದೂರು ಸಲ್ಲಿಸಿದೆ.

ಚುನಾವಣಾ ಆಯೋಗಕ್ಕೆ ತೆರಳಿದ ಕಾಂಗ್ರೆಸ್‌ ನಿಯೋಗ, ಹಲವು ದೂರು ಪ್ರತಿಗಳನ್ನು ಸಲ್ಲಿಸಿತು. ಅದರಲ್ಲಿ ‘ಬಿಜೆಪಿಯು ದಶಕಗಳ ಹಳೆಯ ಹಾಗೂ ನ್ಯಾಯಾಂಗದಿಂದ ಬಗೆಹರಿದ 2ಜಿ ಹಗರಣವನ್ನು ಮತ್ತೆ ತೆಗೆಯುತ್ತಿದೆ. 

ಅಲ್ಲದೇ ದುರುದ್ದೇಶ ಪೂರಿತವಾಗಿ ಜಾಹೀರಾತುಗಳನ್ನು ಅಳವಡಿಸುತ್ತಿದೆ. ಇವುಗಳನ್ನು ಕೂಡಲೇ ತೆಗೆಸಿ, ಅದನ್ನು ಹಾಕಿಸಿದವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು’ ಎಂದು ಆಗ್ರಹಿಸಿತು.

Share this article