ನನ್ನ ತಂದೆಯನ್ನು ಕಳೆದುಕೊಂಡಷ್ಟೇ ದುಃಖ ಆಗಿದೆ: ಲೋಕಸಭೆ ವಿಪಕ್ಷ ನಾಯಕ ರಾಹುಲ್‌ ಗಾಂಧಿ

KannadaprabhaNewsNetwork | Updated : Aug 02 2024, 06:32 AM IST

ಸಾರಾಂಶ

ಕೇರಳದ ವಯನಾಡ್‌ ಕ್ಷೇತ್ರದ ಹಿಂದಿನ ಸಂಸದ, ಲೋಕಸಭೆ ವಿಪಕ್ಷ ನಾಯಕ ರಾಹುಲ್‌ ಗಾಂಧಿ ಹಾಗೂ ವಯನಾಡ್ ಲೋಕಸಭಾ ಕ್ಷೇತ್ರದ ಉಪಚುನಾವಣೆಯ ಕಾಂಗ್ರೆಸ್‌ ಅಭ್ಯರ್ಥಿ ಪ್ರಿಯಾಂಕಾ ಗಾಂಧಿ ಅವರು ಗುರುವಾರ ಮಧ್ಯಾಹ್ನ ಇಲ್ಲಿನ ಭೂಕುಸಿತ ದುರಂತ ಸಂಭವಿಸಿದ ಪ್ರದೇಶಗಳಿಗೆ ಭೇಟಿ ನೀಡಿದರು.

  ವಯನಾಡ್‌ : ಕೇರಳದ ವಯನಾಡ್‌ ಕ್ಷೇತ್ರದ ಹಿಂದಿನ ಸಂಸದ, ಲೋಕಸಭೆ ವಿಪಕ್ಷ ನಾಯಕ ರಾಹುಲ್‌ ಗಾಂಧಿ ಹಾಗೂ ವಯನಾಡ್ ಲೋಕಸಭಾ ಕ್ಷೇತ್ರದ ಉಪಚುನಾವಣೆಯ ಕಾಂಗ್ರೆಸ್‌ ಅಭ್ಯರ್ಥಿ ಪ್ರಿಯಾಂಕಾ ಗಾಂಧಿ ಅವರು ಗುರುವಾರ ಮಧ್ಯಾಹ್ನ ಇಲ್ಲಿನ ಭೂಕುಸಿತ ದುರಂತ ಸಂಭವಿಸಿದ ಚೂರನ್‌ಮಲೆ, ಮೆಪ್ಪಾಡಿ ಹಾಗೂ ಇತರ ವಿವಿಧ ಪ್ರದೇಶಗಳಿಗೆ ಭೇಟಿ ನೀಡಿದರು. 

ಈ ವೇಳೆ ಮಾತನಾಡಿದ ಅವರು, ‘ನನ್ನ ತಂದೆ ತೀರಿಕೊಂಡ ದಿನ ಆದ ದುಃಖದಷ್ಟೇ ಈಗಲೂ ದುಃಖವಾಗಿದೆ. ಇದು ರಾಷ್ಟ್ರೀಯ ವಿಕೋಪ ಆಗಿದ್ದು, ಮುಂದಿನ ದಿನಗಳಲ್ಲಿ ಇಂಥ ದುರಂತ ತಪ್ಪಿಸಲು ಕ್ರಿಯಾಯೋಜನೆಯ ಅಗತ್ಯವಿದೆ ಎಂದಿದ್ದಾರೆ.

ಸುರಿಯುತ್ತಿರುವ ಮಳೆಯ ನಡುವೆಯೇ ರೇನ್‌ಕೋಟ್‌ ಧರಿಸಿ ಸ್ಥಳಕ್ಕಾಗಮಿಸಿದ ರಾಹುಲ್‌ ಗಾಂಧಿ ಮತ್ತು ಪ್ರಿಯಾಂಕಾ ಮೆಪ್ಪಾಡಿಯ ಸಮುದಾಯ ಆರೋಗ್ಯ ಕೇಂದ್ರಕ್ಕೆ ತರೆಳಿದರು ಅಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸಂತ್ರಸ್ತರನ್ನು ಮಾತನಾಡಿಸಿದರು.

ನಂತರ ಇಬ್ಬರೂ ಡಾ ಮೂಪನ್ಸ್ ಮೆಡಿಕಲ್ ಕಾಲೇಜು ಮತ್ತು ಮೆಪ್ಪಾಡಿಯ ಎರಡು ನಿರಾಶ್ರಿತರ ಶಿಬಿರಗಳಿಗೂ ಭೇಟಿ ನೀಡಿದರು. ಅಲ್ಲದೆ, ಮೆಪ್ಪಾಡಿಯಲ್ಲಿನ ಶವಾಗಾರಕ್ಕೂ ಭೇಟಿ ಕೊಟ್ಟರು.

ಬಳಿಕ ಸುದ್ದಿಗಾರರ ಜತೆ ಮಾತನಾಡಿದ ರಾಹುಲ್‌, ‘ಇಂದು ವಯನಾಡಿನ ದುಃಖಿತ ಜನರೊಂದಿಗೆ ಮಾತನಾಡಿದ ನಂತರ, ನನ್ನ ತಂದೆ ತೀರಿಕೊಂಡ ದಿನ ಆದಷ್ಟೇ ದುಃಖ ಆಗಿದೆ. ಇಲ್ಲಿ ಅನೇಕರು ತಮ್ಮ ಇಡೀ ಕುಟುಂಬವನ್ನು ಕಳೆದುಕೊಂಡಿದ್ದಾರೆ, ಈ ಸಂಕಷ್ಟದ ಸಮಯದಲ್ಲಿ ಇಡೀ ದೇಶವೇ ವಯನಾಡಿನೊಂದಿಗೆ ನಿಂತಿದೆ. ಜನರನ್ನು ಬೆಂಬಲಿಸಲು ಅಗತ್ಯವಿರುವ ಎಲ್ಲಾ ನೆರವು ನೀಡಲು ನಾವು ಒಗ್ಗೂಡಬೇಕು ಮತ್ತು ಒಟ್ಟಾಗಿ ಕೆಲಸ ಮಾಡಬೇಕು’ ಎಂದರು.

ಜು.30ಕ್ಕೆ ಕೇರಳಕ್ಕೆ ರೆಡ್‌ ಅಲರ್ಟ್‌ ನೀಡಿದ್ದೆವು: ಐಎಂಡಿ ಮುಖ್ಯಸ್ಥ

ನವದೆಹಲಿ: ‘ಜು. 23ರಂದೇ ವಯನಾಡಿಗೆ ಸಂಭವನೀಯ ಪ್ರಾಕೃತಿಕ ವಿಪತ್ತಿನ ಬಗ್ಗೆ ಮುನ್ಸೂಚನೆ ನೀಡಿದ್ದೆವು. ಆದರೆ ಕೇರಳ ಎಚ್ಚೆತ್ತುಕೊಂಡಿರಲಿಲ್ಲ’ ಎಂದು ಬುಧವಾರ ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿಕೆ ನೀಡಿದ ಬೆನ್ನಲ್ಲೇ, ‘ಜುಲೈ 30ರ ಬೆಳಿಗ್ಗೆ ಕೇರಳಕ್ಕೆ ರೆಡ್‌ ಅಲರ್ಟ್‌ ನೀಡಿದ್ದೆವು’ ಎಂದು ಭಾರತೀಯ ಹವಾಮಾನ ಇಲಾಖೆ(ಐಎಂಡಿ) ಮುಖ್ಯಸ್ಥ ಮೃತ್ಯುಂಜಯ ಮೊಹಪಾತ್ರ ಹೇಳಿದ್ದಾರೆ.

‘20 ಸೆಂ.ಮೀ ತನಕ ಭಾರೀ ಮಳೆಯಾಗಬಹುದು ಎನ್ನುವ ಸೂಚನೆಯೊಂದಿಗೆ ಜು.30ರ ಬೆಳಿಗ್ಗೆ ರೆಡ್ ಅಲರ್ಟ್‌ ನೀಡಿದ್ದೆವು. ಆರೆಂಜ್ ಅಲರ್ಟ್‌ ಎಂದರೆ ಮುನ್ನೆಚ್ಚರಿಕೆ ತೆಗೆದುಕೊಳ್ಳಲು ಸಿದ್ಧರಾಗಿರಿ ಎಂದರ್ಥ. ರೆಡ್‌ ಅಲರ್ಟ್‌ ಬರುವ ತನಕ ಕಾಯಬಾರದು’ ಎಂದಿದ್ದಾರೆ.ಆದರೆ ಕೇರಳ ಸಿಎಂ ಪಿಣರಾಯಿ ವಿಜಯನ್ ಈ ವಿಚಾರವನ್ನು ಅಲ್ಲಗಳೆದಿದ್ದು, ‘ಐಎಂಡಿ ಆರೆಂಜ್ ಅಲರ್ಟ್‌ ಮಾತ್ರವೇ ಘೋಷಿಸಿತ್ತು’ ಎಂದಿದ್ದರು.

Share this article