ಕಾಂಗ್ರೆಸ್‌ಗೆ ತುಕ್ಡೇ ತುಕ್ಡೇ ಗ್ಯಾಂಗ್‌, ನಗರ ನಕ್ಸಲರ ನೇತೃತ್ವ: ಪ್ರಧಾನಿ ನರೇಂದ್ರ ಮೋದಿ

KannadaprabhaNewsNetwork |  
Published : Sep 21, 2024, 01:57 AM ISTUpdated : Sep 21, 2024, 06:47 AM IST
ಮೋದಿ ಟೀಕೆ | Kannada Prabha

ಸಾರಾಂಶ

ಕಾಂಗ್ರೆಸ್‌ ಅತಿ ಭ್ರಷ್ಟ ಪಕ್ಷ ಎಂದಿರುವ ಪ್ರಧಾನಿ ನರೇಂದ್ರ ಮೋದಿ, ಅದರ ನೇತೃತ್ವವನ್ನು ತುಕ್ಡೇ ತುಕ್ಡೇ ಗ್ಯಾಂಗ್‌, ನಗರ ನಕ್ಸಲರು ವಹಿಸಿಕೊಂಡಿದ್ದಾರೆ ಎಂದು ಕಿಡಿ ಕಾರಿದ್ದಾರೆ.

ವರ್ಧಾ(ಮಹಾರಾಷ್ಟ್ರ): ಕಾಂಗ್ರೆಸ್‌ ಅತಿ ಭ್ರಷ್ಟ ಪಕ್ಷ ಎಂದಿರುವ ಪ್ರಧಾನಿ ನರೇಂದ್ರ ಮೋದಿ, ಅದರ ನೇತೃತ್ವವನ್ನು ತುಕ್ಡೇ ತುಕ್ಡೇ ಗ್ಯಾಂಗ್‌, ನಗರ ನಕ್ಸಲರು ವಹಿಸಿಕೊಂಡಿದ್ದಾರೆ ಎಂದು ಕಿಡಿ ಕಾರಿದ್ದಾರೆ.

ವಿಶ್ವಕರ್ಮ ಯೋಜನೆಯ ವಾರ್ಷಿಕೋತ್ಸವದ ಅಂಗವಾಗಿ ಆಯೋಜಿಸಲಾಗಿದ್ದ ಸಾರ್ವಜನಿಕ ಸಭೆ ಉದ್ದೇಶಿಸಿ ಮಾತನಾಡಿದ ಮೋದಿ, ‘ಇಂದು ನೀವು ನೋಡುತ್ತಿರುವ ಕಾಂಗ್ರೆಸ್ ಮಹಾತ್ಮಾ ಗಾಂಧಿಯಂತಹವರಿದ್ದ ಪಕ್ಷವಲ್ಲ. ದ್ವೇಷದ ಭೂತ ಪಕ್ಷವನ್ನು ಹೊಕ್ಕಿದ್ದು, ದೇಶಪ್ರೇಮ ಕೊನೆಯುಸಿರೆಳೆದಿದೆ’ ಎಂದು ಟೀಕಿಸಿದರು.

ಈ ವೇಳೆ ರಾಹುಲ್‌ ಅಮೆರಿಕದಲ್ಲಿ ಮೀಸಲಾತಿಯ ಬಗ್ಗೆ ನೀಡಿದ್ದ ಹೇಳಿಕೆಯನ್ನು ಪರೋಕ್ಷವಾಗಿ ಟೀಕಿಸುತ್ತಾ ಕಾಂಗ್ರೆಸ್‌ ಮತ್ತು ಅವರ ರಾಜಕುಟುಂಬ ಅತ್ಯಂತ ಭ್ರಷ್ಟ ಎಂದಿದ್ದಾರೆ. ಜೊತೆಗೆ ಗಣಪತಿ ಪೂಜೆಯನ್ನೂ ದ್ವೇಷಿಸುವ ವಿಪಕ್ಷ, ಓಲೈಕೆಯ ರಾಜಕಾರಣಕ್ಕಾಗಿ ಪುಜೆಯಲ್ಲಿ ಭಾಗವಹಿಸಿದ ನನ್ನನ್ನು ಟೀಕಿಸಿತು ಹಾಗೂ ಕರ್ನಾಟಕದಲ್ಲಿ ಗಣೇಶನನ್ನು ಪೊಲೀಸ್‌ ಗಾಡಿಯಲ್ಲಿ ಕೊಂಡೊಯ್ಯಲಾಯಿತು ಎನ್ನುತ್ತಾ ಈ ಬಗ್ಗೆ ಮಹಾರಾಷ್ಟ್ರದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್‌ ಮಿತ್ರಪಕ್ಷಗಳು ವಹಿಸಿರುವ ಮೌನವನ್ನು ಪ್ರಶ್ನಿಸಿದರು.

ಮುಂಬರುವ ಮಹಾರಾಷ್ಟ್ರ ಚುನಾವಣೆಯ ಬಗ್ಗೆ ಮಾತನಾಡಿ, ‘ಸುಳ್ಳು ಮತ್ತು ದ್ರೋಹವನ್ನು ತನ್ನ ಗುರುತಾಗಿಸಿಕೊಂಡಿರುವ, ರೈತರನ್ನು ರಾಜಕಾರಣ ಮತ್ತು ಭ್ರಷ್ಟಾಚಾರಕ್ಕಷ್ಟೇ ಬಳಸುವ, ವಿಶ್ವಕರ್ಮ ಸಮುದಾಯವನ್ನು ಕಡೆಗಣಿಸಿದ ಕಾಂಗ್ರೆಸ್‌ಗೆ ಅವಕಾಶ ಕೊಡಬಾರದು’ ಎಂದು ಆಗ್ರಹಿಸಿದ್ದು, ನಮ್ಮ ಸರ್ಕಾರ ಜವಳಿ ಉದ್ಯಮವನ್ನು ಜಾಗತಿಕ ಮಾರುಕಟ್ಟಗೆ ವಿಸ್ತರಿಸಲು ಬಯಸಿದೆ ಎಂದರು.

ಕಳೆದೊಂದು ವರ್ಷದಲ್ಲಿ ವಿಶ್ವಕರ್ಮ ಯೋಜನೆಯೊಂದಿಗೆ 18 ವೃತ್ತಿಗಳ 20 ಲಕ್ಷ ಜನ ಕೈಜೋಡಿಸಿದ್ದು, 8 ಲಕ್ಷ ಕುಶಲಕರ್ಮಿಗಳು ತರಬೇತಿ ಪಡೆದಿದ್ದಾರೆ ಎಂದ ಮೋದಿ ಅಮರಾವತಿಯಲ್ಲಿ 1,000 ಎಕರೆಯ ಪಿಎಂ ಮೆಗಾ ಇಂಟಿಗ್ರೇಟೆಡ್ ಟೆಕ್ಸ್ಟೈಲ್ ರೀಜನ್ಸ್‌ ಮತ್ತು ಉಡುಪು ಪಾರ್ಕ್‌ಗೆ ಶಂಕುಸ್ಥಾಪನೆ ನೆರವೇರಿಸಿದರು.

ಇಂದಿನಿಂದ ಮೋದಿ 3 ದಿನ ಅಮೆರಿಕ ಪ್ರವಾಸ

ನವದೆಹಲಿ: ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾಗುವ ಸಲುವಾಗಿ ಪ್ರಧಾನಿ ನರೇಂದ್ರ ಮೋದಿ ಸೆ.21ರಿಂದ 23ರವರೆಗೆ ಮೂರು ದಿನಗಳ ಕಾಲ ಅಮೆರಿಕ ಪ್ರವಾಸ ಕೈಗೊಳ್ಳಲಿದ್ದಾರೆ.

ಸೆ.21ರಂದು ಡೆಲ್ವಾರೆಯ ವಿಲ್ಮಿಂಗ್‌ಟನ್‌ನಲ್ಲಿ ಅಮೆರಿಕ, ಭಾರತ, ಆಸ್ಟ್ರೇಲಿಯಾ ಮತ್ತು ಜಪಾನ್‌ ದೇಶಗಳ ವಾರ್ಷಿಕ ಕ್ವಾಡ್‌ ಸಮ್ಮೇಳನ ನಡೆಯಲಿದ್ದು ಅದರಲ್ಲಿ ಭಾರತದ ಪ್ರಧಾನಿ ಮೋದಿ ಭಾಗಿಯಾಗಲಿದ್ದಾರೆ. ಸೆ.22ರಂದು ನ್ಯೂಯಾರ್ಕ್‌ನಲ್ಲಿ ಭಾರತೀಯ ಸಮುದಾಯದವರನ್ನು ಉದ್ದೇಶಿಸಿ ಪ್ರಧಾನಿ ಮೋದಿ ಮಾತನಾಡಲಿದ್ದು, ಜಾಗತಿಕ ಕಂಪನಿಗಳ ಸಿಇಒಗಳ ಜೊತೆ ಮಾತುಕತೆ ನಡೆಸಲಿದ್ದಾರೆ. ಸೆ.23ರಂದು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ‘ಸಮ್ಮಿಟ್‌ ಆಫ್‌ ಫ್ಯೂಚರ್‌’ ಸಮ್ಮೇಳನ ಉದ್ದೇಶಿಸಿ ಮೋದಿ ಮಾತನಾಡಲಿದ್ದಾರೆ.ಈ ಭೇಟಿಯ ವೇಳೆ ಪ್ರಧಾನಿ ಮೋದಿ ಅವರನ್ನು ಭೇಟಿಯಾಗುವ ಭರವಸೆಯನ್ನು, ಅಮೆರಿಕದ ಮಾಜಿ ಅಧ್ಯಕ್ಷ ಮತ್ತು ಹಾಲಿ ಅಭ್ಯರ್ಥಿ ಡೊನಾಲ್ಡ್‌ ಟ್ರಂಪ್‌ ವ್ಯಕ್ತಪಡಿಸಿರುವವರಾದರೂ, ಅದಿನ್ನೂ ಖಚಿತಪಟ್ಟಿಲ್ಲ.

PREV

Recommended Stories

15 ವರ್ಷ ಬಳಿಕ ಗುಜರಿ ವ್ಯಾಪ್ತಿಗೆಎಲೆಕ್ಟ್ರಿಕ್‌ ವಾಹನಗಳು ಬರಲ್ಲ?
ಡೆಂಘೀ ವಿರುದ್ಧ ಹೋರಾಟಕ್ಕೆ ಯುರೋಪ್ - ಭಾರತ ವಿಜ್ಞಾನಿಗಳ ಮೈತ್ರಿ