ನಾಯಕ ರಾಹುಲ್‌ ಗಾಂಧಿ ನೇತೃತ್ವದ ಕಾಂಗ್ರೆಸ್‌ ಸಭೆಯಲ್ಲಿ ಸಂವಿಧಾನದ ಖಾಲಿ ಪ್ರತಿ ವಿತರಣೆ : ವಿವಾದ

KannadaprabhaNewsNetwork |  
Published : Nov 07, 2024, 11:52 PM ISTUpdated : Nov 08, 2024, 05:10 AM IST
ಕಾಂಗ್ರೆಸ್‌ | Kannada Prabha

ಸಾರಾಂಶ

ಸಂವಿಧಾನ ರಕ್ಷಣೆಗಾಗಿ ಮಹಾರಾಷ್ಟ್ರದ ನಾಗ್ಪುರದಲ್ಲಿ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ನೇತೃತ್ವದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದ ವೇಳೆ ಸಂವಿಧಾನದ ಖಾಲಿ ಪ್ರತಿಗಳನ್ನು ವಿತರಿಸಲಾಗಿದೆ ಎಂದು ಬಿಜೆಪಿ ಆರೋಪಿಸಿದೆ.

ಮುಂಬೈ: ಸಂವಿಧಾನ ರಕ್ಷಣೆಗಾಗಿ ಮಹಾರಾಷ್ಟ್ರದ ನಾಗ್ಪುರದಲ್ಲಿ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ನೇತೃತ್ವದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದ ವೇಳೆ ಸಂವಿಧಾನದ ಖಾಲಿ ಪ್ರತಿಗಳನ್ನು ವಿತರಿಸಲಾಗಿದೆ ಎಂದು ಬಿಜೆಪಿ ಆರೋಪಿಸಿದೆ.

‘ಭಾರತದ ಸಂವಿಧಾನ’ ಎಂದು ಬರೆಯಲಾಗಿರುವ ಪುಸ್ತಕದಲ್ಲಿ ಪೀಠಿಕೆಯನ್ನು ಹೊರತುಪಡಿಸಿ ಉಳಿದೆಲ್ಲಾ ಪುಟಗಳು ಖಾಲಿಯಾಗಿರುವ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ರಾಜ್ಯ ಬಿಜೆಪಿ, ‘ಕಾಂಗ್ರೆಸ್‌ ಭಾರತದ ಸಂವಿಧಾನವನ್ನು ಹೀಗೆ ಅಳಿಸಬಯಸಿದೆ. ಡಾ. ಬಿ.ಆರ್‌. ಅಂಬೇಡ್ಕರ್‌ ರಚಿತ ಎಲ್ಲಾ ಕಾನೂನುಗಳನ್ನೂ ತೆಗೆದುಹಾಕಲಾಗಿದೆ. ಆದ್ದರಿಂದಲೇ ಮೀಸಲಾತಿ ತೆಗೆದುಹಾಕುವ ಬಗ್ಗೆ ರಾಹುಲ್‌ ಮಾತಾಡುತ್ತಾರೆ’ ಎಂದು ಟೀಕಿಸಿದೆ. ಜೊತೆಗೆ, ಸಂವಿಧಾನವು ಚುನಾವಾಣೆಯ ವಿಷಯವಲ್ಲ. ಅದು ದೇಶವಾಸಿಗಳ ಜೀವನದ ಅಡಿಪಾಯ ಎಂದು ಹೇಳಿದೆ.

ಸಂವಿಧಾನದ ಪ್ರತಿ ಕೆಂಪು ಬಣ್ಣದಲ್ಲಿದ್ದುದನ್ನು ಗಮನಿಸಿದ ಡಿಸಿಎಂ ಫಡ್ನವೀಸ್‌, ‘ಇದು ನಗರ ನಕ್ಸಲರು ಹಾಗೂ ಅರಾಜಕತಾವಾದಿಗಳ ಕಡೆಗಿನ ಒಲವಿನ ಸಂಕೇತ’ ಎಂದಿದ್ದಾರೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಮೋದಿ ಜತೆ ಪ್ರಿಯಾಂಕಾ ಗಾಂಧಿ ಆತ್ಮೀಯ ಮಾತು!
ಬಾಂಗ್ಲಾ ಹಿಂದು ಯುವಕನ ನರಮೇಧ - ಬಡಿದು ಕೊಂದು, ಮರಕ್ಕೆ ಕಟ್ಟಿ ಸುಟ್ಟು ಅಟ್ಟಹಾಸ