ಅಯೋಧ್ಯೆಯಂತೆ ಗುಜರಾತಲ್ಲೂ ಬಿಜೆಪಿ ಸೋಲಿಸ್ತೇವೆ: ರಾಹುಲ್‌

KannadaprabhaNewsNetwork |  
Published : Jul 07, 2024, 01:15 AM ISTUpdated : Jul 07, 2024, 05:53 AM IST
ರಾಹುಲ್‌ ಗಾಂಧಿ | Kannada Prabha

ಸಾರಾಂಶ

‘ಅಯೋಧ್ಯೆ ಲೋಕಸಭಾ ಕ್ಷೇತ್ರದಲ್ಲಿ ಇಂಡಿಯಾ ಕೂಟವು ಬಿಜೆಪಿಯನ್ನು ಸೋಲಿಸಿದ ರೀತಿಯಲ್ಲಿಯೇ ಮುಂದಿನ ಗುಜರಾತ್‌ ಚುನಾವಣೆಯಲ್ಲಿಯೂ ಬಿಜೆಪಿಯನ್ನು ಸೋಲಿಸುತ್ತೇವೆ’ ಎಂದು ಕಾಂಗ್ರೆಸ್‌ ಮುಖಂಡ ಮತ್ತು ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್‌ ಗಾಂಧಿ ಹೇಳಿದ್ದಾರೆ.

ಅಹಮದಾಬಾದ್‌: ‘ಅಯೋಧ್ಯೆ ಲೋಕಸಭಾ ಕ್ಷೇತ್ರದಲ್ಲಿ ಇಂಡಿಯಾ ಕೂಟವು ಬಿಜೆಪಿಯನ್ನು ಸೋಲಿಸಿದ ರೀತಿಯಲ್ಲಿಯೇ ಮುಂದಿನ ಗುಜರಾತ್‌ ಚುನಾವಣೆಯಲ್ಲಿಯೂ ಬಿಜೆಪಿಯನ್ನು ಸೋಲಿಸುತ್ತೇವೆ’ ಎಂದು ಕಾಂಗ್ರೆಸ್‌ ಮುಖಂಡ ಮತ್ತು ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್‌ ಗಾಂಧಿ ಹೇಳಿದ್ದಾರೆ.

ಅಹಮದಾಬಾದ್‌ನಲ್ಲಿ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ರಾಹುಲ್. ‘ಅವರು (ಬಿಜೆಪಿ) ನಮಗೆ ಬೆದರಿಕೆ ಹಾಕುವ ಮೂಲಕ ಮತ್ತು ನಮ್ಮ ಪಕ್ಷದ ಅಹಮದಾಬಾದ್‌ ಕಚೇರಿಯನ್ನು ಒಡೆದು ಹಾಕುವ ಮೂಲಕ ನಮಗೆ ಸವಾಲು ಹಾಕಿದ್ದಾರೆ. ಅವರು ನಮ್ಮ ಕಚೇರಿಯನ್ನು ಕೆಡವಿದ ರೀತಿಯಲ್ಲಿಯೇ ನಾವೆಲ್ಲರೂ ಒಗ್ಗಟ್ಟಾಗಿ ಅವರನ್ನು ಸರ್ಕಾರವನ್ನು ಒಡೆದುಹಾಕಬೇಕು. ಬರೆದಿಟ್ಟುಕೊಳ್ಳಿ, ಕಾಂಗ್ರೆಸ್‌ ಗುಜರಾತ್‌ ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತದೆ. ಅಯೋಧ್ಯೆ ರೀತಿಯಲ್ಲಿಯೇ ಗುಜರಾತ್‌ನಲ್ಲಿಯೂ ಬಿಜೆಪಿ ಮತ್ತು ಮೋದಿಯನ್ನು ಸೋಲಿಸುತ್ತೇವೆ’ ಎಂದಿದರು.

‘ಅಯೋಧ್ಯೆ ವಿಮಾನ ನಿಲ್ದಾಣವನ್ನು ನಿರ್ಮಿಸಿದಾಗ ಅಯೋಧ್ಯೆಯ ರೈತರು ತಮ್ಮ ಭೂಮಿಯನ್ನು ಕಳೆದುಕೊಂಡರು, ರಾಮಮಂದಿರ ಉದ್ಘಾಟನೆಗೆ ಅಯೋಧ್ಯೆಯಿಂದ ಯಾರನ್ನೂ ಆಹ್ವಾನಿಸಲಿಲ್ಲ. ಇದರಿಂದ ಜನ ಅಸಮಾಧಾನಗೊಂಡರು. ಅಯೋಧ್ಯೆಯೇ ಕೇಂದ್ರವಾಗಿದ್ದ ಅಡ್ವಾಣಿ ಆರಂಭಿಸಿದ್ದ ಚಳವಳಿಯನ್ನು ಇಂಡಿಯಾ ಒಕ್ಕೂಟವು ಅಯೋಧ್ಯೆಯಲ್ಲೇ ಸೋಲಿಸಿತು’ ಎಂದರು.

ಅಲ್ಲದೇ ಗುಜರಾತ್‌ ಗೆಲುವಿನ ಬಳಿಕ ಹೊಸ ಅಧ್ಯಾಯ ಆರಂಭವಾಗುತ್ತದೆ ಎಂದೂ ಅವರು ಭವಿಷ್ಯ ನುಡಿದರು.

ಜುಲೈ 2ರಂದು ಅಹಮದಾಬಾದ್‌ ಕಾಂಗ್ರೆಸ್‌ ಕಚೇರಿ ಮೇಲೆ ರಾಹುಲ್‌ ಗಾಂಧಿ ಅವರ ‘ಹಿಂದೂ ಹೇಳಿಕೆ’ ಖಂಡಿಸಿ ದಾಳಿ ಮಾಡಿದ್ದರು. ಇದನ್ನು ಉಲ್ಲೇಖಿಸಿ ರಾಹುಲ್‌ ಸೇಡಿನ ಮಾತುಗಳನ್ನು ಆಡಿದರು. ಇತ್ತೀಚೆಗೆ ಲೋಕಸಭೆಯಲ್ಲೂ ರಾಹುಲ್‌, ‘ಗುಜರಾತ್‌ನಲ್ಲಿ ಬಿಜೆಪಿಯನ್ನು ಸೋಲಿಸುತ್ತೇವೆ’ ಎಂದಿದ್ದರು.

ಜುಲೈ 2ರಂದು ಅಹಮದಾಬಾದ್‌ ಕಾಂಗ್ರೆಸ್‌ ಕಚೇರಿ ಮೇಲೆ ರಾಹುಲ್‌ ಗಾಂಧಿ ಅವರ ‘ಹಿಂದೂ ಹೇಳಿಕೆ’ ಖಂಡಿಸಿ ದಾಳಿ ಮಾಡಿದ್ದರು. ಇದನ್ನು ಉಲ್ಲೇಖಿಸಿ ರಾಹುಲ್‌ ಸೇಡಿನ ಮಾತುಗಳನ್ನು ಆಡಿದರು. ಇತ್ತೀಚೆಗೆ ಲೋಕಸಭೆಯಲ್ಲೂ ರಾಹುಲ್‌, ‘ಗುಜರಾತ್‌ನಲ್ಲಿ ಬಿಜೆಪಿಯನ್ನು ಸೋಲಿಸುತ್ತೇವೆ’ ಎಂದಿದ್ದರು.

PREV

Recommended Stories

ಜನಸಂಖ್ಯೆಯ 10% ಮಂದಿಯಿಂದ ಸೇನೆ ನಿಯಂತ್ರಣ: ರಾಗಾ ವಿವಾದ
ಬಿಹಾರದಲ್ಲಿ ಎನ್‌ಡಿಎಗೆ ಬಹುಮತ ? - 153-164 ಸ್ಥಾನ ಗೆಲುವು : ಐಎಎನ್‌ಎಸ್‌ ಸರ್ವೆ