ಸಂವಿಧಾನ ಮೇಲೆ ದಾಳಿಯ ಬಗ್ಗೆ ಚರ್ಚೆ ಅಗತ್ಯ : ನ್ಯಾ. ರೆಡ್ಡಿ ಸಲಹೆ

KannadaprabhaNewsNetwork |  
Published : Aug 24, 2025, 02:00 AM IST
ನ್ಯಾ. ರೆಡ್ಡಿ | Kannada Prabha

ಸಾರಾಂಶ

ದೇಶದಲ್ಲೀಗ ಪ್ರಜಾಪ್ರಭುತ್ವದ ಕೊರತೆ ಇದೆ ಮತ್ತು ಸಂವಿಧಾನಕ್ಕೆ ಸವಾಲು ಎದುರಾಗಿದೆ. ಅವಕಾಶ ಸಿಕ್ಕರೆ ಸಂವಿಧಾನವನ್ನು ಸಮರ್ಥಿಸಿಕೊಳ್ಳುವ ಮತ್ತು ಅದನ್ನು ರಕ್ಷಿಸುವ ಕೆಲಸ ಮಾಡುವೆ ಎಂದು ವಿಪಕ್ಷಗಳ ಉಪರಾಷ್ಟ್ರಪತಿ ಅಭ್ಯರ್ಥಿ, ನ್ಯಾ. ಸುದರ್ಶನ್‌ ರೆಡ್ಡಿ ಹೇಳಿದ್ದಾರೆ.

 ನವದೆಹಲಿ: ದೇಶದಲ್ಲೀಗ ಪ್ರಜಾಪ್ರಭುತ್ವದ ಕೊರತೆ ಇದೆ ಮತ್ತು ಸಂವಿಧಾನಕ್ಕೆ ಸವಾಲು ಎದುರಾಗಿದೆ. ಅವಕಾಶ ಸಿಕ್ಕರೆ ಸಂವಿಧಾನವನ್ನು ಸಮರ್ಥಿಸಿಕೊಳ್ಳುವ ಮತ್ತು ಅದನ್ನು ರಕ್ಷಿಸುವ ಕೆಲಸ ಮಾಡುವೆ ಎಂದು ವಿಪಕ್ಷಗಳ ಉಪರಾಷ್ಟ್ರಪತಿ ಅಭ್ಯರ್ಥಿ, ನ್ಯಾ. ಸುದರ್ಶನ್‌ ರೆಡ್ಡಿ ಹೇಳಿದ್ದಾರೆ. ಜೊತೆಗೆ ತಾವು ನಕ್ಸಲ್‌ ಪರ ಎಂಬ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಹೇಳಿಕೆ ತಿರುಗೇಟು ನೀಡಿರುವ ಅವರು, ಸಲ್ವಾ ಜುಡುಂ ತೀರ್ಪು ನೀಡಿದ್ದು ಸುಪ್ರೀಂಕೋರ್ಟ್‌ ಎಂದು ಹೇಳಿದ್ದಾರೆ.

ಉಮೇದುವಾರಿಕೆ ಹಿನ್ನೆಲೆಯಲ್ಲಿ ಪಿಟಿಐ ಸುದ್ದಿಸಂಸ್ಥೆಗೆ ಸಂದರ್ಶನ ನೀಡಿರುವ ನಿವೃತ್ತ ನ್ಯಾಯಮೂರ್ತಿ ರೆಡ್ಡಿ, ‘ಪ್ರಜಾಪ್ರಭುತ್ವದಲ್ಲಿ ಸಂಸತ್ತಿನ ಅಡಚಣೆಗಳು ಅತ್ಯಗತ್ಯ. ಆದರೆ ಅವು ಪ್ರಜಾಪ್ರಭುತ್ವದ ಪ್ರಕ್ರಿಯೆಯ ಅವಿಭಾಜ್ಯ ಅಂಗವಾಗಬಾರದು. ಚರ್ಚೆಗಳು ಸಭ್ಯತೆ ಮೀರಬಾರದು. ಸದ್ಯ ದೇಶದಲ್ಲಿ ಪ್ರಜಾಪ್ರಭುತ್ವದ ಕೊರತೆ ಇದೆ. ಪ್ರಜಾಪ್ರಭುತ್ವ ಎಂದರೆ ನನ್ನ ದೃಷ್ಟಿಯಲ್ಲಿ ವ್ಯಕ್ತಿಗಳ ನಡುವಿನ ಸೆಣಸಾಟವಲ್ಲ. ಸೈದ್ಧಾಂತಿಕ ಹೋರಾಟ ಎಂದಿದ್ದಾರೆ.

ಇದೇ ವೇಳೆ ಭಾರತದಲ್ಲಿ ಈಗಲೂ ಸಾಂವಿಧಾನಿಕ ಪ್ರಜಾಪ್ರಭುತ್ವ ಇದೆಯಾದರೂ ಅದು ಒತ್ತಡದಲ್ಲಿದೆ. ಸಂವಿಧಾನದ ಮೇಲೆ ದಾಳಿ ನಡೆಯುತ್ತಿದೆಯೇ ಎಂಬುದರನನಗೆ ಅವಕಾಶ ಸಿಕ್ಕರೆ ಸಂವಿಧಾನವನ್ನು ಸಮರ್ಥಿಸಿಕೊಳ್ಳುವ ಮತ್ತು ಅದನ್ನು ರಕ್ಷಿಸುವ ಕೆಲಸ ಮಾಡುವೆ ಎಂದಿದ್ದಾರೆ.

ಈ ನಡುವೆ ತಮ್ಮನ್ನು ನಕ್ಸಲ್‌ ಪರ ಎಂದು ಆರೋಪಿಸಿದ ಅಮಿತ್‌ ಶಾ ಹೇಳಿಕೆಗೆ ತಿರುಗೇಟು ನೀಡಿರುವ ನ್ಯಾ. ರೆಡ್ಡಿ, ‘ಗೃಹ ಸಚಿವರು ಹೇಳಿರುವ ಈ ವಿಚಾರದ ಬಗ್ಗೆ ನೇರವಾಗಿ ಮಾತನಾಡಲು ಬಯಸುವುದಿಲ್ಲ. ನಾನು ತೀರ್ಪನ್ನು ಬರೆದಿದ್ದೇನೆ ಅಷ್ಟೇ.. ತೀರ್ಪು ನನ್ನದಲ್ಲ. ಸುಪ್ರೀಂ ಕೋರ್ಟ್‌ನದ್ದು. ಅಮಿತ್‌ ಶಾ ಅವರು 40 ಪುಟಗಳ ತೀರ್ಪನ್ನು ಓದಬೇಕು. ಒಂದು ವೇಳೆ ಅವರು ಅದನ್ನು ಓದಿದ್ದರೆ ಅವರು ಈ ರೀತಿಯ ಹೇಳಿಕೆ ನೀಡುತ್ತಿರಲಿಲ್ಲ. ನಾನು ಇಷ್ಟನ್ನು ಮಾತ್ರ ಹೇಳಿ, ಇದನ್ನು ಇಲ್ಲಿಗೆ ಬಿಟ್ಟು ಬಿಡುತ್ತೇನೆ, ಚರ್ಚೆಯಲ್ಲಿ ಸಭ್ಯತೆ ಇರಬೇಕು’ ಎಂದು ಹೇಳಿದ್ದಾರೆ.

PREV
Read more Articles on

Recommended Stories

ಇನ್ನು ಭಾರತದಲ್ಲಿಯೇ ಯುದ್ಧ ವಿಮಾನಕ್ಕೆ ಎಂಜಿನ್‌ ತಯಾರಿ
ಕೇರಳ ಯುವ ಕಾಂಗ್ರೆಸ್‌ ಅಧ್ಯಕ್ಷನ ಬಗ್ಗೆ ರಿನಿ ಬಳಿಕ ಹನಿ ಆರೋಪ