ಭೋಪಾಲ್: ಪೊಲೀಸ್ ಪೇದೆಯೊಬ್ಬ ಸತತ 12 ವರ್ಷಗಳ ಕಾಲ ಒಂದೂ ದಿನವೂ ಸಹ ಕೆಲಸ ಮಾಡದೆ ಇದ್ದರೂ ಬರೋಬ್ಬರಿ 35 ಲಕ್ಷ ರು. ಸಂಬಳ ಪಡೆದ ವಿಚಿತ್ರ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.
ಅಭಿಷೇಕ್ ಎಂಬುವರು 2011-12ನೇ ಸಾಲಿನಲ್ಲಿ ಭೋಪಾಲ್‌ನಲ್ಲಿ ಕಾನ್ಸ್‌ಟೆಬಲ್ ಆಗಿ ಆಯ್ಕೆಯಾಗಿದ್ದರು. ಆದರೆ ಸೇವೆಗೆ ಸೇರ್ಪಡೆಗೆ ವಿಳಂಬ ಮಾಡಿದ್ದರು. ಹೀಗಾಗಿ ಅವರನ್ನ ಪ್ರತ್ಯೇಕವಾಗಿ ತರಬೇತಿಗೆಂದು ಕಳುಹಿಸಲಾಗಿತ್ತು. ಆದರೆ ತರಬೇತಿಗೆ ತೆರಳುವ ಬದಲು ಅಭಿಷೇಕ್ ತಮ್ಮ ಜಿಲ್ಲೆ ವಿಧಿಶಾಕ್ಕೆ ಮರಳಿದ್ದರು. ಬಳಿಕ ತಮ್ಮ ಗೈರಿನ ಕುರಿತು ಇಲಾಖೆಗೆ ಮಾಹಿತಿ ನೀಡುವ ಕೆಲಸವನ್ನಾಗಲೀ, ದೀರ್ಘಾವಧಿ ರಜೆಗೆ ಅನುಮತಿಯನ್ನೂ ಕೇಳಿರಲಿಲ್ಲ. ಕೆಲ ವರ್ಷಗಳ ಬಳಿಕ ತಮಗೆ ಅನಾರೋಗ್ಯ ಕಾಣಿಸಿಕೊಂಡಿದ್ದರಿಂದ ಗೈರಾಗಿದ್ದಾಗಿ ಇಲಾಖೆಗೆ ಮಾಹಿತಿ ರವಾನಿಸಿದ್ದರು. ಈ ಕುರಿತು ಯಾವುದೇ ಪರಿಶೀಲನೆ ಮಾಡದೇ ಅವರ ಮಾಹಿತಿಯನ್ನು ಸ್ವೀಕರಿಸಲಾಗಿತ್ತು.
ಹೀಗೆ ಕಳೆದ 12 ವರ್ಷಗಳಿಂದ ಪ್ರತಿ ತಿಂಗಳೂ ಅವರ ಖಾತೆಗೆ ವೇತನ ಜಮೆಯಾಗಿದೆ. ಆದರೆ 2023ರಲ್ಲಿ 2023ರಲ್ಲಿ ಪೊಲೀಸ್ ಇಲಾಖೆಯ ದಾಖಲೆ ಮರುಪರಿಶೀಲನೆ ವೇಳೆ ಅಭಿಷೇಕ್ ಸೇವೆಗೆ ಸುದೀರ್ಘ ಗೈರಾಗಿರುವ ವಿಷಯ ಬೆಳಕಿಗೆ ಬಂದಿದೆ. ಬಳಿಕ ಇಲಾಖೆಯಿಂದ ನೋಟಿಸ್ ನೀಡಿದ ಬಳಿಕ ಸಂಬಂಧ ಅಭಿಷೇಕ್ ತಮ್ಮ ತಪ್ಪು ಒಪ್ಪಿಕೊಂಡಿದ್ದು, ಎಲ್ಲಾ ಹಣವನ್ನು ಮರಳಿಸುವುದಾಗಿ ಹೇಳಿದ್ದಾರೆ.
ವಿಮಾನ ಟೇಕಾಫ್ ವೇಳೆ
ಎಂಜಿನ್‌ಗೆ ಸಿಲುಕಿ ಸಾವು
ಮಿಲನ್: ಇಟಲಿಯ ಮಿಲನ್ ಬರ್ಗಾವೊ ವಿಮಾನ ನಿಲ್ದಾಣದಲ್ಲಿ ಟ್ಯಾಕ್ಸಿ ವೇನಲ್ಲಿ ಟೇಕಾಫ್ ಆಗುತ್ತಿದ್ದ ವಿಮಾನದ ಎಂಜಿನ್‌ಗೆ ಸಿಲುಕಿ ವ್ಯಕ್ತಿಯೊಬ್ಬ ಮೃತಪಟ್ಟ ಘಟನೆ ಮಂಗಳವಾರ ಬೆಳಿಗ್ಗೆ ನಡೆದಿದೆ. ನಿಲ್ದಾಣದ ಗ್ರೌಂಡ್ ಸ್ಟಾಫ್ ಮೃತಪಟ್ಟಿದ್ದು, ಅವರು ಸ್ಪೇನ್‌ನ ಅಸ್ಟೂರಿಯಸ್‌ಗೆ ತೆರಳುತ್ತಿದ್ದ ವೊಲೊಟಿಯಾ ವಿಮಾನ ಟೇಕಾಫ್ ಆಗುತ್ತಿದ್ದ ವೇಳೆ ಟಾರ್ಮ್ಯಾಕ್ ಮೇಲೆ ಮತ್ತು ಅದರ ಹಾದಿಯಲ್ಲಿ ಓಡಿಹೋದ ಸಿಬ್ಬಂದಿ ಎಂಜಿನ್‌ಗೆ ಸಿಲುಕಿ ಮೃತ ಪಟ್ಟಿದ್ದಾರೆ. ಈ ವೇಳೆ ವಿಮಾನದಲ್ಲಿ 6 ಸಿಬ್ಬಂದಿ, 2 ಪೈಲಟ್ ,4 ಕ್ಯಾಬಿನ್ ಸಿಬ್ಬಂದಿ ಮತ್ತು 154 ಪ್ರಯಾಣಿಕರಿದ್ದರು. ಅವರೆಲ್ಲರೂ ಸುರಕ್ಷಿತವಾಗಿದ್ದಾರೆ.
ಎಲ್ಲಾ ಭಾಷೆಗಳೂ ರಾಷ್ಟ್ರ
ಭಾಷೆ: ಆರ್‌ಎಸ್‌ಎಸ್
ಒಂದು ಭಾಷೆ ಹೇರಿಕೆ ಬೆಂಬಲಿಸಲ್ಲ: ಸಂಘನವದೆಹಲಿ: ಎಲ್ಲಾ ಭಾರತೀಯ ಭಾಷೆಗಳೂ ರಾಷ್ಟ್ರೀಯ ಭಾಷೆಗಳಾಗಿದ್ದು ಯಾವುದೇ ಒಂದು ಭಾಷೆ ಹೇರಿಕೆಯನ್ನು ತಾನು ಬೆಂಬಲಿಸುವುದಿಲ್ಲ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್‌ಎಸ್‌ಎಸ್) ಹೇಳಿದೆ. ಮಹಾರಾಷ್ಟ್ರ ಮತ್ತು ತಮಿಳುನಾಡಿನಲ್ಲಿ ಈಗ ಸದ್ಯ ನಡೆಯುತ್ತಿರುವ ಭಾಷಾ ವಿವಾದದ ನಡುವೆ ಸಂಘ ತನ್ನ ಘಟಕವೊಂದರಲ್ಲಿ ಸಭೆ ನಡೆಸಿ ಈ ಹೇಳಿಕೆ ನೀಡಿದೆ.ಕೇಂದ್ರ ಸರ್ಕಾರ ರಾಷ್ಟ್ರೀಯ ಶಿಕ್ಷಣ ನೀತಿಯಡಿ (ಎನ್‌ಇಪಿ) ಪ್ರಸ್ತಾಪಿಸಿದ ಶಿಕ್ಷಣದಲ್ಲಿ ತ್ರಿಭಾಷಾ ಸೂತ್ರ ನೀತಿಯಿಂದ ವಿವಾದ ಭುಗಿಲೆದ್ದಿದೆ. ಈ ಮೂಲಕ ಹಿಂದಿಯನ್ನು ಕೇಂದ್ರ ಸರ್ಕಾರ ಹೇರಿಕೆ ಮಾಡುತ್ತಿದೆ ಎಂದು ವಿಪಕ್ಷ ಆರೋಪಿಸಿದೆ.
ವಿಪಕ್ಷಗಳ ಭಾರಿ ವಿರೋಧದ ನಡುವೆ ತ್ರಿಭಾಷಾ ಸೂತ್ರ ಅನುಷ್ಠಾನಕ್ಕೆ ಸಂಬಂಧಿಸಿದ ಎರಡು ನಿರ್ಣಯಗಳನ್ನು ಮಹಾರಾಷ್ಟ್ರ ಸರ್ಕಾರ ರದ್ದುಗೊಳಿಸಿದೆ. ಇದು ಮರಾಠಿಯನ್ನು ದುರ್ಬಲಗೊಳಿಸುವ ಪ್ರಯತ್ನ ಎಂದಿದೆ. ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಸಹ ಹಿಂದಿ ಹೇರಿಕೆಯ ಬಗ್ಗೆ ಬಿಜೆಪಿ ವಿರುದ್ಧ ಕಿಡಿಕಾರಿದ್ದರು.