ಪ್ರಾಣಿಗಳ ನಿಗಾಕ್ಕೆ ಇಟ್ಟ ಕ್ಯಾಮೆರಾದಿಂದ ಮಹಿಳೆಯರ ಮೇಲೆ ನಿಗಾ

KannadaprabhaNewsNetwork |  
Published : Nov 27, 2024, 01:01 AM IST
ಉತ್ತರಾಖಂಡ | Kannada Prabha

ಸಾರಾಂಶ

ಅಭಯಾರಣ್ಯದಲ್ಲಿ ಪ್ರಾಣಿಗಳ ಚಲನವಲನ, ಧ್ವನಿ, ನಡವಳಿಕೆ ಬಗ್ಗೆ ನಿಗಾವಹಿಸಲು ಬಳಸಲಾಗುವ ಕ್ಯಾಮೆರಾ, ಡ್ರೋನ್‌, ಧ್ವನಿಮುದ್ರಕಗಳನ್ನು ಅಧಿಕಾರಿಗಳು ಮಹಿಳೆಯರ ಖಾಸಗಿತನವನ್ನು ಚಿತ್ರೀಕರಿಸಲು ಬಳಸುತ್ತಿರುವ ಆಘಾತಕಾರಿ ಘಟನೆ ಉತ್ತರಾಖಂಡದ ವಿಶ್ವ ವಿಖ್ಯಾತ ಜಿಮ್‌ ಕಾರ್ಬೆಟ್‌ ಅಭಯಾರಣ್ಯದಲ್ಲಿ ನಡೆದಿದೆ.

ಡೆಹ್ರಾಡೂನ್: ಅಭಯಾರಣ್ಯದಲ್ಲಿ ಪ್ರಾಣಿಗಳ ಚಲನವಲನ, ಧ್ವನಿ, ನಡವಳಿಕೆ ಬಗ್ಗೆ ನಿಗಾವಹಿಸಲು ಬಳಸಲಾಗುವ ಕ್ಯಾಮೆರಾ, ಡ್ರೋನ್‌, ಧ್ವನಿಮುದ್ರಕಗಳನ್ನು ಅಧಿಕಾರಿಗಳು ಮಹಿಳೆಯರ ಖಾಸಗಿತನವನ್ನು ಚಿತ್ರೀಕರಿಸಲು ಬಳಸುತ್ತಿರುವ ಆಘಾತಕಾರಿ ಘಟನೆ ಉತ್ತರಾಖಂಡದ ವಿಶ್ವ ವಿಖ್ಯಾತ ಜಿಮ್‌ ಕಾರ್ಬೆಟ್‌ ಅಭಯಾರಣ್ಯದಲ್ಲಿ ನಡೆದಿದೆ.

ಬ್ರಿಟನ್‌ ಮೂಲದ ಕೇಂಬ್ರಿಡ್ಜ್‌ ವಿಶ್ವ ವಿದ್ಯಾಲಯದ ತ್ರಿಶಾಂಕ್‌ ಸಿಮ್ಲೈ ಎಂಬುವರು 14 ತಿಂಗಳು ಕಾಲ ಅಧ್ಯಯನ ನಡೆಸಿ 270 ಮಹಿಳೆಯರೊಂದಿಗೆ ಸಂವಾದ ನಡೆಸಿ ಈ ಮಾಹಿತಿ ಕಲೆಹಾಕಿದ್ದಾರೆ. ಮಹಿಳೆಯರು ಕಾಡಿಗೆ ತೆರಳುವುದರಿಂದ ಹಿಡಿದು ಅವರು ಶೌಚಕ್ಕೆ ಕುಳಿತುಕೊಳ್ಳುವ, ವಿಶ್ರಾಂತಿ ತೆಗೆದುಕೊಳ್ಳುವ ಚಿತ್ರಗಳನ್ನು ಕ್ಯಾಮೆರಾ ಸೆರೆಹಿಡಿದಿದೆ. ಇದಿಷ್ಟೇ ಅರಣ್ಯದಿಂದ ಮಹಿಳೆಯರನ್ನು ಹೊರಗಟ್ಟುವ ಕಾರಣ ಅವರ ತಲೆ ಮೇಲೆ ಡ್ರೋನ್‌ ಹಾರಿಸಿ ಅಧಿಕಾರಿಗಳು ಬೆದರಿಸುತ್ತಿದ್ದಾರೆ ಎಂಬ ಸಂಗತಿ ಹೊರಬಂದಿದೆ.

ಪರಿಣಾಮ:

ಕಾಡಿನಲ್ಲಿ ಓಡಾಡಲು ಸುಲಭವಾಗಲು ತಾವು ಸಾಂಪ್ರದಾಯಿಕವಾಗಿ ಮೊಣಕಾಲಿನವರೆಗೆ ಸೀರೆ ಉಡುವ ವಿಧಾನವನ್ನು ಮಹಿಳೆಯರು ತ್ಯಜಿಸಿ ಪೂರ್ತಿ ಕಾಲು ಮುಚ್ಚುವ ಬಟ್ಟೆ ಧರಿಸುತ್ತಿದ್ದಾರೆ. ಕೆಲವೊಮ್ಮೆ ಡ್ರೋನ್‌ಗಳಿಗೆ ಅಂಜಿ ಮಹಿಳೆಯರು ದಟ್ಟ ಕಾಡಿನ ಮಧ್ಯೆ ಹೋಗುತ್ತಾರೆ. ಇದರಿಂದ ಪ್ರಾಣಿಗಳಿಂದ ದಾಳಿಗೆ ಹತ್ತಿರವಾಗುತ್ತಿದ್ದಾರೆ ಎಂದು ವರದಿ ಹೇಳಿದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಅಮೆರಿಕ ಆರ್ಥಿಕತೆಗೆ ಏಟು ನೀಡಲು ದುಬೈಗೆ ಇರಾನ್‌ ಭಾರಿ ದಾಳಿ
ಭಾರತಕ್ಕೆ ಬೇಕಿದ್ದ ಪಾಕ್‌ ಉಗ್ರ ಅನಾಮಿಕ ವ್ಯಕ್ತಿ ಗುಂಡಿಗೆ ಬಲಿ